ಡಿವೋರ್ಸ್ ವಿಚಾರ, ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಶುಭಾ ಪೂಂಜಾ

Published : Jun 10, 2026, 12:06 PM IST

ನಟಿ ಶುಭಾ ಪೂಂಜಾ ಡಿವೋರ್ಸ್ ವಿಷ್ಯ ಸದ್ಯ ಸುದ್ದಿಯಲ್ಲಿದೆ. ಶುಭಾ ಪೂಂಜಾ ಹಾಗೂ ಅವ ಪತಿ ಸುಮಂತ್ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ನಟಿ ಶುಭಾ ಪೂಂಜಾ ಈಗ ಸ್ಪಷ್ಟನೆ ನೀಡಿದ್ದಾರೆ. 

PREV
15
ಶುಭಾ ಪೂಂಜಾ ಡಿವೋರ್ಸ್ ಸ್ಪಷ್ಟನೆ

ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜಾ ದಾಂಪತ್ಯ ಬಿರುಕು ಬಿಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಷ್ಯ. ಮೂರು ದಿನಗಳ ಹಿಂದೆ ಶುಭಾ ಹಾಗೂ ಅವರಪತಿ ಸುಮಂತ್, ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಅಂತ ಮಾಧ್ಯಮಗಳು ವರದಿ ಮಾಡಿದ್ದವು. ತಮ್ಮ ಡಿವೋರ್ಸ್ ಬಗ್ಗೆ ಈವರೆಗೆ ಶುಭಾ ಯಾವುದೇ ಹೇಳಿಕೆ ನೀಡಿರಲಿಲ್ಲ. ಈಗ ಸೋಶಿಯಲ್ ಮೀಡಿಯಾ ಮೂಲಕ ಈ ಬಗ್ಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ.

25
ಶುಭಾ ಪೂಂಜಾ ಹೇಳಿದ್ದೇನು?

ಸೋಶಿಯಲ್ ಮೀಡಿಯಾದಲ್ಲಿ ಶುಭಾ ಪೂಂಜಾ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಇದ್ರಲ್ಲಿ ಶುಭಾ, ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ತಮ್ಮ ಜೀವನದಲ್ಲಿ ಏನಾಗ್ತಿದೆ ಎಂಬುದನ್ನು ನಾನೇ ಖುದ್ದಾಗಿ ಹೇಳ್ತೇನೆ ಎಂದಿದ್ದಾರೆ.

35
ಶುಭಾ ಪೂಂಜಾ ಪೋಸ್ಟ್

ನನ್ನೆಲ್ಲಾ ಆತ್ಮೀಯ ಮಾಧ್ಯಮ ಮಿತ್ರರಿಗೆ ನಮಸ್ಕಾರಗಳು. ನಾನು ಚಿತ್ರರಂಗಕ್ಕೆ ಕಾಲಿಟ್ಟ ದಿನದಿಂದ ಇಂದಿನವರೆಗೂ ನನ್ನನ್ನು ಬೆಂಬಲಿಸುತ್ತಾ, ಪ್ರೋತ್ಸಾಹಿಸುತ್ತಾ ಬಂದಿದ್ದೀರಿ. ಇದೀಗ ನಾನು ಕೇಳಿಕೊಳ್ಳುವುದು ಇಷ್ಟೇ ಸಮಯ ಬಂದಾಗ ನನ್ನ ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ವಿಷಯದ ಬಗ್ಗೆ ನಾನೇ ನಿಮಗೆ ಖುದ್ದಾಗಿ ತಿಳಿಸುತ್ತೇನೆ. ಅಲ್ಲಿಯವರೆಗೂ ನನಗೂ ಹಾಗೂ ಸುಮಂತ್ ಅವರಿಗೂ ಸ್ವಲ್ಪ ಸಮಯಾವಕಾಶ ಕೊಡಿ ಅಂತ ಮನವಿ ಮಾಡುತ್ತೇನೆ.

45
ಅಭಿಮಾನಿಗಳ ಬೆಂಬಲ

ಶುಭಾ ಪೂಂಜಾ ಕೆಲವೇ ನಿಮಿಷದ ಹಿಂದೆ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಶುಭಾ ಪೋಸ್ಟ್ ಗೆ ಬೆಂಬಲ ನೀಡಿದ್ದಾರೆ. ನೀವು ಯಾವುದೇ ನಿರ್ಧಾರ ತೆಗೆದುಕೊಂಡ್ರೂ ನಾವು ನಿಮ್ಮ ಜೊತೆ ಇರ್ತೇವೆ ಅಂತ ಅಭಿಮಾನಿಗಳು ತಿಳಿಸಿದ್ದಾರೆ.

55
ಮದುವೆಯಾಗಿ ನಾಲ್ಕು ವರ್ಷ

ಶುಭಾ ಪೂಂಜಾ ಹಾಗೂ ಸುಮಂತ್ ಮದುವೆಯಾಗಿ ನಾಲ್ಕು ವರ್ಷ ಕಳೆದಿದೆ. ಇಬ್ಬರ ಮಧ್ಯೆ ಎಲ್ಲವೂ ಸರಿ ಇಲ್ಲ ಅಂತ ಈ ಹಿಂದೆ ಶುಭಾ ಪರೋಕ್ಷವಾಗಿ ತಮ್ಮ ನೋವು ತೋಡಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories