ಭಿಕ್ಷುಕ ಎಂದು ರಜನಿಕಾಂತ್‌ಗೆ 10 ರೂ. ಕೊಟ್ಟಿದ್ದ ಮಹಿಳೆ ಈ ನಟ ಕಾರು ಹತ್ತಿ ಹೊರಟಾಗ ಕಾಲು ಹಿಡಿದು ಹೇಳಿದ್ದೇನು?

Published : Jun 10, 2026, 11:41 AM IST

ಬಿಳಿ ಪಂಚೆ, ಶರ್ಟ್ ಧರಿಸಿ, ಗಡ್ಡ ಬಿಟ್ಟುಕೊಂಡು ಅತ್ಯಂತ ಸರಳವಾಗಿ ಮೆಟ್ಟಿಲ ಮೇಲೆ ಕುಳಿತಿರುವ ವ್ಯಕ್ತಿ ಸೂಪರ್ ಸ್ಟಾರ್ ರಜನಿಕಾಂತ್ ಎಂದು ತಿಳಿಯುವುದಿಲ್ಲ ಆ ಮಹಿಳೆಗೆ ಗೊತ್ತಿಲ್ಲ. ಯಾರೋ ಪಾಪದ ವ್ಯಕ್ತಿ, ಭಿಕ್ಷುಕ ಎಂದು ತಮ್ಮ ಬಳಿಯಿದ್ದ 10 ರೂಪಾಯಿಯನ್ನು ರಜನಿಕಾಂತ್‌ಗೆ ಕೊಡುತ್ತಾರೆ. 

PREV
16

ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭಿಕ್ಷುಕ ಎಂದು ತಿಳಿದು ರೂ.10 ಭಿಕ್ಷೆ ಹಾಕಿದ್ದ ಮಹಿಳೆ ಎಲ್ಲಿ ಮತ್ತು ಯಾವಾಗ ಗೊತ್ತಾ?

ರಜನಿಕಾಂತ್ (Rajinikanth) ಎಂದರೆ ಕೇವಲ ಒಂದು ಹೆಸರಲ್ಲ, ದಕ್ಷಿಣ ಭಾರತದ ಪಾಲಿಗೆ ಅದೊಂದು ದೊಡ್ಡ ಶಕ್ತಿ. ತೆರೆಯ ಮೇಲೆ ಅವರು ಎಂಟ್ರಿ ಕೊಟ್ಟರೆ ಸಾಕು, ಚಿತ್ರಮಂದಿರದಲ್ಲಿ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಹರಿಯುತ್ತದೆ. ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವಾಗಿರುವ 'ತಲೈವಾ', ಬೆಳ್ಳಿಪರದೆಯ ಮೇಲೆ ಎಷ್ಟೇ ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ, ನಿಜ ಜೀವನದಲ್ಲಿ ಅವರು ಎಂತಹ ಸರಳ ಜೀವಿ ಎಂಬುದಕ್ಕೆ ಅವರ ಬದುಕಿನ ಅನೇಕ ಘಟನೆಗಳೇ ಸಾಕ್ಷಿ. ಅಂತಹ ಘಟನೆಗಳಲ್ಲಿ ಅತ್ಯಂತ ರೋಚಕವಾದ ಮತ್ತು ಪ್ರತಿಯೊಬ್ಬರಿಗೂ ಜೀವನದ ಬಹುದೊಡ್ಡ ಪಾಠವನ್ನು ಕಲಿಸುವಂತಹ ಒಂದು ಪ್ರಸಂಗವಿದು.

26

ಬೆಳ್ಳಿಪರದೆಯ ಮೇಲೆ ಮಿನುಗುವ ತಾರೆಯಾಗಿರುವ ರಜನಿಕಾಂತ್, ತಮ್ಮ ಸಿನಿಮಾ ಬಿಡುಗಡೆಯಾದಾಗ ಅಥವಾ ಭಾರಿ ಯಶಸ್ಸು ಕಂಡಾಗ ಆಧ್ಯಾತ್ಮದ ಮೊರೆ ಹೋಗುವುದು, ಹಿಮಾಲಯಕ್ಕೆ ಭೇಟಿ ನೀಡುವುದು ಅಥವಾ ಸಾಮಾನ್ಯರಂತೆ ದೇವಸ್ಥಾನಗಳಿಗೆ ಭೇಟಿ ನೀಡುವುದು ಅವರ ದಶಕಗಳ ರೂಢಿ.

ಅದು 'ಶಿವಾಜಿ' ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದ ಸಮಯ. ಸಿನಿಮಾ ಸೂಪರ್ ಹಿಟ್ ಆದ ಖುಷಿಯಲ್ಲಿ ರಜನಿಕಾಂತ್ ಅವರು ದೇವಸ್ಥಾನವೊಂದಕ್ಕೆ ಭೇಟಿ ನೀಡಲು ನಿರ್ಧರಿಸುತ್ತಾರೆ. ಆದರೆ, ಸೂಪರ್ ಸ್ಟಾರ್ ಆಗಿ, ತಮ್ಮ ಸುತ್ತಮುತ್ತ ನೂರಾರು ಬೌನ್ಸರ್‌ಗಳು, ಭದ್ರತಾ ಸಿಬ್ಬಂದಿಯೊಂದಿಗೆ ದೇವಸ್ಥಾನಕ್ಕೆ ಹೋದರೆ, ಅಲ್ಲಿನ ಭಕ್ತರಿಗೆ ತೊಂದರೆಯಾಗುತ್ತದೆ ಮತ್ತು ಜನಸಂದಣಿ ಸೇರಿ ಗದ್ದಲ ಉಂಟಾಗುತ್ತದೆ ಎಂಬುದು ಅವರಿಗೆ ತಿಳಿದಿತ್ತು. ದೇವರ ಸನ್ನಿಧಿಯಲ್ಲಿ ತಾನು ಕೇವಲ ಒಬ್ಬ ಸಾಮಾನ್ಯ ಭಕ್ತನಾಗಿ ಹೋಗಬೇಕು ಎಂಬ ಉದ್ದೇಶದಿಂದ ಅವರು ಒಂದು ಮಹತ್ವದ ನಿರ್ಧಾರ ಮಾಡಿದರು.

36

ಯಾವುದೇ ಆಡಂಬರವಿಲ್ಲದೆ, ಅತ್ಯಂತ ಸರಳವಾದ ಬಿಳಿ ಬಣ್ಣದ ಪಂಚೆ ಮತ್ತು ಶರ್ಟ್ ಧರಿಸಿ, ಮುಖಕ್ಕೆ ಯಾವುದೇ ವಿಶೇಷ ಅಲಂಕಾರವಿಲ್ಲದೆ, ಒಬ್ಬಂಟಿಯಾಗಿ, ಸಾಮಾನ್ಯರಲ್ಲಿ ಸಾಮಾನ್ಯನಂತೆ ಆ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವರ ದರ್ಶನವನ್ನು ಮುಗಿಸಿದ ನಂತರ, ದೇವಸ್ಥಾನದ ಹೊರಗಿನ ಮೆಟ್ಟಿಲುಗಳ ಮೇಲೆ ಅತ್ಯಂತ ಪ್ರಶಾಂತವಾಗಿ, ಮೌನವಾಗಿ ಸ್ವಲ್ಪ ಹೊತ್ತು ಕುಳಿತುಕೊಂಡರು.

ಆಗ ಅಲ್ಲಿಗೆ ಒಬ್ಬರು ವಯಸ್ಸಾದ ಮಹಿಳೆ ಬರುತ್ತಾರೆ. ಆ ಮಹಿಳೆಗೆ ಮೆಟ್ಟಿಲ ಮೇಲೆ ಕುಳಿತಿರುವ ವ್ಯಕ್ತಿ ದಕ್ಷಿಣ ಭಾರತದ ಅತಿದೊಡ್ಡ ಸೂಪರ್ ಸ್ಟಾರ್ ರಜನಿಕಾಂತ್ ಎಂದು ತಿಳಿಯುವುದಿಲ್ಲ. ಬಿಳಿ ಪಂಚೆ, ಶರ್ಟ್ ಧರಿಸಿ, ಗಡ್ಡ ಬಿಟ್ಟುಕೊಂಡು ಅತ್ಯಂತ ಸರಳವಾಗಿ ಕುಳಿತಿದ್ದ ಅವರನ್ನು ನೋಡಿದ ಆ ಮಹಿಳೆ, ಯಾರೋ ಪಾಪದ ವ್ಯಕ್ತಿ, ಭಿಕ್ಷುಕ ಎಂದು ಭಾವಿಸುತ್ತಾರೆ. ಮರುಕಗೊಂಡು ತಮ್ಮ ಬಳಿಯಿದ್ದ 10 ರೂಪಾಯಿ ನೋಟನ್ನು ತೆಗೆದು ರಜನಿಕಾಂತ್ ಅವರ ಕೈಗಿಡುತ್ತಾರೆ.

46

ಆಗ ರಜನಿಕಾಂತ್ ಅವರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ತಾನೊಬ್ಬ ಕೋಟ್ಯಾಧಿಪತಿ, ಸೂಪರ್ ಸ್ಟಾರ್, ನನಗೆ ಈಕೆ 10 ರೂಪಾಯಿ ಭಿಕ್ಷೆ ನೀಡುತ್ತಿದ್ದಾಳಲ್ಲ ಎಂಬ ಯಾವುದೇ ಅಹಂಕಾರ ಅವರಲ್ಲಿ ಬರಲಿಲ್ಲ. ಬದಲಾಗಿ, ಆ ಮಹಿಳೆ ನೀಡಿದ 10 ರೂಪಾಯಿಯನ್ನು ಅತ್ಯಂತ ಪ್ರೀತಿಯಿಂದ, ಮುಖದಲ್ಲಿ ಒಂದು ಸಣ್ಣ ನಗುವಿನೊಂದಿಗೆ ಎರಡು ಕೈಗಳಿಂದ ಸ್ವೀಕರಿಸಿದರು.

ಸ್ವಲ್ಪ ಸಮಯದ ನಂತರ, ರಜನಿಕಾಂತ್ ಅವರು ಮೆಟ್ಟಿಲಿನಿಂದ ಎದ್ದು ತಮ್ಮ ಕಾರಿನತ್ತ ಹೆಜ್ಜೆ ಹಾಕಲಾರಂಭಿಸಿದರು. ದೇವಸ್ಥಾನದ ಹೊರಗೆ ಅವರಿಗಾಗಿ ಕಾಯುತ್ತಿದ್ದ ಐಷಾರಾಮಿ ಕಾರು ಮತ್ತು ಅವರ ಬಳಿ ಅತ್ಯಂತ ಗೌರವದಿಂದ ವರ್ತಿಸುತ್ತಿದ್ದ ಜನರನ್ನು ನೋಡಿದ ಆ ವಯಸ್ಸಾದ ಮಹಿಳೆಗೆ ಆಘಾತವಾಗುತ್ತದೆ! ತಾನು ಭಿಕ್ಷುಕನೆಂದು ತಿಳಿದು 10 ರೂಪಾಯಿ ಕೊಟ್ಟ ವ್ಯಕ್ತಿ ಸಾಮಾನ್ಯರಲ್ಲ, ಅವರು ಕೋಟ್ಯಂತರ ಜನರ ಆರಾಧ್ಯ ದೈವ ರಜನಿಕಾಂತ್ ಎಂಬ ಸತ್ಯ ಆಕೆಗೆ ಅರಿವಾಗುತ್ತದೆ.

56

ತಕ್ಷಣವೇ ಆತಂಕ ಮತ್ತು ಮುಜುಗರದಿಂದ ರಜನಿಕಾಂತ್ ಅವರ ಬಳಿ ಓಡಿಬಂದ ಆ ಮಹಿಳೆ, "ನನ್ನನ್ನು ಕ್ಷಮಿಸಿಬಿಡಿ. ದಯವಿಟ್ಟು ಕ್ಷಮಿಸಿ. ನೀವು ಯಾರೆಂದು ನನಗೆ ನಿಜಕ್ಕೂ ಗೊತ್ತಿರಲಿಲ್ಲ. ನಾನೇನೋ ತಪ್ಪು ಮಾಡಿದೆ, ಕ್ಷಮಿಸಿ" ಎಂದು ಬೇಡಿಕೊಳ್ಳುತ್ತಾರೆ.

ಆಗ ಸೂಪರ್ ಸ್ಟಾರ್ ರಜನಿಕಾಂತ್ ಅವರು ಆ ಮಹಿಳೆಗೆ ಹೇಳಿದ ಮಾತು ಪ್ರತಿಯೊಬ್ಬ ಮನುಷ್ಯನೂ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ದೊಡ್ಡ ಪಾಠವಾಗಿದೆ.

ಮಹಿಳೆಯನ್ನು ಸಮಾಧಾನಪಡಿಸಿದ ರಜನಿಕಾಂತ್, "ಅಮ್ಮಾ, ನೀವು ಯಾವುದೇ ಕಾರಣಕ್ಕೂ ನನ್ನಲ್ಲಿ ಕ್ಷಮೆ ಕೇಳಬೇಡಿ. ವಾಸ್ತವವಾಗಿ ಇದು ಭಗವಂತನೇ ನನಗೆ ನೆನಪಿಸುತ್ತಿರುವ ಒಂದು ಅದ್ಭುತವಾದ ಪಾಠ. ನಾನು ಅಸಲಿಗೆ ಯಾರು ಎಂಬುದನ್ನು ದೇವರು ನಿಮ್ಮ ಮೂಲಕ ನನಗೆ ತಿಳಿಸಿದ್ದಾನೆ. ಭಗವಂತನ ಎದುರು ನಾವೆಲ್ಲರೂ ಕೇವಲ ಭಿಕ್ಷುಕರು ಅಷ್ಟೇ. ಆತನ ದರ್ಬಾರಿನಲ್ಲಿ ನಮ್ಮ ಯೋಗ್ಯತೆ, ನಮ್ಮ ಅಂತಸ್ತು, ನಮ್ಮ ಹಣ ಯಾವುದಕ್ಕೂ ಬೆಲೆಯಿಲ್ಲ. ಎಲ್ಲರೂ ಒಂದೇ."

66

ಮುಂದುವರಿದು ಮಾತನಾಡಿದ ಅವರು, "ನನಗೆ ಯಾವುದೇ ಅಹಂಕಾರ, ಗರ್ವ ಬಾರದಂತೆ ತಡೆಯಲು ಭಗವಂತನೇ ನಿಮ್ಮ ಮೂಲಕ ನನಗೆ ಈ ಸಂದೇಶವನ್ನು ಕಳುಹಿಸಿದ್ದಾನೆ. ನೀವು ನೀಡಿದ ಈ 10 ರೂಪಾಯಿ ನನಗೆ ಕೇವಲ ಹಣವಲ್ಲ, ಇದು ಸಾಕ್ಷಾತ್ ಭಗವಂತನೇ ನನಗೆ ನೀಡಿದ ಆಶೀರ್ವಾದ" ಎಂದು ಅತ್ಯಂತ ವಿನಮ್ರವಾಗಿ ಉತ್ತರಿಸುತ್ತಾರೆ.

ತಮ್ಮ ಬಳಿ ಕೋಟ್ಯಂತರ ರೂಪಾಯಿ ಸಂಪತ್ತಿದ್ದರೂ, ಆ ಮಹಿಳೆ ನೀಡಿದ ಆ 10 ರೂಪಾಯಿಯನ್ನು ರಜನಿಕಾಂತ್ ಅವರು ತಮ್ಮ ಜೀವನದ ಬಹುದೊಡ್ಡ ಆಶೀರ್ವಾದ ಎಂದು ಭಾವಿಸಿ, ಅದನ್ನು ಕೊನೆಯವರೆಗೂ ತಮ್ಮ ಬಳಿಯೇ ಅತ್ಯಂತ ಜತನದಿಂದ ಕಾಪಾಡಿಕೊಳ್ಳುವುದಾಗಿ ಹೇಳುತ್ತಾರೆ. ಇಂದಿಗೂ ಆ 10 ರೂಪಾಯಿ ರಜನಿಕಾಂತ್ ಅವರ ಬಳಿ ಒಂದು ಪವಿತ್ರ ಸ್ಮರಣಿಕೆಯಾಗಿ ಉಳಿದಿದೆ.

ಈ ಒಂದು ಘಟನೆ ಸಾಕು, ರಜನಿಕಾಂತ್ ಅವರನ್ನು ಜನರು ಕೇವಲ ಅವರ ಸಿನಿಮಾಗಳಿಗಾಗಿ ಮಾತ್ರವಲ್ಲ, ಅವರ ಈ ಸರಳತೆ, ವಿನಯತೆ ಮತ್ತು ಶ್ರೇಷ್ಠ ವ್ಯಕ್ತಿತ್ವಕ್ಕಾಗಿ ಯಾಕೆ ಇಷ್ಟೊಂದು ಆರಾಧಿಸುತ್ತಾರೆ ಎಂದು ಅರ್ಥಮಾಡಿಕೊಳ್ಳಲು. ಎತ್ತರಕ್ಕೆ ಬೆಳೆದಷ್ಟೂ ವಿನಮ್ರವಾಗಿರಬೇಕು ಎಂಬುದಕ್ಕೆ ತಲೈವಾ ರಜನಿಕಾಂತ್ ಅವರೇ ಜೀವಂತ ಉದಾಹರಣೆ.

ಕೃಪೆ: ವಿವಿಧ ವಿಸ್ಮಯ (ಪೇಸ್‌ಬುಕ್ ಪೇಜ್) 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories