ನಿರ್ದೇಶಕ ರಾಜ್ ಜೊತೆ ಪ್ರೇಮ ಸಂಬಂಧ, ಮುಂಬೈನಲ್ಲಿ ಕಾಣಿಸಿಕೊಂಡ ಸಮಂತಾ!

First Published | Aug 17, 2024, 1:46 PM IST

ನಟಿ ಸಮಂತಾ ಮಾಜಿ ಪತಿ ನಾಗ ಚೈತನ್ಯ ಶೋಭಿತಾ ಜೊತೆ ನಿಶ್ಛಿತಾರ್ಥ ಮಾಡಿಕೊಂಡ ಬಳಿಕ, ಬಾಲಿವುಡ್ ಮಾಧ್ಯಮಗಳು ಹಿಂಬಾಲಿಸುತ್ತಿವೆ. ನಿರ್ದೇಶಕ ರಾಜ್ ಅವರೊಂದಿಗೆ ಅವರು ಪ್ರೇಮ ಸಂಬಂಧದಲ್ಲಿದ್ದಾರೆ ಎಂಬ ವದಂತಿಯೂ ಹಬ್ಬುತ್ತಿದ್ದು, ಮುಂಬೈನಲ್ಲಿ ಕಾಣಿಸಿಕೊಂಡಿದ್ದು ಊಹಾಪೋಹಗಳಿಗೆ ರೆಕ್ಕೆ ಪುಕ್ಕ ಹುಟ್ಟಿಕೊಂಡಂತಾಗಿದೆ.
 

ಸಮಂತಾ

ನಟ ನಾಗ ಚೈತನ್ಯ ಅವರೊಂದಿಗೆ ಸಮಂತಾ ವಿಚ್ಛೇದನ ಪಡೆದು ಸುಮಾರು ಮೂರು ವರ್ಷಗಳಾಗಿದೆ. 2021ರ ಅಕ್ಟೋಬರ್‌ನಲ್ಲಿ ಪರಸ್ಪರ ಒಪ್ಪಂದದೊಂದಿಗೆ ವಿಚ್ಛೇದನ ಪಡೆಯುತ್ತಿದ್ದನ್ನು ಒಟ್ಟಾಗಿಯೇ, ಒಂದೇ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಘೋಷಿಸಿಕೊಂಡಿದ್ದರು. ಅವಾಗಿನಿಂದಲೂ ಸಮಂತಾ ಸಿಂಗಲ್ ಸ್ಟೇಟಸ್ ಹಾಕಿ ಕೊಂಡಿದ್ದಾರೆ. ನಟಿ ಶೋಭಿತಾ ಧೂಳಿಪಾಲಾ ಅವರೊಂದಿಗೆ ಪ್ರೇಮ ಸಂಬಂಧದ ವದಂತಿಗಳ ಬೆನ್ನಲ್ಲೇ ನಾಗ ಚೈತನ್ಯ ಇತ್ತೀಚೆಗೆ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ನಾಗ ಚೈತನ್ಯ ಎರಡನೇ ಮದುವೆಗೆ ಸಿದ್ಧರಾದ ವಾರದೊಳಗೆ ಸಮಂತಾಗೆ ಇರೋ ಸಂಬಂಧದ ಬಗ್ಗೆಯೂ ಗುಲ್ಲೆಬ್ಬುತ್ತಿದೆ. ನಿರ್ದೇಶಕ ರಾಜ್ ನಿಡಿಮೋರು-ಸಮಂತಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಇತ್ತೀಚಿನ ಬಿಸಿ ಬಿಸಿ ಸುದ್ದಿ. ಬಾಲಿವುಡ್‌ನಲ್ಲಿ ಈ ವದಂತಿ ಕಾಡ್ಗಿಚ್ಚಿನಂತೆ ಹರಡುತ್ತಿದೆ. ದಿ ಫ್ಯಾಮಿಲಿ ಮ್ಯಾನ್, ದಿ ಫ್ಯಾಮಿಲಿ ಮ್ಯಾನ್ 2, ಫರ್ಜಿ ಇತ್ಯಾದಿ ಯಶಸ್ವಿ ಸರಣಿಗಳನ್ನು ನಿರ್ದೇಶಿಸಿದ ರಾಜ್ ಮತ್ತು ಡಿಕೆ ಭಾರತದಾದ್ಯಂತ ಜನಪ್ರಿಯತೆ ಗಳಿಸಿದ್ದಾರೆ. 

Tap to resize

ರಾಜ್ ಮತ್ತು ಡಿಕೆ ತೆಲುಗುನವರೇ ಆಗಿದ್ದು, ಇವರಲ್ಲಿ ಒಬ್ಬರೊಂದಿಗೆ ಸಮಂತಾ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ. ಆದರೆ, ಯಾರೊಟ್ಟಿಗೆ ಎನ್ನುವುದು ಕನ್ಫರ್ಮ್ ಆಗಿಲ್ಲ. ದಿ ಫ್ಯಾಮಿಲಿ ಮ್ಯಾನ್ 2ರಲ್ಲಿ ಸಮಂತಾ ನಟಿಸಿದ್ದರು. ಅವರು ಶ್ರೀಲಂಕಾ ಮೂಲದ ತಮಿಳು ಬಂಡುಕೋರ ಪಾತ್ರವನ್ನು ನಿರ್ವಹಿಸಿದ್ದರು. ರಾಜ್ ಮತ್ತು ಡಿಕೆ ನಿರ್ದೇಶನದಲ್ಲಿ ಸಮಂತಾ ಮತ್ತೊಂದು ಸರಣಿ ಮಾಡುತ್ತಿದ್ದಾರೆ. ಹನಿ ಬನ್ನಿ ಶೀರ್ಷಿಕೆಯ ಈ ಸರಣಿ ಬಿಡುಗಡೆಗೆ ಸಿದ್ಧವಾಗಿದ್ದು, ಹಾಲಿವುಡ್ ಸರಣಿ ಸಿಟಾಡೆಲ್‌ನ ಹಿಂದಿ ಆವೃತ್ತಿ ಹನಿ ಬನ್ನಿ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಹನಿ ಬನ್ನಿ ನವೆಂಬರ್ 7 ರಂದು ಪ್ರೈಮ್‌ನಲ್ಲಿ ಸ್ಟ್ರೀಮ್ ಆಗಲಿದೆ. 
 

ಚಿತ್ರೀಕರಣದ ಭಾಗವಾಗಿ ರಾಜ್-ಸಮಂತಾ ಈಗ್ಗೆ ಕೆಲವು ದಿನಗಳಿಂದ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪರಿಚಯವೇ ಪ್ರೇಮಕ್ಕೆ ತಿರುಗಿದೆ ಎಂಬುವುದು ಬಾಲಿವುಡ್‌ನ ಮಾತು. ಈ ವದಂತಿ ಹಿನ್ನೆಲೆಯಲ್ಲಿ ಸಮಂತಾ ಮುಂಬೈನಲ್ಲಿ ಕಾಣಿಸಿಕೊಂಡಿದ್ದು, ಸಮಂತಾ ಅವರನ್ನು ಪಾಪಿರಾಜಿಗಳು ಸೆರೆ ಹಿಡಿದಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿವೆ. 

Pic Credit: Yogen Shah

ಸಮಂತಾ ಇತ್ತೀಚೆಗೆ ನಿರ್ಮಾಪಕಿಯಾಗಿಯೂ ತಮ್ಮ ಲಕ್ ಪರೀಕ್ಷಿಸುತ್ತಿದ್ದಾರೆ. ಟ್ರೋಲ್ಸ್ ಮೂವಿಂಗ್ ಪಿಕ್ಚರ್ಸ್ ಹೆಸರಲ್ಲಿ ಬ್ಯಾನರ್ ಸ್ಥಾಪಿಸಿದ್ದು, ಮೊದಲ ಚಿತ್ರವಾಗಿ 'ಮಾ ಇಂಟಿ ಬಂಗಾರಂ' ಘೋಷಿಸಲಾಗಿದೆ. ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಮಾ ಇಂಟಿ ಬಂಗಾರಂ' ಚಿತ್ರದಲ್ಲಿ ಅವರ ಲುಕ್ ಗಮನ ಸೆಳೆದಿದೆ. ಇನ್ನು ರಾಜ್ ಜೊತೆಗಿನ ಪ್ರೇಮ ಸಂಬಂಧದ ವದಂತಿ ಬಗ್ಗೆ ಸಮಂತಾ ಪ್ರತಿಕ್ರಿಯಿಸಿಲ್ಲ.  

Latest Videos

click me!