ಆಗರ್ಭ ಶ್ರೀಮಂತ ಉದ್ಯಮಿಗಳನ್ನ ಮದ್ವೆಯಾದ ಬಾಲಿವುಡ್ ಸ್ಟಾರ್ ನಟಿಯರಿವರು…

Published : Aug 17, 2024, 11:19 AM IST

ಬಾಲಿವುಡ್ ನಲ್ಲಿ ಜನಪ್ರಿಯತೆ ಗಳಿಸಿರುವ ಕೆಲವು ಸೂಪರ್ ಸ್ಟಾರ್ ನಟಿಯರು, ಮದುವೆಯಾಗಿರೋದು ಸಾಮಾನ್ಯ ವ್ಯಕ್ತಿಗಳನ್ನ ಅಲ್ವೇ ಅಲ್ಲ. ಆಗರ್ಭ ಶ್ರೀಮಂತರನ್ನ ಮದುವೆಯಾಗಿರುವ ಆ ನಟಿಯರು ಯಾರ್ಯಾರು ಅನ್ನೋದನ್ನ ನೋಡೋಣ.   

PREV
17
ಆಗರ್ಭ ಶ್ರೀಮಂತ  ಉದ್ಯಮಿಗಳನ್ನ ಮದ್ವೆಯಾದ ಬಾಲಿವುಡ್ ಸ್ಟಾರ್ ನಟಿಯರಿವರು…

ಶಿಲ್ಪಾ ಶೆಟ್ಟಿ, ಜೂಹಿ ಚಾವ್ಲಾ, ಸೋನಂ ಕಪೂರ್ ಇವರೆಲ್ಲರೂ ಬಾಲಿವುಡ್ ನ ಶ್ರೀಮಂತ ನಟಿಯರು ಹೌದು, ಹಾಗಂತ ಇವರು ಮದುವೆ ಆಗಿರೋದೆನೂ ಕಡಿಮೆ ಹಣ ಇರೋರನ್ನ ಅಲ್ಲ. ಕೋಟ್ಯಾಂತರ ರೂಪಾಯಿಗಳ ನೆಟ್ ಮೌಲ್ಯ ಹೊಂದಿರುವ ಆಗರ್ಭ ಶ್ರೀಮಂತ ಉದ್ಯಮಿಗಳನ್ನು (richest business tycoon) ಇವರು ಮದುವೆಯಾಗಿದ್ದಾರೆ. 
 

27

ಈ ಸ್ಟಾರ್ ನಟಿಯರ ಪತಿಯರಲ್ಲಿ ಒಬ್ಬರು ಮೆಹ್ತಾ ಗ್ರೂಪ್ ಚೇರ್ ಮೆನ್ ಆಗಿದ್ದರೆ, ಇನ್ನೊಬ್ಬರು ಎಕ್ಸ್’ಪೋರ್ಟ್ ಕಂಪನಿಯ ಮಾಲೀಕರು ಹೌದು, ಮತ್ತೊಬ್ಬರು 53ಸಾವಿರ ಕೋಟಿ ಮೌಲ್ಯದ ಕುಟುಂಬ ಆಸ್ತಿಯನ್ನು ಸಹ ಹೊಂದಿದ್ದಾರೆ. ಇವರ ಬಗ್ಗೆ ಡಿಟೇಲ್ ಆಗಿ ತಿಳಿಯೋಣ ಬನ್ನಿ. 
 

37

ಶಿಲ್ಪಾ ಶೆಟ್ಟಿ : ಬಾಲಿವುಡ್ ನ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಸ್ವತಃ ಹಲವು ಹೊಟೇಲ್ ಗಳನ್ನು ಹೊಂದಿದ್ದಾರೆ. ಆದರೆ ಇವರ ಪತಿ ಕೋಟ್ಯಾಧಿಪತಿ ಅನ್ನೋದನ್ನ ಮರೆಯುವಂತಿಲ್ಲ. ಶಿಲ್ಪಾ ಪತಿ ರಾಜ್ ಕುಂದ್ರಾ ಲಂಡನ್ ನ ದೊಡ್ಡ ಬ್ಯುಸಿನೆಸ್ ಮೆನ್. ಇವರ ನೆಟ್ ವರ್ತ್ 2800 ಕೋಟಿ. 
 

47

ಜೂಹಿ ಚಾವ್ಲಾ : ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಮಿಂಚಿದ ನಟಿ ಜೂಹಿ ಚಾವ್ಲಾ (Juhi Chawla) ಪತಿ ಜೈ ಮೆಹ್ತಾ ಅವರು ದ ಮೆಹ್ತಾ ಗ್ರೂಪ್ ಚೇರ್ ಮೆನ್ ಆಗಿದ್ದಾರೆ. ಇವರು 4200 ಕೋಟಿಯ ಒಡೆಯರಾಗಿದ್ದಾರೆ. ಹಣಕ್ಕೋಸ್ಕರ ಜೂಹಿ ಜೈ ಮೆಹ್ತಾರನ್ನು ಮದುವೆಯಾಗಿದ್ದರು ಅನ್ನೋ ಸುದ್ದಿ ಕೂಡ ಒಂದು ಸಮಯದಲ್ಲಿ ಓಡಾಡ್ತಿತ್ತು. 
 

57

ಸೋನಮ್ ಕಪೂರ್ : ಸೋನಂ ಕಪೂರ್ (Sonam Kapoor) ಪತಿ ಆನಂದ್ ಅಹುಜಾ ಕೂಡ ಶ್ರೀಮಂತ ವ್ಯಕ್ತಿ. ಆನಂದ್ ದೇಹಶ ಅತ್ಯಂತ ದೊಡ್ಡದಾದ ಎಕ್ಸ್’ಪೋರ್ಟ್ ಕಂಪನಿ ಶಶಿ ಎಕ್ಸ್’ಪೋರ್ಟ್ ಮಾಲಿಕರೂ ಹೌದು. ಇವರ ನೆಟ್ ವರ್ಟ್ ಬರೋಬ್ಬರಿ 5000 ಕೋಟಿ ಆಗಿರುತ್ತೆ. 
 

67

ರಾಣಿ ಮುಖರ್ಜಿ : ರಾಣಿ ಮುಖರ್ಜಿ (Rani Mukherjee) ಮದುವೆಯಾಗಿರೋದು ಬಾಲಿವುಡ್ ನ ಖ್ಯಾತ ನಿರ್ದೇಶಕ, ನಿರ್ಮಾಪಕ ಆದಿತ್ಯಾ ಚೋಪ್ರಾ ಅವರನ್ನು. ಇವರು ಯಶ್ ರಾಜ್ ಫಿಲಂಮ್ಸ್ ಮಾಲಿಕರೂ ಹೌದು. ಇವರ ಒಟ್ಟು ನಿವ್ವಳ ಮೌಲ್ಯ 7200 ಕೋಟಿ ಆಗಿದೆ. 

77

ಶರ್ಮೀನ್ ಸೇಗಲ್ : ಹೀರಾಮಂಡಿ ಸಿನಿಮಾದಲ್ಲಿ ಆಲಂ ಝೇಬ್ ಪಾತ್ರದಲ್ಲಿ ಕಾಣಿಸಿಕೊಂಡ ಶರ್ಮೀನ್ ಸೇಗಲ್ (Sharmin Segal) ಪತಿ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಶರ್ಮೀನ್ ಪತಿ ಅಮನ್ ಮೆಹ್ತಾ ಟೊರೆಂಟ್ ಫಾರ್ಮ ಕಂಪನಿಯ ಎಕ್ಸಿಕ್ಯೂಟೀವ್ ಡೈರೆಕ್ಟರ್ ಆಗಿದ್ದಾರೆ. ಇವರ ಕುಟುಂಬದ ಒಟ್ಟು ನೆಟ್ ವರ್ತ್ 53000 ಕೋಟಿಗೂ ಅಧಿಕವಾಗಿದೆ. 
 

Read more Photos on
click me!

Recommended Stories