‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿನ ನಟನೆಯ ಮೂಲಕ ಜಗತ್ತಿನ ಗಮನ ಸೆಳೆದ ಕನ್ನಡದ ಹುಡುಗಿ ರುಕ್ಮಿಣಿ ವಸಂತ್ ಇದೀಗ ಪ್ಯಾನ್ ವರ್ಲ್ಡ್ ಸಿನಿಮಾ ಸ್ಟಾರ್ ಆಗುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಯಶ್ ನಟನೆ, ನಿರ್ಮಾಣದ ಬಹು ನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದಲ್ಲಿ ಅವರು ನಟಿಸಿದ್ದಾರೆ ಎನ್ನಲಾಗಿದೆ.
25
ಈಗಾಗಲೇ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ‘ಟಾಕ್ಸಿಕ್’ ಸಿನಿಮಾದ ನಾಯಕಿ ಎಂದು ಬಿಂಬಿಸಲಾಗಿತ್ತು. ಇನ್ನೊಂದು ಪ್ರಮುಖ ಪಾತ್ರದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟಿ ನಯನತಾರ ನಟಿಸುತ್ತಿದ್ದಾರೆ. ಹಾಗಿದ್ದರೆ ರುಕ್ಮಿಣಿ ನಟಿಸುತ್ತಿರುವ ಪಾತ್ರ ಯಾವುದು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
35
ಇತ್ತೀಚೆಗೆ ರುಕ್ಮಿಣಿ ಮುಂಬೈಯ ಬೀದಿಗಳಲ್ಲಿ ಸ್ಟಾರ್‌ಗಿರಿಯ ಹಂಗಿಲ್ಲದೇ ಓಡಾಡುತ್ತಿರುವ ವೀಡಿಯೋವೊಂದು ಸೋಷಲ್ ಮೀಡಿಯಾದಲ್ಲಿ ಅನುಮಾನ ಹುಟ್ಟುಹಾಕಿತ್ತು. ಕೆಲವರು ‘ರುಕ್ಮಿಣಿ ಮುಂಬೈಗೆ ಬಂದಿರೋದು ಕೇವಲ ಸುತ್ತಾಟಕ್ಕಷ್ಟೇ ಅಲ್ಲ ಎಂದು ತೋರುತ್ತದೆ’ ಎಂಬ ಸಂದೇಹ ವ್ಯಕ್ತಪಡಿಸಿದ್ದರು.
ಅದೀಗ ನಿಜವಾದಂತಿದೆ. ರುಕ್ಮಿಣಿ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್‌ಗಾಗಿ ಮುಂಬೈಯಲ್ಲಿದ್ದರು ಎನ್ನುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಅವರು ಕೆಲವು ಶೆಡ್ಯೂಲ್‌ಗಳ ಶೂಟಿಂಗ್ ಮುಗಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.
55
ಇದಲ್ಲದೇ ಪ್ರಶಾಂತ್ ನೀಲ್ ನಿರ್ದೇಶನದ, ಜೂ.ಎನ್‌ಟಿಆರ್ ನಟನೆಯ ‘ಡ್ರ್ಯಾಗನ್’ ಸಿನಿಮಾಗೆ ಕೂಡ ಇವರೇ ನಾಯಕಿ ಎನ್ನಲಾಗಿದೆ. ‘ಕಾಂತಾರ ಚಾಪ್ಟರ್ 1’ ರಲ್ಲಿಯೂ ಅವರು ನಾಯಕಿಯಾಗಿ ನಟಿಸಿದ್ದಾರೆ. ಈ ಮೂಲಕ ಅವರು ರಾಷ್ಟ್ರ ಮಟ್ಟದಲ್ಲಿ ಮಿಂಚಲಿರುವ ಮತ್ತೊಬ್ಬ ಕನ್ನಡತಿ ಆಗುವ ಸಾಧ್ಯತೆ ನಿಚ್ಚಳವಾಗಿದೆ.