ರಶ್ಮಿಕಾ ಮಂದಣ್ಣ ಕನ್ನಡದ ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಬಂದರೂ ಪಕ್ಕದ ತೆಲುಗಿನಲ್ಲಿ ಈಗ ಭಾರೀ ಫೆಮಸ್. ಮಹೇಶ್ ಬಾಬು ಜತೆಗೂ ಕಾಣಿಸಿಕೊಂಡು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ. ಇದೀಗ ರಶ್ಮಿಕಾ ಒಂದು ಅಚ್ಚರಿಯ ಗಿಫ್ಟ್ ನ್ನು ಮಹೇಶ್ ಬಾಬು ಪತ್ನಿ ನಮೃತಾ ಶಿರೋಡ್ಕರ್ ಅವರಿಗೆ ನೀಡಿದ್ದಾರೆ. ಕೊಡಗಿನ ಬೆಡಗಿ ರಶ್ಮಿಕಾ ಕೊಡಗಿನಿಂದಲೇ ಗಿಫ್ಟ್ ಕೊಂಡೊಯ್ದಿದ್ದಾರೆ. ಮಾನ್ಸೂನ್ ಸೀಸನ್ ನಲ್ಲಿ ರಶ್ಮಿಕಾ ಕೊಟ್ಟ ಗಿಫ್ಟ್ ಏನು? ರಶ್ಮಿಕಾ ಮಂದಣ್ಣ ನೀಡಿರುವ ಕೊಡುಗೆಗಳ ಚಿತ್ರವನ್ನು ನಮೃತಾ ಅಪ್ ಲೋಡ್ ಮಾಡಿ ಧನ್ಯವಾದ ಸಲ್ಲಿಸಿದ್ದಾರೆ. ಮಾವಿನ ಕಾಯಿಯ ಉಪ್ಪಿನಕಾಯಿಗೆ ಧನ್ಯವಾದ ಎಂದು ಹೇಳಿದ್ದಾರೆ. ಕೊರೋನಾ ಟೈಮ್ ನಲ್ಲಿ ನಮಗೆ ಸಿಕ್ಕ ಮೊದಲ ಗಿಫ್ಟ್ ಎಂದು ನಮೃತಾ ಹೇಳಿದ್ದಾರೆ. ಮಹೇಶ್ ಬಾಬು ಜತೆ ರಶ್ಮಿಕಾ ಸರಿಲೇರು ನಿಕ್ಕೆವಾರು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. South Indian Actress Rashmika Mandanna monsoon gift to Mahesh Babu wife Namrata shirodkar ಮಹೇಶ್ ಬಾಬು ಪತ್ನಿ ನಮೃತಾಗೆ ರಶ್ಮಿಕಾ ಮಂದಣ್ಣದಿಂದ ಭರ್ಜರಿ ಗಿಫ್ಟ್