ಹೊಟ್ಟೆಪಾಡಿಗೆ ಅಮಿರ್ ಜತೆ ನಟಿಸಿದ್ದ ನಟನ ತರಕಾರಿ ವ್ಯಾಪಾರ

First Published | Jun 29, 2020, 8:50 PM IST

ಮುಂಬೈ( ಜೂ. 29)  ಲಾಕ್ ಡೌನ್  ಎಲ್ಲರನ್ನು ನಿಧಾನವಾಗಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸುತ್ತ ಇದೆ. ಕಿರುತೆರೆ ಕಲಾವಿದರು, ಸಿನಿಮಾ ಮಂದಿ ಮನೆ ಬಾಡಿಗೆ ಕಟ್ಟಲು ಒದ್ದಾಡುತ್ತಿದ್ದಾರೆ.  ಬಾಲಿವುಡ್ ನಟನೊಬ್ಬ ಅನಿವಾರ್ಯವಾಗಿ ತರಕಾರಿ ಮಾರಾಟಕ್ಕೆ ಇಳಿದಿದ್ದಾರೆ.

ಅಮೀರ್​ ಖಾನ್​ ಜೊತೆ ತೆರೆ ಹಂಚಿಕೊಂಡಿದ್ದ ಜಾವೇದ್​ ಹೈದರ್​ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಣ ಸಂಪಾದನೆಗೆ ಅನಿವಾರ್ಯವಾಗಿ ಬೀದಿ ಬದಿಗೆ ತರಕಾರಿ ವ್ಯಾಪಾರ ಆರಂಭಿಸಿದ್ದು ಪೋಟೋ ವೈರಲ್ ಆಗಿದೆ.
Tap to resize

ಜಾವೇದ್ ಕುರಿತಾದ ವಿಡಿಯೋವನ್ನು ನಟಿ ಡಾಲಿ ಬಿಂದ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬಾಬರ್​ (2009), ಆಮಿರ್​ ಖಾನ್​-ರಾಣಿ ಮುಖರ್ಜಿ ಅಭಿನಯಿಸಿದ್ದ ಗುಲಾಮ್​ (1998) ಸಿನಿಮಾದಲ್ಲಿ ಜಾವೇದ್ ಕೂಡ ಅಭಿನಯಿಸಿದ್ದು ಅವರಿಗೆ ಒಳ್ಳೆ ಹೆಸರು ತಂದುಕೊಟ್ಟಿತ್ತು.
ಟಿಕ್ ಟಾಕ್ ನಲ್ಲಿ ಹೈದರ್ ವಿಡಿಯೋ ಹಂಚಿಕೊಂಡಿದ್ದರು. ದುನಿಯಾ ಮೇ ರೆಹಾನಾ ಹೇ ತೋ ಕಾಮ್ ಕರೋ ಎಂದು ಹಾಡಿನ ಸಾಲುಗಳನ್ನು ಹಾಕಿದ್ದು ಇಂದಿನ ವಾಸ್ತವವನ್ನು ಬಿಚ್ಚಿಡುತ್ತಿದೆ.

Latest Videos

click me!