( ಜೂ. 29) ಕೊರೋನಾ ಲಾಕ್ ಡೌನ್ ಕಾರಣಕ್ಕೆ ಸಿನಿಮಾ ಮಂದಿರಗಳನ್ನು ಬಂದ್ ಮಾಡಿ ನೂರು ದಿನಗಳೆ ಕಳೆದಿವೆ. ಹಾಗಾಗಿ ಮನರಂಜನೆಗೆ ಇರುವುದು ಆನ್ ಲೈನ್ ಮಾರ್ಗ ಮಾತ್ರ. ಇಲ್ಲಿಯೂ ಒಂದು ವಿವಾದ ಸುತ್ತಿಕೊಂಡಿದೆ. ಕನ್ನಡದ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿರುವ ಕೃಷ್ಣ ಆಂಡ್ ಹಿಸ್ ಲೀಲಾ ಈಗ ವಿವಾದ ಕೇಂದ್ರ ಬಿಂದುವಾಗಿದೆ. ಕೃಷ್ಣ ಹೆಸರಿನ ಪುರುಷ ಪಾತ್ರಧಾರಿ ಅನೇಕ ಮಹಿಳೆಯರೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಚಿತ್ರಿಸಲಾಗಿದೆ. ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿದ್ದು ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂಬ ಕೂಗು ಕೇಳಿ ಬಂದಿದೆ. ರಾಧಾ ಹೆಸರಿನ ಪಾತ್ರದೊಂದಿಗೂನ ಕೃಷ್ಣ ಪಾತ್ರಧಾರಿ ದೈಹಿಕ ಸಂಪರ್ಕ ನಡೆಸುತ್ತಾನೆ. ಇದೇ ಕಾರಣಕ್ಕೆ ಟ್ವಿಟರ್ ನಲ್ಲಿ ಬಾಯ್ಕಾಟ್ ನೆಟ್ ಫ್ಲಿಕ್ಸ್ ಎನ್ನುವ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿದೆ. ಹಿಂದೂಗಳ ಭಾವನೆಗೆ ಧಕ್ಕೆಯಾಗಿದ್ದು ಇದನ್ನು ನಿಲ್ಲಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ. ಹಣ ಮಾಡಲು ನೆಟ್ ಫ್ಲಿಕ್ಸ್ ಇಂಥ ಕೆಲಸಕ್ಕೆ ಇಳಿದಿದೆ ಎಂದು ಆರೋಪಿಸಲಾಗಿದೆ. ಕೃಷ್ಣಾ ಆಂಡ್ ಹಿಸ್ ಲೀಲಾದಂತಹ ಹಾಸ್ಯಮಯ ಚಿತ್ರಗಳು ತೆಲುಗಿನಲ್ಲಿ ಅಪರೂಪದಲ್ಲಿ ಮೂಡಿ ಬಂದಿವೆ ಎಂದು ಶ್ರದ್ಧಾ ಹೇಳಿದ್ದರು. Netflix India has courted controversy after web series Krishna and His Leela show. ಕೃಷ್ಣ ಆಂಡ್ ಹಿಸ್ ಲೀಲಾ ಶೋದಿಂದ ಹಿಂದೂ ಭಾವನೆಗೆ ಧಕ್ಕೆ