ಬೀಚಲ್ಲಿ ಬಿಕಿನಿ ಬಿಟ್ಟು, ಸೀರೆ ಉಟ್ಟು ಫೋಸ್ ಕೊಟ್ಟ ರಶ್ಮಿಕಾ ಮಂದಣ್ಣ! ಫ್ರೆಂಡ್‌ಗೆ ಕಾಯ್ತಿದ್ದೀರಾ ಕೇಳಿದ ಫ್ಯಾನ್ಸ್

Published : Jun 01, 2024, 06:06 PM IST

ಕನ್ನಡದ ಕಿರಿಕ್‌ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್‌, ಕಾಲಿವುಡ್‌ನಲ್ಲಿ ಸಖತ್‌ ಫೇಮಸ್‌. ಹಲವು ಸೂಪರ್‌ಹಿಟ್‌ ಸಿನ್ಮಾಗಳನ್ನು ಮಾಡಿರುವ ನಟಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟಿವ್‌. ಇತ್ತೀಚಿಗೆ ನೀಲಿ ಬಣ್ಣದ ಸೀರೆಯುಟ್ಟು ಅಭಿಮಾನಿಗಳ ಮನಕದ್ದಿದ್ದಾರೆ.

PREV
17
ಬೀಚಲ್ಲಿ ಬಿಕಿನಿ ಬಿಟ್ಟು, ಸೀರೆ ಉಟ್ಟು ಫೋಸ್ ಕೊಟ್ಟ ರಶ್ಮಿಕಾ ಮಂದಣ್ಣ! ಫ್ರೆಂಡ್‌ಗೆ ಕಾಯ್ತಿದ್ದೀರಾ ಕೇಳಿದ ಫ್ಯಾನ್ಸ್

ತಮ್ಮ ಬಿಝಿ ಶೆಡ್ಯೂಲ್‌ಗಳ ಮಧ್ಯೆಯೂ ರಶ್ಮಿಕಾ, ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸಿನಿಮಾಗಳ ಕುರಿತಾದ ಅಪ್‌ಡೇಟ್‌, ಮಾಡರ್ನ್‌, ಟ್ರೆಡಿಶನಲ್‌ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಫ್ಯಾನ್ಸ್ ಸಹ ಇದಕ್ಕೆ ಮಿಸ್ ಮಾಡ್ದೆ ಕಾಮೆಂಟ್ ಮಾಡುತ್ತಾರೆ.

27

ಹಾಗೆಯೇ ಇತ್ತೀಚಿಗೆ ಕಿರಿಕ್ ಬೆಡಗಿ ಸಿಂಪಲ್ ಆದ ನೀಲಿ ಬಣ್ಣದ ಸೀರೆಯುಟ್ಟು ಮುದ್ದಾಗಿ ಫೋಸ್ ನೀಡಿದ್ದಾರೆ. ಬ್ರೆಜಿಲ್‌ನ ಕೊಪಕಬನ ಬೀಚ್‌ನಲ್ಲಿ ಚಿಲ್ ಮಾಡುತಿದ್ದೇನೆ ಎಂದು ಶೀರ್ಷಿಕೆ ನೀಡಿದ್ದಾರೆ.

37

ಪುಷ್ಪ 2 ಸಿನಿಮಾ ಬ್ಯುಸಿ ಶೆಡ್ಯೂಲ್ ನಡುವೆ ನಟಿ ರಶ್ಮಿಕಾ ಮಂದಣ್ಣ ಅವರು ಕಡಲ ತೀರದಲ್ಲಿ ಸುಂದರವಾದ ನೀಲಿ ಬಣ್ಣದ ಸೀರೆ ಉಟ್ಟು ಮಿಂಚಿದ್ದಾರೆ. ಆಕರ್ಷಕವಾಗಿ ಸೀರೆ ಉಟ್ಟ ನಟಿ ಮುದ್ದಾಗಿ ಸ್ಮೈಲ್ ಮಾಡಿ ಪೋಸ್ ಕೊಟ್ಟಿದ್ದಾರೆ.

47

ರಶ್ಮಿಕಾ ಮಂದಣ್ಣ ಅವರ ಸರಳವಾದ ಮೇಕಪ್, ಫ್ರೀ ಹೇರ್‌ಸ್ಟೈಲ್ ಹಾಗೂ ಅವರು ಧರಿಸಿದ ಕಿವಿಯೊಲೆ ಸಖತ್ ಹೈಲೈಟ್ ಆಗಿತ್ತು. ಅವರ ಆಕರ್ಷಕ ಲುಕ್ ನೋಡಿ ಅವರ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ.

57

ರಶ್ಮಿಕಾ ಅವರ ಲುಕ್ ನೋಡಿದ ಅವರ ಅಭಿಮಾನಿಗಳು ನೀವು ಯಾವಾಗ್ಲೂ ನ್ಯಾಷನಲ್ ಕ್ರಶ್, ಕಡಲ ತೀರದ ದೇವತೆ, ಬಿಕಿನಿ ಬಿಟ್ಟು ಸೀರೆಯಲ್ಲಿದ್ದೀರಾ ಯಾಕೆ, ಸೋ ಬ್ಯೂಟಿಫುಲ್, ಫ್ರೆಂಡ್‌ಗೆ ಕಾಯ್ತಿದ್ದೀರಾ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

67

ಕೂರ್ಗ್ ಲೇಡಿ ರಶ್ಮಿಕಾ ಮಂದಣ್ಣ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ ನಟಿ ಸರಣಿ ಹಿಟ್ ಸಿನಿಮಾಗಳ ಮೂಲಕ ಹುಡುಗರ ಹೃದಯವನ್ನು ಕದ್ದಿದ್ದಾರೆ.

77

ಪುಷ್ಪಾ ಸಿನಿಮಾ ಹಿಟ್‌ ಆಗುವುದರೊಂದಿಗೆ ರಶ್ಮಿಕಾ ಮಂದಣ್ಣ ನಟನೆ ಎಲ್ಲರಿಗೂ ಅರ್ಥವಾಗಿದೆ. ಗ್ಲಾಮರ್‌ ಪಾತ್ರವೇ ಆಗಲಿ, ಡಿ ಗ್ಲಾಮರ್‌ ಪಾತ್ರವೇ ಆಗಲಿ ರಶ್ಮಿಕಾ ಯಶಸ್ವಿಯಾಗಿ ನಿಭಾಯಿಸುತ್ತಾರೆ.

Read more Photos on
click me!

Recommended Stories