ಮುಸ್ಲಿಂ ಹುಡುಗಿ ರೀತಿ ಫೋಟೋಶೂಟ್ ಮಾಡಿಸಿ 'ಈದ್ ಮುಬಾರಕ್' ಎಂದ ನಟಿ ಪ್ರಿಯಾಮಣಿ!

Published : Apr 11, 2024, 06:31 PM IST

ಬಹುಭಾಷಾ ನಟಿ ಪ್ರಿಯಾಮಣಿ ತಮ್ಮ ಅದ್ಭುತ ನಟನೆಯ ಮೂಲಕ ಎಲ್ಲರಿಗೂ ಪರಿಚಿತ. ಪ್ರಿಯಾಮಣಿ ನಟನೆ ನೋಡಲು ಅದೆಷ್ಟೋ ಅಭಿಮಾನಿಗಳು ಕಾಯ್ತಾ ಇರ್ತಾರೆ. ಇದೀಗ ನಟಿ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

PREV
16
ಮುಸ್ಲಿಂ ಹುಡುಗಿ ರೀತಿ ಫೋಟೋಶೂಟ್ ಮಾಡಿಸಿ 'ಈದ್ ಮುಬಾರಕ್' ಎಂದ ನಟಿ ಪ್ರಿಯಾಮಣಿ!

ಪ್ರಿಯಾಮಣಿ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಆಗಾಗ ತಮ್ಮ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಜನ ಅವನ್ನು ಮೆಚ್ಚಿಕೊಳ್ತಾರೆ.

26

ರಂಜಾನ್‌ ಹಬ್ಬದ ಪ್ರಯುಕ್ತ ನಟಿ ಪ್ರಿಯಾಮಣಿ ವಿಶೇಷವಾಗಿ ಮುಸ್ಲಿಂ ಹುಡುಗಿ ರೀತಿ ಫೋಟೋಶೂಟ್ ಮಾಡಿಸಿದ್ದಾರೆ. ಹಸಿರು ಉಡುಗೆ ತೊಟ್ಟಿರುವ ನಟಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. 

36

ಸದ್ಯ ಫೋಟೋಸ್‌ ಹಂಚಿಕೊಂಡಿರುವ ಪ್ರಿಯಾಮಣಿ, ತಮ್ಮ ಅಭಿಮಾನಿಗಳಿಗೆ ಈದ್ ಮುಬಾರಕ್ ಶುಭಾಶಯಗಳನ್ನು ತಿಳಿಸಿದ್ದಾರೆ. ಪ್ರಿಯಾ ಪೋಸ್ಟ್‌ಗೆ ನೆಟ್ಟಿಗರು ಸಹ ಈದ್ ಮುಬಾರಕ್, ನಿಮಗೂ ರಂಜಾನ್ ಹಬ್ಬದ ಶುಭಾಶಯಗಳು ಸೇರಿದಂತೆ ತರೇಹವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.   

46

ಪ್ರಿಯಾಮಣಿ ತೆಲುಗು ಚಿತ್ರ ಎವರೆ ಅಟಗಾಡು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ಸತ್ಯಂ ಅವರೊಂದಿಗೆ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಎಂಟ್ರಿ ಕೊಟ್ಟರು.

56

2006ರಲ್ಲಿ ಪ್ರಿಯಾಮಣಿ ತೆಲುಗು ಚಿತ್ರ ಪೆಲ್ಲೈನಾ ಕೊಥಾಲೊ ಚಿತ್ರದಲ್ಲಿ ನಟಿಸಿದರು. ಈ ಚಿತ್ರವು ಸೂಪರ್ ಹಿಟ್ ಆಗಿತ್ತು. ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ನಂತರ ದಕ್ಷಿಣ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ. ಬಹುಭಾಷಾ ನಟಿಗೆ ಎಲ್ಲ ಭಾಷೆಗಳಲ್ಲೂ ಅಭಿಮಾನಿಗಳು ಇದ್ದಾರೆ.

66

ಪುನೀತ್ ರಾಜ್‍ಕುಮಾರ್ ಅಭಿನಯದ ರಾಮ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್‌ನಲ್ಲೂ ಮಿಂಚಿದ್ದಾರೆ. 2017ರಲ್ಲಿ ಮುಸ್ತಫಾ ರಾಜ್‌ರನ್ನು ಪ್ರೀತಿಸಿ ಮದುವೆ ಮಾಡಿಕೊಂಡರು. ಆ ಸಮಯದಲ್ಲಿ ಪ್ರಿಯಾಮಣಿ ಸಾಕಷ್ಟು ಟ್ರೋಲ್ ಮತ್ತು ಬಾಡಿ ಶೇಮಿಂಗ್ ಎದುರಿಸಿದ್ದರು.

Read more Photos on
click me!

Recommended Stories