ಬ್ಯಾಕ್ಲೆಸ್ ರೆಡ್‌ ಡ್ರೆಸ್‌ನಲ್ಲಿ ಟೆಂಪ್ರೆಚರ್‌ ಹೆಚ್ಚಿಸಿದ ಗಿಲ್ಲಿ ನಟಿ: ಮದುವೆ ನಂತರ ಸಿಕ್ಕಾಪಟ್ಟೆ ಬೋಲ್ಡ್ ಆದ ರಕುಲ್ ಪ್ರೀತ್

First Published | Mar 15, 2024, 9:19 AM IST

ಬಾಯ್‌ಫ್ರೆಂಡ್ ಹಾಗೂ ಬಾಲಿವುಡ್ ನಿರ್ಮಾಪಕ ಬಾಕಿ ಭಗ್ನಾನಿ ಜೊತೆ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಸಂಭ್ರಮದಲ್ಲಿದ್ದ ನಟಿಯೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
 

ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ರಕುಲ್ ಪ್ರೀತ್ ಸಿಂಗ್ ಫುಲ್ ಹ್ಯಾಪಿ ಮೂಡ್‌ನಲ್ಲಿದ್ದಾರೆ. ಮದುವೆ ಬಳಿಕ ಒಂದಿಷ್ಟು ದಿನ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದ ನಟಿ ಹೊಸ ಫೋಟೊಶೂಟ್ ಮೂಲಕ ಮತ್ತೆ ಫ್ಯಾನ್ಸ್ ಮುಂದೆ ಮರಳಿದ್ದಾರೆ.

ಬಾಲಿವುಡ್‌ ನಟಿಯರು ಆಗಾಗ ಫೋಟೊ ಶೂಟ್‌ಗಳನ್ನು ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಹಾಗೇ ಮದುವೆ ಬಳಿಕ ರಕುಲ್ ಪ್ರೀತ್ ಸಿಂಗ್ ಕೂಡ ಹೊಸ ಫೋಟೊಶೂಟ್ ಮಾಡಿಸಿಕೊಂಡಿದ್ದು, ಕೆಂಪು ಸ್ಲೀವ್‌ಲೆಸ್ ಹಾಲ್ಟರ್ ನೆಕ್ ಕ್ರಾಪ್ ಟಾಪ್‌ನಲ್ಲಿ ಮಿಂಚಿದ್ದಾರೆ. 

Tap to resize

ರಕುಲ್ ಪ್ರೀತ್ ಸಿಂಗ್ ನಟನೆಯ ಜೊತೆಗೆ ಫ್ಯಾಷನ್‌ನಲ್ಲೂ ಹೆಚ್ಚು ಕಾಳಜಿ ವಹಿಸುತ್ತಾರೆ. ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ. ಡಿಸೈನರ್ ಡ್ರೆಸ್ ಅಂದ್ಮೇಲೆ ಪ್ರತಿಯೊಂದು ಪರ್ಫೆಕ್ಟ್ ಆಗಿರಬೇಕು. ರಕುಲ್ ಪ್ರೀತ್ ಸಿಂಗ್ ಧರಿಸಿರುವ ರೆಡ್ ಹಾಟ್ ಡ್ರೆಸ್ ಕೂಡ ಅಷ್ಟೇ. ಪರ್ಫೆಕ್ಟ್ ಆಗಿದ್ದು, ರಕುಲ್ ಪ್ರೀತ್ ಸಿಂಗ್‌ಗೆ ಸೂಟ್ ಆಗುವಂತಿದೆ.

ಈ ಫೋಟೊಗಳನ್ನು ನೋಡುತ್ತಿದ್ದಂತೆ ನೆಟ್ಟಿಗರು ತರೇಹವಾರಿ ಕಮೆಂಟ್ ಹಾಕುವುದಕ್ಕೆ ಶುರು ಮಾಡಿದ್ದಾರೆ. ಇನ್ನು ಈ ರೆಡ್ ಡ್ರೆಸ್‌ನಲ್ಲಿ ನಟಿ ರಕುಲ್ ಮತ್ತೆ ನಟನೆಗೆ ರೆಡಿ ಅನ್ನೋ ಸಂದೇಶ ನೀಡಿದಂತಿದೆ.

ರಕುಲ್ ಪ್ರೀತ್ ಸಿಂಗ್ ಹಾಗೂ ಜಾಕಿ ಭಗ್ನಾನಿ ನಾಲ್ಕೈದು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಎಲ್ಲರಂತೆ ಈ ಜೋಡಿ ತನ್ನ ಪ್ರೀತಿ ವಿಷಯವನ್ನು ಮುಚ್ಚಿಡುವುದಕ್ಕೆ ಹೋಗಲಿಲ್ಲ. ಇಬ್ಬರೂ ಬಹಿರಂಗವಾಗಿಯೇ ಪ್ರೀತಿಸುವ ವಿಚಾರವನ್ನು ಹಂಚಿಕೊಂಡಿದ್ದರು. 

ಇತ್ತೀಚೆಗಷ್ಟೇ ರಕುಲ್ ಪ್ರೀತ್ ಸಿಂಗ್ ನಟಿಸಿದ ತಮಿಳು ಸಿನಿಮಾ ಆಲಯನ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ರಕುಲ್ ಜೊತೆಗೆ ತಮಿಳು ನಟ ಶಿವಕಾರ್ತಿಕೇಯನ್ ನಟಿಸಿದ್ದರು. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ರಕುಲ್ ಪ್ರೀತ್ ಸಿಂಗ್ ವಿವಾಹದ ಬಳಿಕ ನಟನೆಯಲ್ಲಿ ಮುಂದುವರೆವ ಎಲ್ಲಾ ಸಾಧ್ಯತೆಗಳು ಇವೆ. ಇವರ ಕೈಯಲ್ಲಿ 'ಇಂಡಿಯನ್ 2' ಹಾಗೂ 'ಮೇರೆ ಪತ್ನಿ ಕಾ ರಿಮೇಕ್' ಅನ್ನುವ ಎರಡು ಸಿನಿಮಾಗಳಿವೆ. ಈ ಎರಡು ಸಿನಿಮಾಗಳ ಬಳಿಕ ಹೊಸ ಪ್ರಾಜೆಕ್ಟ್‌ ಒಪ್ಪಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

Latest Videos

click me!