ಅಜ್ಜಅಜ್ಜಿ ಮೊಮ್ಮಗುವನ್ನು ಮುದ್ದು ಮಾಡಿ ಹಾಳು ಮಾಡೋದು ಜೀವನದ ಸುಂದರ ಕ್ಷಣ; ತಾಯಿಯನ್ನು ನೆನೆಸಿಕೊಂಡ ಸೆಲೀನಾ ಜೇಟ್ಲಿ

First Published | Mar 14, 2024, 3:47 PM IST

ಸೆಲೀನಾ ಜೇಟ್ಲಿ ತಮ್ಮ ಮೃತ ತಾಯಿಯನ್ನು ನೆನೆಸಿಕೊಂಡು ದೊಡ್ಡ ಪೋಸ್ಟ್ ಬರೆದಿದ್ದಾರೆ. ಬದುಕಿದ್ದಾಗ ಮಕ್ಕಳನ್ನು ಮುದ್ದು ಮಾಡಿದರೆ, ಅತಿಯಾದ ಮುದ್ದಿನಿಂದ ಹಾಳು ಮಾಡುತ್ತಾರೆ ಎನಿಸುತ್ತದೆ. ಆದರೆ ಈಗ ಅವರು ಆ ರೀತಿ ನನ್ನ ಮಕ್ಕಳನ್ನ ಅತಿಯಾಗಿ ಮುದ್ದು ಮಾಡಲಿ ಎನಿಸುತ್ತದೆ ಎಂದು ನಟಿ ಬರೆದಿದ್ದಾರೆ. 

ಮಾಜಿ ಬಾಲಿವುಡ್ ನಟಿ ಮತ್ತು ಮಿಸ್ ಇಂಡಿಯಾ, ಬೆಕ್ಕಿನ ಕಣ್ಗಳ ಸುಂದರಿ ಸೆಲೀನಾ ಜೇಟ್ಲಿ ತಮ್ಮ ತಾಯಿಯನ್ನು ನೆನೆಸಿಕೊಂಡು ಉದ್ದವಾದ ಪೋಸ್ಟ್ ಬರೆದಿದ್ದಾರೆ. 

ಮೂವರು ಮಕ್ಕಳ ತಾಯಿಯಾಗಿರುವ ಸೆಲೀನಾ, ತಮ್ಮ ಅವಳಿ ಮಕ್ಕಳನ್ನು ತಾಯಿ ಎತ್ತಿಕೊಂಡಿರುವ ಫೋಟೋ ಹಾಕಿ ಮೃತ ತಾಯಿಯನ್ನು ನೆನೆಸಿಕೊಂಡಿದ್ದಾರೆ.

Tap to resize

'ಜನಶೀನ್', 'ನೋ ಎಂಟ್ರಿ' ಮತ್ತು 'ಗೋಲ್ಮಾಲ್ ರಿಟರ್ನ್ಸ್' ನಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾಗಿರುವ ಜೇಟ್ಲಿ, ಸಧ್ಯ ತನ್ನ ಆಸ್ಟ್ರಿಯನ್ ಪತಿ ಹಾಗ್ ಪೀಟರ್ ಹಾಗೂ ಮೂವರು ಮಕ್ಕಳೊಂದಿಗೆ ಆಸ್ಟ್ರಿಯಾದಲ್ಲಿದ್ದಾರೆ. 

ನನ್ನ ಸುಂದರ ಮಾ ಜೀವಂತವಾಗಿದ್ದಳು ಮತ್ತು ಮಾರ್ಚ್ 24 ರಂದು 12 ನೇ ವರ್ಷಕ್ಕೆ ಕಾಲಿಡಲಿರುವ ತನ್ನ ಅವಳಿ ಮೊಮ್ಮಕ್ಕಳೊಂದಿಗೆ ಸಂತೋಷವಾಗಿದ್ದಳು. ಆದರೀಗ ಅಪ್ಪ ಅಮ್ಮ ಇಬ್ಬರೂ ಇಲ್ಲ.

ನಿಮ್ಮ ಸ್ವಂತ ತಾಯಿ ಅಥವಾ ಪೋಷಕರು ಇಲ್ಲದೆ ತಾಯ್ತನವನ್ನು ಅನುಭವಿಸುವುದು ತುಂಬಾ ಕಷ್ಟ. ಈ ಸಂದರ್ಭದಲ್ಲಿ ಎದುರಾಗುವ ಪ್ರಶ್ನೆಗಳನ್ನು ಕೇಳಲು ತಾಯಿ ಇರುವುದಿಲ್ಲ. ಹೇಳಿಕೊಳ್ಳಬೇಕಾದ್ದು ಹೇಳಲು ಅಮ್ಮನಿಲ್ಲವೆಂದರೆ ತುಂಬಾ ಕಷ್ಟ ಎಂದಿದ್ದಾರೆ. 

ನಾನಾ-ನಾನಿ ವಿನ್‌ಸ್ಟನ್ ಮತ್ತು ವಿರಾಜ್‌ರನ್ನು ಮುದ್ದಿನಿಂದ ಹಾಳು ಮಾಡುತ್ತಿದ್ದಾರೆಂದು ನಾನು ಅಸಮಾಧಾನಗೊಳ್ಳುತ್ತಿದ್ದೆ. ಈಗ ಅವರು ಮಕ್ಕಳನ್ನು ಅಪ್ಪಿಕೊಳ್ಳಲು ವಿಮಾನ ನಿಲ್ದಾಣದಲ್ಲಿ ಓಡಿ ಬಂದು ಸಂತೋಷದಿಂದ ಕಣ್ತುಂಬಿಕೊಳ್ಳಲೆಂದು ನಾನು ಬಯಸುತ್ತೇನೆ ಎಂದು ನಟಿ ತಮ್ಮ ಪೋಷಕರನ್ನು ಮಿಸ್ ಮಾಡಿಕೊಳ್ಳುವುದನ್ನು ಬಿಚ್ಚಿಟ್ಟಿದ್ದಾರೆ. 

ನಿಮ್ಮ ತಂದೆತಾಯಿ ಮಕ್ಕಳನ್ನು ಅತಿಯಾಗಿ ಮುದ್ದಿಸುತ್ತಿದ್ದರೆ ಆ ಕ್ಷಣಗಳನ್ನು ಆನಂದಿಸಿ. ಅವರು ಮೊಮ್ಮಕ್ಕಳ ಕೈಗಳನ್ನು ಕೆಲ ಕಾಲ ಹಿಡಿಯುತ್ತಾರೆ. ಮತ್ತು ಆ ನೆನಪು ನಮ್ಮ ಹೃದಯದಲ್ಲಿ ಸದಾ ಇರುತ್ತದೆ ಎಂದು ನಟಿ ಹೇಳಿದ್ದಾರೆ. 

ಎಲ್ಲರನ್ನೂ ಮೆಚ್ಚಿಸಿ ಸಾಕಾಗಿದೆ, ಬ್ರೇಕ್ ಬೇಕು ಎಂದು ಬಾಲಿವುಡ್‌ನಿಂದ ದೂರಾದ ನಟಿ ವಿದೇಶಿ ಉದ್ಯಮಿಯನ್ನು ವಿವಾಹವಾದಾಗ ಸಾಕಷ್ಟು ಗಾಸಿಪ್‌ಗಳು ಹರಿದಾಡಿದ್ದವು. ಆದರೆ, ತಮ್ಮದು ಸಂಪೂರ್ಣ ಆರೇಂಜ್ಡ್ ಮ್ಯಾರೇಜ್ ಎಂದು ನಟಿ ವಿವರಿಸಿದ್ದಾರೆ. 

ಎರಡೂ ಬಾರಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಸೆಲೀನಾ, ಎರಡನೇ ಬಾರಿ ಒಂದು ಮಗುವನ್ನು ಹೃದಯದ ಸಮಸ್ಯೆಯಿಂದಾಗಿ ಕಳೆದುಕೊಂಡಿದ್ದಾರೆ. ಮೂರು ಮಕ್ಕಳ ತಾಯಾದರೂ ಬಾರ್ಬಿ ಗೊಂಬೆಯಂತಿರುವ ಸೆಲೀನಾ ಸೋಷ್ಯಲ್ ಮೀಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿದ್ದಾರೆ. 

Latest Videos

click me!