ಸೀನ್ ಇಂಪ್ರೂವ್ ಮಾಡಲು ನಟ ಸೂಚಿಸಿದ್ದ. ಹೀಗಾಗಿ ಹಾಡಿನ ಸೀನ್‌ನಲ್ಲಿ ಸ್ಕ್ರಿಪ್ಟ್‌ನಲ್ಲಿ ಇಲ್ಲದಿದ್ದರೂ ಸತತವಾಗಿ ಮುಟ್ಟಿಟ್ಟ. ಕ್ಯಾಮೆರಾ ಆನ್ ಆಗಿತ್ತು.ಪ್ರತಿಭಟಿಸಲು ಆಗದೆ ಅಸಹಾಯಕಳಾಗಿ ನಿಲ್ಲಬೇಕಾಯಿತು. ಘಟನೆ ನೆನೆದು ನಟಿ ಕಣ್ಣೀರಿಟ್ಟಿದ್ದಾರೆ.
ರೊಮ್ಯಾಂಟಿಕ್ ಸೀನ್‌ಗಳಲ್ಲಿ ಕೆಲ ನಟರು ವರ್ತನೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಲವು ಬಾರಿ ಸ್ಕ್ರಿಪ್ಟ್‌ನಲ್ಲಿ ಇಲ್ಲದೇ ಇರುವ ಸೀನ್ ಮಾಡುತ್ತಾರೆ. ಪ್ರಮುಖವಾಗಿ ಕಿಸ್, ತಬ್ಬಿಕೊಳ್ಳುವುದು ಸೇರಿದಂತೆ ಹಲವು ರೊಮ್ಯಾಂಟಿಕ್ ಸೀನ್ ವೇಳೆ ಅತಿಯಾಗಿ ವರ್ತಿಸಿ ನೋವು ತರಿಸುತ್ತಾರೆ ಎಂದು ಮುನ್ನಾ ಬಾಯಿ ಎಂಬಿಬಿಎಸ್ ನಟಿ ಪ್ರಿಯಾ ಬಾಪಟ್ ಹೇಳಿದ್ದಾರೆ. ಇದೇ ವೇಳೆ ಸಹ ನಟ ತನ್ನ ಮೇಲೆ ಸತತವಾಗಿ ಮುತ್ತಿಟ್ಟ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.
26
ನೋವು ತೋಡಿಕೊಂಡ ಬಾಲಿವುಡ್ ನಟಿ
ಫಿಲ್ಮ್‌ಪೇರ್ ಸಂದರ್ಶನದಲ್ಲಿ ನಟಿ ಪ್ರಿಯಾ ಕೆಲ ಸ್ಫೋಟಕ ಘಟನೆಗಳನ್ನು ಬಿಚ್ಚಿಟ್ಟಿದ್ದಾರೆ. ಹಾಡಿನ ಸೀನ್ ಚಿತ್ರೀಕರಣ ಮಾಡಬೇಕಿತ್ತು. ಆರಂಭದಲ್ಲೇ ಸಂಪೂರ್ಣ ಸ್ಕ್ರಿಪ್ಟ್ ಕೇಳಿಸಿದ್ದೇನೆ, ಓದಿದ್ದೇನೆ, ಪ್ರತಿ ಸೀನ್ ಕುರಿತು ತಿಳಿದುಕೊಂಡಿದ್ದೆ. ಎಲ್ಲೂ ಕೂಡ ಕಿಸ್ಸಿಂಗ್, ಅತೀಯಾದ ರೊಮ್ಯಾನ್ಸ್ ಇರಲಿಲ್ಲ. ಆದರೆ ಹಾಡಿನ ಸೀನ್ ಇಂಪ್ರೂವೈಸೇಶನ್ ಮಾಡುವ ನೆಪದಲ್ಲಿ ನಟ ನನ್ನ ಮೇಲೆ ಸತತವಾಗಿ ಮುತ್ತಿಟ್ಟ, ಚುಂಬಿಸಲು ಯತ್ನಿಸಿದ ಎಂದು ಪ್ರಿಯಾ ಹೇಳಿದ್ದಾರೆ.
36
ರೊಮ್ಯಾನ್ಸ್ ಮಾಡಿದಾಗ ಕಣ್ಣೀರಿಟ್ಟೆ
ಸಿನಿ ಕರಿಯರ್‌ನ ಆರಂಭಿಕ ದಿನಗಳಲ್ಲೇ ಈ ಅನುಭವವಾಗಿತ್ತು. ನಾನು ಪ್ರತಿಭಟಿಸಲು ಆಗದೆ, ನಟನನ್ನು ದೂರ ತಳ್ಳಲು ಆಗದೆ ನಿಲ್ಲಬೇಕಾಯಿತು. ಅಳು, ನೋವು, ಹಿಂಸೆ ಎಲ್ಲವೂ ಉಮ್ಮಳಿಸಿ ಬಂದಿತ್ತು. ನಾನು ಅಸಹಾಯಕನಾಗಿದ್ದೆ. ನಿರ್ದೇಶಕರು ಕಟ್ ಹೇಳಲಿಲ್ಲ. ಈ ರೀತಿ ಬೇಡ ಎನ್ನಲಿಲ್ಲ. ಸೀನ್‌ನಲ್ಲಿ ಇಲ್ಲದೇ ಇರುವ ರೊಮ್ಯಾನ್ಸ್ ಮಾಡಿದಾಗ, ತಬ್ಬಿಕೊಂಡು ಮುತ್ತಿಡುವಾಗ ನಾನು ಕಣ್ಣೀರು ಒರೆಸೆಕೊಂಡು ನಟಿಸಬೇಕಾಯಿತು ಎಂದು ಪ್ರಿಯಾ ಹೇಳಿದ್ದಾರೆ.
ಭೋಪಾಲ್‌ನಲ್ಲಿ ಸಾಂಗ್ ಶೂಟಿಂಗ್ ನಡೆಯುತ್ತಿತ್ತು. ನಟ ನಟಿಯರು, ನಿರ್ದೇಶಕರು ಸೇರಿದಂತೆ ಹಲವರಿಗೆ ಒಂದೇ ಹೊಟೆಲ್‌ನಲ್ಲಿ ಬೇರೆ ಬೇರೆ ಕೊಠಡಿ ಬುಕ್ ಮಾಡಲಾಗಿತ್ತು. ಸಹ ಪ್ರತಿ ದಿನ ರಾತ್ರಿ ಡಿನ್ನರ್‌ಗೆ ಕೋಣೆಗೆ ಬರುವಂತೆ ಸೂಚಿಸಿದ್ದ. ಹಲವು ಬಾರಿ ಆತನ ಮನವಿ ತಿರಸ್ಕರಿಸಲಾಗಿತ್ತು. ಕೊನೆಗೆ ಆತ ತನ್ನ ಕೋಣೆಗೆ ಬಂದು ಬಾಗಿಲು ಬಡಿದಿದ್ದ. ಇದು ನನಗೆ ಮತ್ತಷ್ಟು ಆತಂಕ ಹೆಚ್ಚಿಸಿತ್ತು ಎಂದಿದ್ದಾರೆ.
56
ಕರೆ ಮಾಡಿ ನೆರವು ಕೇಳಿದ ನಟಿ
ಬಾಗಿಲು ಬಡಿದ ತಕ್ಷಣ ನಾನು ಅಲರ್ಟ್ ಆದೆ. ನಾಳೆ ಸಿಗುತ್ತೇನೆ ಎಂದು ನಟನ ಕೈಯಿಂದ ತಪ್ಪಿಸಕೊಂಡೆ. ಬಳಿಕ ನೇರವಾಗಿ ಪತಿಗೆ ಕರೆ ಮಾಡಿ ನಡೆಯುತ್ತಿರುವ ಕಿರುಕುಳ ಕುರಿತು ವಿವರಿಸಿದೆ. ಪತಿ ಮುಂಬೈನಿಂದ ನೇರವಾಗಿ ಭೋಪಾಲ್‌ಗೆ ಬಂದಿಳಿದರು. ಬಳಿಕ ಮೂರು ದಿನ ನನ್ನ ಜೊತೆ ಇದ್ದರು. ಹೀಗಾಗಿ ನಟನ ವರ್ತನೆ ಸರಿಯಾಗಿತ್ತು ಎಂದು ಪ್ರಿಯಾ ಹೇಳಿದ್ದಾರೆ.
66
ಬಲೆಗೆ ಬೀಳಿಸುತ್ತಾರೆ
ಸಿನಿಮಾ ಹಿನ್ನಲೆ, ರಾಜಕಾರಣಿ, ಪ್ರಮುಖ ನಾಯಕರ ಬೆಂಬಲವಿಲ್ಲದೆ ಹಲವರು ಸಿನಿಮಾಗೆ ಬರುತ್ತಾರೆ. ಪ್ರತಿಭಾನ್ವಿತ ನಟಿಯರನ್ನು ಆರಂಭದಲ್ಲೇ ಏನೆಲ್ಲಾ ಮಾಡಿ ಬಲೆಗೆ ಬೀಳಿಸುತ್ತಾರೆ. ಮನೆಬಿಟ್ಟು ಬಂದಿರುತ್ತಾರೆ, ಕರಿಯರ್ ಎಂದೆಲ್ಲಾ ಕನಸಿಟ್ಟುಕೊಂಡಿರುತ್ತಾರೆ. ಈ ವೇಳೆ ಸಹಕರಿಸಿ ಕೊನೆಗೆ ನರಕ ಅನುಭವಿಸುತ್ತಾರೆ ಎಂದು ಪ್ರಿಯಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.