ಮುಡಿಯಲ್ಲಿ ದುಂಡು ಮಲ್ಲಿಗೆ, ಅಜ್ಜಿಯ 70 ವರ್ಷ ಹಳೆ ಸೀರೆಲಿ ಮಂಗಳೂರು ಚೆಲುವೆ

Published : Apr 28, 2025, 02:26 PM ISTUpdated : Apr 28, 2025, 02:34 PM IST

ನಟಿ ಪೂಜಾ ಹೆಗ್ಡೆ ದುಂಡು ಮಲ್ಲಿಗೆ ಮುಡಿದು, ಅಜ್ಜಿಯ 70 ವರ್ಷ ಹಳೆಯ ಸೀರೆಯುಟ್ಟು ತುಂಬಾನೆ ಮುದ್ದಾಗಿ ಪೋಸ್ ಕೊಟ್ಟಿದ್ದಾರೆ.   

PREV
19
ಮುಡಿಯಲ್ಲಿ ದುಂಡು ಮಲ್ಲಿಗೆ, ಅಜ್ಜಿಯ 70 ವರ್ಷ ಹಳೆ ಸೀರೆಲಿ ಮಂಗಳೂರು ಚೆಲುವೆ

ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಪೂಜಾ ಹೆಗ್ಡೆ (Pooja Hegde), ತಮ್ಮ ರೆಟ್ರೋ ಮೂವಿ ಬಿಡುಗಡೆಯ ತಯಾರಿಯಲ್ಲಿರುವ ಪೂಜಾ, ಇತ್ತೀಚಿನ ದಿನಗಳಲ್ಲಿ ರೆಟ್ರೋ ಲುಕ್ ನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. 
 

29

ಇದೀಗ ಪೂಜಾ ಹೆಗ್ಡೆ ಮತ್ತೆ ಸಿಂಪಲ್ ಆಗಿ ಸೀರೆಯುಟ್ಟು, ತಮ್ಮ ವಿಂಟೇಲ್ ಲುಕ್ ನಲ್ಲಿ (Vintage look) ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇವರ ಹೊಸ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. 
 

39

ಹಸಿರು ಬಣ್ಣದ ಚೆಕ್ಡ್ ಸೀರೆಯುಟ್ಟು, ಅದಕ್ಕೆ ನೀಲಿ ಬಣ್ಣದ ಬ್ಲೌಸ್ ಧರಿಸಿರುವ ಪೂಜಾ ಹೆಗ್ಡೆ ಮುದ್ದು ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ಇದರ ಜೊತೆಗೆ ತಾವು ಉಟ್ಟಿರುವ ಸೀರೆ ಕುರಿತು ಕೂಡ ಮಾಹಿತಿ ನೀಡಿದ್ದಾರೆ ಪೂಜಾ. 
 

49

70 ವರ್ಷ ಹಳೆಯದಾದ ವಿಂಟೇಜ್ ಕ್ಲೋಸೆಟ್ (vintage closet)  ನಿಂದ ಎನ್ನುತ್ತಾ ತಮ್ಮ ವಿಂಟೇಜ್ ಲುಕ್ ಪ್ರದರ್ಶಿಸಿರುವ ಪೂಜಾ, ತಾವು ತಮ್ಮ ಅಜ್ಜಿಯ ಸೀರೆ ಉಟ್ಟಿರುವುದಾಗಿ ತಿಳಿಸಿದ್ದಾರೆ. 
 

59

ನನ್ನ ಸುಂದರ ಅಜ್ಜಿ ಕಾಂಜೀವರಂ ಧರಿಸಿ ದಿನ ಕಳೆಯುತ್ತಿದ್ದ ದೃಶ್ಯಗಳು, ಮದುವೆಗೆ ಹೋಗಲು ಸಿದ್ಧವಾಗುವ ಮೊದಲು ಮನೆಯಲ್ಲಿದ್ದ ಮಲ್ಲಿಗೆಯ ತಾಜಾ ವಾಸನೆ ಮತ್ತು ಮೊದಲ ಮಳೆಯ ನಂತರ ಒದ್ದೆಯಾದ ಮಂಗಳೂರು ಮಣ್ಣಿನ ಸುವಾಸನೆ (smell of mangalore mud)... ಓಹ್, ಸರಳವಾದ ವಸ್ತುಗಳಲ್ಲಿ ಸೌಂದರ್ಯ ಎಷ್ಟು? ಎಂದಿದ್ದಾರೆ. 
 

69

ಪೂಜಾ ಹೆಗ್ಡೆ ಮೂಲತಃ ಮಂಗಳೂರಿನವರಾಗಿದ್ದು, ತಾವು ಸ್ಟಾರ್ ಪಟ್ಟ ಪಡೆದರೂ ಸಹ ತಮ್ಮ ಮೂಲವನ್ನು ಮರೆತಿಲ್ಲ, ಸೋಶಿಯಲ್ ಮೀಡಿಯಾದಲ್ಲಿ ಮಂಗಳೂರು ಕುರಿತಾದ ತಮ್ಮ ಪ್ರೀತಿಯನ್ನು ತೋರಿಸುತ್ತಲೇ ಇರುತ್ತಾರೆ. 
 

79

ಮಂಗಳೂರಿನ ಬೀಚ್, ಮಂಗಳೂರು ಮಲ್ಲಿಗೆ, ಭೂತ ಕೋಲ, ನೀರು ದೋಸೆ, ಹಲಸಿನ ಹಣ್ಣು ಇವೆಲ್ಲವನ್ನೂ ಹೆಚ್ಚಾಗಿ ಪೂಜಾ ಹೆಗ್ಡೆ ಇನ್’ಸ್ಟಾಗ್ರಾಂ ಸ್ಟೋರಿಯಲ್ಲಿ (instagram story) ಕಾಣಬಹುದು. ಅಷ್ಟೊಂದು ಪ್ರೀತಿ ಈ ಮಂಗಳೂರು ಬೆಡಗಿಗೆ. 
 

89

ಹಸಿರು ಸೀರೆಯುಟ್ಟು, ದುಂಡು ಮಲ್ಲಿಗೆ ಹೂವು ಮುಡಿದು, ಮಧ್ಯ ಬೈತಲೆ ಹಾಕಿ ಕೂದಲು ಲೂಸ್ ಆಗಿ ಬಿಟ್ಟಿರುವ ಪೂಜಾ ಹೆಗ್ಡೆ ವಿಂಟೇಲ್ ಕಾಲದಿಂದ ಬಂದಂತಹ ಸುರ ಸುಂದರಿಯಂತೆ ಕಾಣಿಸುತ್ತಿದ್ದಾರೆ. 
 

99

ಇನ್ನು ಸೂರ್ಯ ಜೊತೆ ನಟಿಸಿರುವ ರೆಟ್ರೋ ಸಿನಿಮಾದ (Retro film) ಟ್ರೈಲರ್ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮೇ 1 ರಂದು ಸಿನಿಮಾ ರಿಲೀಸ್ ಆಗಲಿದ್ದು, ಸದ್ಯ ಪೂಜಾ ಹೆಗ್ಡೆ ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. 
 

Read more Photos on
click me!

Recommended Stories