ವರ್ಕೌಟ್‌ನಲ್ಲಿ 'ಹಾರ್ಡ್‌ ವರ್ಕ್‌' ಮುಖ್ಯ ಎಂದ ಮಹೇಶ್ ಬಾಬು: 'ಮಾತೆ ಬರುತ್ತಿಲ್ಲ'ವೆಂದ ಪತ್ನಿ ನಮ್ರತಾ!

Published : Oct 13, 2023, 12:30 AM IST

ಟಾಲಿವುಡ್​ನ ಪ್ರಿನ್ಸ್​ ಮಹೇಶ್​ ಬಾಬು ಸದ್ಯ ‘ಗುಂಟೂರು​ ಖಾರಂ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಸಿನಿಮಾ ಮುಂದಿನ ವರ್ಷದಲ್ಲಿ ತೆರೆ ಕಾಣಲು ಸಜ್ಜಾಗುತ್ತಿದೆ. ಈ ಮಧ್ಯೆ ಮಹೇಶ್​ ಬಾಬು ಸಾಮಾಜಿಕ ಜಾಲತಾಣದಲ್ಲಿ ವರ್ಕೌಟ್ ಮಾಡುವ ಫೋಟೋವೊಂದನ್ನು ಹಂಚಿಕೊಂಡಿದ್ದು, ವೈರಲ್ ಆಗಿದೆ.  

PREV
15
ವರ್ಕೌಟ್‌ನಲ್ಲಿ 'ಹಾರ್ಡ್‌ ವರ್ಕ್‌' ಮುಖ್ಯ ಎಂದ ಮಹೇಶ್ ಬಾಬು: 'ಮಾತೆ ಬರುತ್ತಿಲ್ಲ'ವೆಂದ ಪತ್ನಿ ನಮ್ರತಾ!

ನಟ ಮಹೇಶ್‌ ಬಾಬು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ಬ್ಲ್ಯಾಕ್‌ ಅಂಡ್ ವೈಟ್‌ ಚಿತ್ರವನ್ನು ಹಂಚಿಕೊಂಡಿದ್ದರು. ಅದರಲ್ಲಿ ಟಿ-ಶರ್ಟ್‌ ಧರಿಸಿ, ಹಾರ್ಡ್‌ ಬೈಸೆಪ್ಸ್ ತೋರಿಸಿದ್ದರು. ಜೊತೆಗ 'ಕಠಿಣ ಪರಿಶ್ರಮದ ವಿಷಯಕ್ಕೆ ಬಂದಾಗ ಕಪ್ಪು ಮತ್ತು ಬಿಳಿಪು ಮ್ಯಾಟರ್‌ ಅಲ್ಲ... ಹಾರ್ಡ್‌ ವರ್ಕ್‌ ಮುಖ್ಯ' ಎಂದು ಬರೆದುಕೊಂಡಿದ್ದಾರೆ.

25

ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್‌ ಅವರ ಪತ್ನಿ ನಮ್ರತಾ ಶಿರೋಡ್ಕರ್ ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದು, 'ಮಾತೆ ಬರುತ್ತಿಲ್ಲ' ಎಂದು ಫೈರ್‌ ಎಮೋಜಿ ಕಾಮೆಂಟ್ ಮಾಡಿದ್ದಾರೆ. ಅಲ್ಲದೆ, ನಮ್ರತಾ ಸಹೋದರಿ ಶಿಲ್ಪಾ ಶಿರೋಡ್ಕರ್ ಹಾರ್ಟ್‌ ಮತ್ತು ಕಣ್ಣಿನ ಎಮೋಜಿ ಪೋಸ್ಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ಸಹ ಈ ಫೋಟೋಗೆ ವಿಭಿನ್ನವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.

35

ನೆಟ್ಟಿಗರೊಬ್ಬರು 'ಬೀಸ್ಟ್ ಮೋಡ್' ಅಂತ ಕಾಮೆಂಟ್‌ ಮಾಡಿದ್ದು, ಇನ್ನೊಬ್ಬರು 'ಮಹೇಶ್ ಅಣ್ಣಾ, ಕಾಳಜಿ ವಹಿಸಿ. ಈ ಹಾರ್ಡ್ ವರ್ಕ್‌ಗಿಂತ ನಿಮ್ಮ ಆರೋಗ್ಯ ಮುಖ್ಯ' ಎಂದು ಕಾಳಜಿ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಅಭಿಮಾನಿ, 'ನಿಮ್ಮಲ್ಲಿರುವ ಬೀಸ್ಟ್ ಸಿನಿಮಾಗೆ ಸಾಕ್ಷಿಯಾಗಲಿ ಮಹೇಶ್‌ ಸರ್' ಎಂದು ಕಾಮೆಂಟ್‌ ಮಾಡಿದ್ದಾರೆ.

45

ಮಹೇಶ್ ಬಾಬು ಮತ್ತು ನಮ್ರತಾ ಫೆಬ್ರವರಿ 10, 2005 ರಂದು ಮದುವೆಯಾದರು. ಅವರಿಗೆ 17 ವರ್ಷದ ಮಗ ಗೌತಮ್ ಘಟ್ಟ ಮನೇನಿ ಮತ್ತು ಮಗಳು ಸಿತಾರಾ ಘಟ್ಟ ಮನೇನಿ ಇದ್ದಾರೆ. ಈ ವರ್ಷದ ಆರಂಭದಲ್ಲಿ, ದಂಪತಿಗಳು ತಮ್ಮ 18ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು.

55

ಸಿನಿಮಾ ವಿಚಾರವಾಗಿ ಹೇಳುವುದಾದರೆ, ಮಹೇಶ್ ಬಾಬು ನಟನೆಯ 'ಗುಂಟೂರ್ ಕಾರ' ರಿಲೀಸ್‌ಗೆ ರೆಡಿಯಾಗಿದ್ದು, ಈ ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಆಕ್ಷನ್ ಕಟ್ ಹೇಳಿದ್ದಾರೆ. ಇದಲ್ಲದೆ ಬಾಹುಬಲಿ ಸೃಷ್ಟಿಕರ್ತ ಎಸ್ಎಸ್ ರಾಜಮೌಳಿ ಅವರೊಂದಿಗೆ ಇಂಡಿಯಾನಾ ಜೋನ್ಸ್ ಶೈಲಿಯ ಹೆಸರಿಡದ ಆಕ್ಷನ್ ಚಿತ್ರವನ್ನೂ ಮಾಡಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories