Actress Namitha: ‘ಮಲ್ಲ’, ‘ಇಂದ್ರ’ ಸಿನಿಮಾ ನಟಿ ನಮಿತಾ ಅವರು ಸದಾ ಗ್ಲಾಮರಸ್ ಪಾತ್ರಗಳಿಂದಲೇ ಸದ್ದು ಮಾಡಿದವರು. ಸದ್ಯ ಅವರು ಬ್ಯೂಟಿ ಪ್ರಾಡಕ್ಟ್ ಬ್ಯುಸಿನೆಸ್ ಜೊತೆಗೆ ರಾಜಕೀಯದಲ್ಲಿಯೂ ಆಕ್ಟಿವ್ ಆಗಿದ್ದಾರೆ. ಇದರ ಜೊತೆಗೆ ಫಿಟ್‌ನೆಸ್ ಕಡೆ ಗಮನ ಕೊಡೋಕೆ ಮರೆತಿಲ್ಲ.
ನಟಿ ನಮಿತಾ ಅವರು ಆಗಾಗ ದಪ್ಪ ಸಣ್ಣ ಆಗುತ್ತಿರುತ್ತಾರೆ. ಅದರಲ್ಲಿಯೂ 2017ರಲ್ಲಿ ಮದುವೆ ಆಗುವ ಟೈಮ್‌ನಲ್ಲಿ ಅವರು ದಪ್ಪ ಆಗಿದ್ದರು. ಆ ಬಳಿಕ ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕವೂ ಅವರು ಮತ್ತೆ ಸಣ್ಣಗಾಗಿ ದಪ್ಪಗಾಗಿದ್ದರು.
25
2024 ರಿಂದ ಫಿಟ್‌ನೆಸ್ ಕಡೆಗೆ ಗಮನ
ಈಗ ಅವರು ಸಣ್ಣಗಾಗಿದ್ದಾರೆ. 2024ರಿಂದ ಅವರು ಫಿಟ್‌ನೆಸ್ ಕಡೆಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋ, ವಿಡಿಯೋಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ.
35
91kg-65kg ತೂಕ ಇಳಿಕೆ
ಈಗ ಅವರು ಹೇಗೆ ಸಣ್ಣಗಾದೆ ಎಂಬುದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 91kg ಇದ್ದ ನಮಿತಾ ಅವರು 65kg ತೂಕ ಆಗಿದ್ದಾರಂತೆ. ಇದರ ಹಿಂದಿನ ಸೀಕ್ರೆಟ್ ಏನು ಎಂದು ಅವರು ರಿವೀಲ್ ಮಾಡಿದ್ದಾರೆ.
ಸ್ವಯಂ ಶಿಸ್ತು ಎಂದರೆ ನೆಪಗಳ ಬದಲಿಗೆ ನಿಮ್ಮ ಭವಿಷ್ಯವನ್ನು ಆರಿಸಿಕೊಳ್ಳುವುದು.
ಪ್ರತಿಯೊಂದು ವರ್ಕೌಟ್ (ವ್ಯಾಯಾಮ) ನಾನೇ ನನಗೆ ನೀಡಿದ ಭರವಸೆ.
ಪ್ರೇರಣೆ ಬರುತ್ತೆ ಮತ್ತು ಹೋಗುತ್ತೆ. ಆದರೆ ಶಿಸ್ತು ಪ್ರತಿದಿನ ಜೊತೆಗಿರುತ್ತೆ.
ಮನಸ್ಸು ನಿರ್ಧರಿಸಿದ ನಂತರವೇ ದೇಹ ಬದಲಾಗುತ್ತದೆ.
ಯಾವುದೇ ಸುಲಭ ಮಾರ್ಗಗಳಿಲ್ಲ. ಯಾವುದೇ ಮ್ಯಾಜಿಕ್ ಇಲ್ಲ. ಕೇವಲ ನಿರಂತರತೆ, ಬೆವರು ಮತ್ತು ತಾಳ್ಮೆ.
ನಾನು ಯಾರೊಂದಿಗೂ ಸ್ಪರ್ಧಿಸುತ್ತಿಲ್ಲ. ನಿನ್ನೆಗಿಂತ ಇಂದು ಬಲಶಾಲಿಯಾಗುತ್ತಿದ್ದೇನೆ.
ಫಲಿತಾಂಶಗಳು ಒಂದೇ ದಿನದಲ್ಲಿ ನಿರ್ಮಾಣವಾಗುವುದಿಲ್ಲ - ಅವು ಪ್ರತಿದಿನ ನಿರ್ಮಾಣವಾಗುತ್ತವೆ.
ತೋರಿಸಿಕೊಳ್ಳುವುದು ಕಷ್ಟದ ಭಾಗ. ಒಮ್ಮೆ ಮಾಡಿದರೆ, ನೀವು ಈಗಾಗಲೇ ಗೆದ್ದಿದ್ದೀರಿ
55
ಡಯೆಟ್ ಮುಖ್ಯ
ಫಿಟ್‌ನೆಸ್‌ನಲ್ಲಿ 80% ಡಯೆಟ್, 20% ವರ್ಕೌಟ್. ಇದರಲ್ಲಿ ಶಿಸ್ತು ಮುಖ್ಯವಾಗುತ್ತದೆ. ಬಾಡಿ ಆಗೋದು ಜಿಮ್‌ನಲ್ಲಿ ಅಲ್ಲ, ಕಿಚನ್‌ನಲ್ಲಿ ಅಲ್ಲ ಎಂದು ನಟ ಸೂರ್ಯ ಕೂಡ ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.