ಮಲೈಕಾ ಸದ್ಯ ಮಾಜಿ ಪತಿ ಬಗ್ಗೆ ಮಾತನಾಡಿದ್ದಾರೆ. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಜೊತೆ ಮದುವೆಯಾಗಿದ್ದ ಮಲೈಕಾ 18 ವರ್ಷಗಳ ಕಾಲ ಸಂಸಾರ ಮಾಡಿದ್ದಾರೆ. ಆದರೆ 2017ರಲ್ಲಿ ಮಲೈಕಾ, ಅರ್ಬಾಜ್ ಖಾನ್ ಅವರಿಂದ ದೂರ ಆದರು. ಮಲೈಕಾ ಮತ್ತು ಅರ್ಬಾಜ್ ವಿಚ್ಛೇದನ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅನೇಕರಿಗೆ ಅಚ್ಚರಿ ಮೂಡಿಸಿತ್ತು.