ಬಾಲಿವುಡ್ ಸ್ಟಾರ್ ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಕಂಗನಾ ವಿವಾದಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಕಂಗನಾ ಮಾತುಗಳು, ಹೇಳಿಕೆಗಳು ರಾಜಕೀಯಕ್ಕೆ ಸೇರುವ ಸುಳಿವು ನೀಡುತ್ತಿತ್ತು. ಅದರಲ್ಲೂ ಕಂಗನಾ ಬಿಜೆಪಿ ಸೇರ್ತಾರೆ ಎನ್ನುವ ಮಾತು ಆಗಾಗ ಕೇಳಿಬರುತ್ತಿರುತ್ತದೆ.
ಇದೀಗ ಕಂಗನಾ ರಣಾವತ್ ರಾಜಕೀಯ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ. ಕಂಗನಾ ರಾಜಕೀಯಕ್ಕೆ ಬರ್ತಾರೆ ಎನ್ನುವ ಬಗ್ಗೆ ಸುದ್ದಿ ಕೇಳಿಬರುತ್ತಿರುವುದು ಇವತ್ತು ನಿನ್ನೆಯಲ್ಲ. ಸುಮಾರು ಮೂರ್ನಾಲ್ಕು ವರ್ಷಗಳಿಂದ ಕೇಳಿಬರುತ್ತಿದೆ. ಇದೀಗ ರಾಜಕೀಯ ಎಂಟ್ರಿ ಬಗ್ಗೆ ಕಂಗನಾ ಮಾತನಾಡಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಕಂಗನಾ, ರಾಜಕೀಯದ ಬಗ್ಗೆ ಹೆಚ್ಚು ಆಸಕ್ತಿ ಇದೆ. ಆದರೆ ರಜಕೀಯಕ್ಕೆ ಸರ್ಪಡೆಯಾಗಲ್ಲ. ಸಿನಿಮಾ ಕಡೆ ಒತ್ತು ನೀಡುತ್ತೇನೆ. ರಾಜಕೀಯ ಆಧಾರಿತ ಸಿನಿಮಾಗಳನ್ನು ಹೆಚ್ಚು ಮಾಡುತ್ತೇನೆ ಎಂದು ಹೇಳಿದ್ದಾರೆ.
ರಾಜಕೀಯಕ್ಕೆ ವೃತ್ತಿಪರವಾಗಿ ಪ್ರವೇಶಿಸುವ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ.ನಾನು ನನ್ನ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದೀನಿ. ನಟಿಯಾಗಿ ನಾನು ರಾಜಕೀಯದಲ್ಲಿ ಆಸಕ್ತಿ ಇದೆ. ನಾನು ನನ್ನ ವೃತ್ತಿ ಜೀವನವನ್ನು 16 ವರ್ಷಗಳಲ್ಲಿ ಪ್ರಾರಂಭಿಸಿದೆ. ಅನೇಕ ಕಷ್ಟಗಳನ್ನು ದಾಟಿ ನಾನು ಇವತ್ತು ಸ್ಥಾನಕ್ಕೆ ಬಂದಿದ್ದೀನಿ' ಎಂದು ಹೇಳಿದ್ದಾರೆ.
ರಾಜಕೀಯ ನನ್ನ ಸಿನಿಮಾ ಕೆಲಸಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ಕಂಗನಾ ಹೇಳಿದರು. ನನಗೆ ಈಗ ಮತ್ತೆ ಹೊಸ ಜೀವನ ಪ್ರಾರಂಭ ಮಾಡಲು ಕ್ಯಾಪಾಸಿಟಿ ಇಲ್ಲ. ನಾನು ರಾಜಕೀಯದ ಬಗ್ಗೆ ಹೆಚ್ಚು ಒಳ್ಳೆಯ ಸಿನಿಮಾಗಳನ್ನು ಮಾಡುತ್ತೇನೆ' ಎಂದು ಹೇಳಿದರು.
ಕಂಗನಾ ಸಿನಿಮಾ ವಿಚಾರಕ್ಕೆ ಬರುವುದಾದರೇ ಈಗಾಗಲೇ ತೇಜಸ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸದ್ಯ ಎಮರ್ಜೆನ್ಸಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಲುಕ್ ರಿಲೀಸ್ ಆಗಿದ್ದು ಕಂಗನಾ ಮಾಜಿ ಪ್ರಧಾನಿ ಇಂದಿರಾಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಮತ್ತೊಂದು ಸಿನಿಮಾ ಕಂಗನಾ ಕೈಯಲ್ಲಿದೆ. ನಟನೆ ಜೊತೆಗೆ ಕಂಗನಾ ನಿರ್ದೇಶನ ಮತ್ತು ನಿರ್ಮಾಣ ಕೂಡ ಮಾಡುತ್ತಿದ್ದಾರೆ.