ಬ್ಯಾಕ್‌ಲೆಸ್ ಬ್ಲೌಸ್‌ನಲ್ಲಿ ಶ್ರುತಿ ಹಾಸನ್ ಹಾಟ್ ಲುಕ್: ನಿಮ್ಮನ್ನ ಬ್ಲ್ಯಾಕ್ ಡ್ರೆಸ್‌ನಲ್ಲಿ ನೋಡಿ ಬೇಜಾರಾಯ್ತು ಎಂದ ಫ್ಯಾನ್ಸ್‌!

First Published | Dec 29, 2023, 2:30 AM IST

ಸೌತ್ ನಟಿ ಶ್ರುತಿ ಹಾಸನ್ ಅವರು ಇತ್ತೀಚೆಗೆ ಗ್ಲಾಮರಸ್ ಗೊಂಬೆಯಂತೆ ಫೋಟೋಶೂಟ್ ಒಂದನ್ನು ಮಾಡಿಸಿಕೊಂಡಿದ್ದಾರೆ. ಇದರಲ್ಲಿ ನಟಿ ಬ್ಲ್ಯಾಕ್ ಸೀರೆ ಹಾಗೂ ಬ್ಯಾಕ್ಲೆಸ್ ಬ್ಲೌಸ್ ಧರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಟಾಲಿವುಡ್ ಸ್ಟಾರ್ ಹೀರೋಯಿನ್ ಶ್ರುತಿ ಹಾಸನ್ ತನ್ನ ಸೌಂದರ್ಯವನ್ನು ತೋರಿಸಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಕಪ್ಪು ಸೀರೆಯಲ್ಲಿ ವಿಭಿನ್ನ ಭಂಗಿಯಲ್ಲಿರುವ ನಟಿಯ ಇತ್ತೀಚಿನ ಫೋಟೋಗಳಿಗೆ ನೆಟ್ಟಿಗರು ಬಗೆ ಬಗೆಯ ಕಾಮೆಂಟ್‌ ಮಾಡುತ್ತಿದ್ದಾರೆ.

ಶ್ರುತಿ ಹಾಸನ್ ಶೇರ್ ಮಾಡಿರುವ ಫೋಟೋಗಳು ಹಾಗೂ ಅವುಗಳಲ್ಲಿರುವ ಪೋಸ್ ನೆಟ್ಟಿಗರಿಗೆ ಭಾರೀ ಇಷ್ಟವಾಗಿದೆ. ಶ್ರುತಿ ಹಾಸನ್ ಅವರ ಶೈಲಿಯನ್ನು ಹೊಗಳುತ್ತಿದ್ದು, ನೀವು ಬ್ಲ್ಯಾಕ್ ಕಲರ್‌ನ ಅಷ್ಟೊಂದು ಇಷ್ಟಪಡುತ್ತೀರಾ ಹಾಗೂ ನಿಮ್ಮನ್ನ ಬ್ಲ್ಯಾಕ್ ಡ್ರೆಸ್‌ನಲ್ಲಿ ನೋಡಿ ಬೇಜಾರಾಯ್ತು ಅಂತೆಲ್ಲ ಕಾಮೆಂಟ್ ಮಾಡಿದ್ದಾರೆ.

Tap to resize

ಶ್ರುತಿ ಹಾಸನ್ ಕಲರ್​ಫುಲ್ ಡ್ರೆಸ್​ಗಿಂತ ಯಾವಾಗಲೂ ಕಪ್ಪು ಬಣ್ಣವನ್ನೇ ಆರಿಸಿಕೊಳ್ಳುತ್ತಾರೆ. ನಟಿ ಬ್ಲ್ಯಾಕ್ ಸೀರೆ ಹಾಗೂ ಬ್ಯಾಕ್ಲೆಸ್ ಬ್ಲೌಸ್‌ನಲ್ಲಿ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದು, ವಿವಿಧ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

ಕಮಲ್ ಹಾಸನ್ ಎಂದು ಬೋಲ್ಡ್ ಹೆಸರನ್ನು ಹೊಂದಿದ್ದರೂ ತನ್ನದೇ ಆದ ಪ್ರತಿಭೆ ಮತ್ತು ಗ್ಲಾಮರ್ ನಿಂದ ಸ್ಟಾರ್ ಹೀರೋಯಿನ್ ಎಂಬ ಹೆಸರು ಪಡೆದವರು ಅವರ ಮಗಳು ಶ್ರುತಿ ಹಾಸನ್. ಸೋಷಿಯಲ್ ಮೀಡಿಯಾದಲ್ಲಿ ನಿಯಮಿತವಾಗಿ ಅಪ್ ಡೇಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ ನಟಿ.

ಟಾಲಿವುಡ್ ಬಿಗ್ ಸ್ಟಾರ್‌ಗಳಾದ ಬಾಲಯ್ಯ ಮತ್ತು ಚಿರಂಜೀವಿ ಜೊತೆ ಟಾಲಿವುಡ್‌ನಲ್ಲಿ ಎರಡು ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಶ್ರುತಿ ಹಾಸನ್ ಸೋಷಿಯಲ್ ಮೀಡಿಯಾದಲ್ಲಿ ಬೋಲ್ಡ್ ಲುಕ್‌ನಿಂದ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಶ್ರುತಿ ಹಾಸನ್ ಸ್ವಲ್ಪ ಗ್ಯಾಪ್ ಕೊಟ್ಟು ಸದ್ಯ ತೆಲುಗಿನಲ್ಲಿ ಸತತ ಸಿನಿಮಾ ಮಾಡುತ್ತಿದ್ದಾರೆ. ಅದರ ಭಾಗವಾಗಿ, ಅವರು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಸಲಾರ್​ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಲಾರ್ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಆದರೆ ಈ ಸಿನಿಮಾದೊಂದಿಗೆ 2023ರಲ್ಲಿ ಶ್ರುತಿ ಹಾಸನ್ ನಟಿಸಿದ ಎಲ್ಲಾ (ನಾಲ್ಕು) ಸಿನಿಮಾಗಳು ಸೂಪರ್ ಹಿಟ್ ಆದವು. ಈ ವರ್ಷದ ಆರಂಭದಲ್ಲಿ ಶ್ರುತಿ ಹಾಸನ್ ವೀರಸಿಂಹ ರೆಡ್ಡಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.

ಟಾಲಿವುಡ್‌ನಲ್ಲಿ ಸಾಲು ಸಾಲು ಆಫರ್‌ಗಳು ಬರುತ್ತಿದ್ದರೂ ಆಯ್ದ ಚಿತ್ರಗಳನ್ನು ಮಾತ್ರ ಮಾಡುತ್ತಿದ್ದಾರೆ ಶ್ರುತಿ ಹಾಸನ್. ನಟಿಯ ಇತ್ತೀಚಿನ ಚಿತ್ರಗಳು 2 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿವೆ.

Latest Videos

click me!