ಶ್ವೇತ ವರ್ಣದ ಡ್ರೆಸ್‌ನಲ್ಲಿ ಕಂಗೊಳಿಸಿದ ಕೃತಿ ಸನೋನ್‌: ಹಾಲಿನಷ್ಟೇ ನೀವು ಬೆಳ್ಳಗಿದ್ದೀರಾ ಎಂದ ಫ್ಯಾನ್ಸ್‌!

First Published | Jan 26, 2024, 1:30 AM IST

ಬಾಲಿವುಡ್‌ ನಟಿ ಕೃತಿ ಸನೋನ್ ಬಾಲಿವುಡ್ ಸ್ಟಾರ್ ಹೀರೋಯಿನ್‌ಗಳಲ್ಲಿ ಒಬ್ಬರಾಗಿದ್ದಾರೆ. ಅಲ್ಲದೇ ಹಿಂದಿಯಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಮ್ಮೆ ತಮ್ಮ ಫೋಟೋಗಳ ಮೂಲಕ ಸೌಂದರ್ಯ ರಾಶಿಯನ್ನು ಹೊರಗೆಡವಿದ್ದಾರೆ. 

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಬಾಲಿವುಡ್‌ ನಟಿ ಕೃತಿ ಸನೋನ್, ಆಗಾಗ ತಮ್ಮ ಫೋಟೋ ಗೊಂಚಲುಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ. ಸದ್ಯ ಬಿಳಿ ವರ್ಣದ ಬಾಡಿಕಾನ್ ಡ್ರೆಸ್‌ನಲ್ಲಿ ಹಾಟ್ ಆಗಿ ಮಿಂಚಿದ್ದಾರೆ.

ಸಾಂಪ್ರದಾಯಿಕ ಲುಕ್‌ಗಳಿಗಿಂತ ಮಾಡರ್ನ್‌ ಲುಕ್‌ನಲ್ಲಿಯೇ ಕೃತಿ ಎದುರಾಗುತ್ತಿರುತ್ತಾರೆ. ಇದೀಗ ಹೊಸ ಬಗೆಯ ಲುಕ್‌ ಮೂಲಕ ತಮ್ಮ ಅಭಿಮಾನಿಗಳ ಮುಂದೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ.

Latest Videos


ಕೃತಿ ಸನೋನ್ ಬಿಳಿ ಉಡುಪಿನ ಫೋಟೋ ನೋಡಿದ ಅವರ ಫ್ಯಾನ್ಸ್‌ ಬಗೆಬಗೆಯ ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಾಲಿನಷ್ಟೇ ಬೆಳ್ಳಗಿದ್ದೀರಾ ಎಂದು ಕಾಂಪ್ಲಿಮೆಂಟ್‌ ಕೊಡುತ್ತಿದ್ದಾರೆ.

ಕೃತಿ ಸನೋನ್ ಬಾಲಿವುಡ್‌ನಲ್ಲಿ ನಂಬರ್ ಒನ್ ನಾಯಕಿಯಾಗಿ ವಿಶೇಷ ಮನ್ನಣೆ ಪಡೆದರು. ಇತ್ತೀಚೆಗೆ ಆದಿಪುರುಷ ಚಿತ್ರದಲ್ಲಿ ಕೃತಿ ಸನೋನ್ ಸೀತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆದಿಪುರುಷ ಸಿನಿಮಾ ಹೇಳಿಕೊಳ್ಳುವ ಸಕ್ಸಸ್ ನೀಡಲಿಲ್ಲ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, 'ತೇರಿ ಬಾಥೋಮ್ ಐಸಾ ಉಲ್ಜಾ ಜಿಯಾ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಫೆಬ್ರವರಿ 9 ರಂದು ರಿಲೀಸ್‌ ಆಗಲಿದೆ. ಇದರ ಜತೆಗೆ ದಿ ಕ್ರೂವ್‌ ಮತ್ತು ದೋ ಪಟ್ಟಿ ಸಿನಿಮಾಗಳಲ್ಲೂ ಕೃತಿ ನಟಿಸುತ್ತಿದ್ದಾರೆ

ಬ್ಯೂಟಿಫುಲ್ ನಟಿ ಕೃತಿ ಸನೋನ್ ಅವರು ಮಹೇಶ್ ಬಾಬು ಅಭಿನಯದ 'ಒಂದು.. ನೆನೊಕ್ಕಡಿನೆ' ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು. ದೆಹಲಿಯಲ್ಲಿ ಜನಿಸಿದ ಈ ಯುವತಿ ಬಾಲಿವುಡ್ ಬದಲಿಗೆ ಟಾಲಿವುಡ್ ಮೂಲಕ ಇಂಡಸ್ಟ್ರಿಗೆ ಪ್ರವೇಶಿಸಿದ್ದಾರೆ.

click me!