ಭಾರತದ ಅತಿ ದೊಡ್ಡ ರಿಯಾಲಿಟಿ ಶೋನ ಗಿಫ್ಟ್ ಹ್ಯಾಂಪರ್‌ನಲ್ಲಿ ಇಷ್ಟೊಂದು ಬೆಳೆಬಾಳೋ ವಸ್ತು ಇರುತ್ತಾ?

Published : Jan 25, 2024, 04:28 PM ISTUpdated : Jan 25, 2024, 04:47 PM IST

ಭಾರತದ ಅತಿ ದೊಡ್ಡ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು, ಸೆಲೆಬ್ರಿಟಿ ಟಾಕ್ ಶೋ ಕಾಫಿ ವಿತ್‌ ಕರಣ್‌. ಆದರೆ ಈ ಲಕ್ಸುರಿಯಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸೋ ಸೆಲೆಬ್ರಿಟಿಗಳಿಗೆ ನೀಡೋ ಗಿಫ್ಟ್ ಹ್ಯಾಂಪರ್‌ನಲ್ಲಿ ಏನೆಲ್ಲಾ ಇರುತ್ತೆ ಅನ್ನೋದು ನಿಮ್ಗೆ ಗೊತ್ತಿದ್ಯಾ?

PREV
19
ಭಾರತದ ಅತಿ ದೊಡ್ಡ ರಿಯಾಲಿಟಿ ಶೋನ ಗಿಫ್ಟ್ ಹ್ಯಾಂಪರ್‌ನಲ್ಲಿ ಇಷ್ಟೊಂದು ಬೆಳೆಬಾಳೋ ವಸ್ತು ಇರುತ್ತಾ?

ಭಾರತದ ಅತಿ ದೊಡ್ಡ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದು, ಸೆಲೆಬ್ರಿಟಿ ಟಾಕ್ ಶೋ ಕಾಫಿ ವಿತ್‌ ಕರಣ್‌. ಬಾಲಿವುಡ್‌ನ ಖ್ಯಾತ ನಟ-ನಟಿಯರಾದ ಆಲಿಯಾ ಭಟ್, ದೀಪಿಕಾ ಪಡುಕೋಣೆ, ನೀತು ಕಪೂರ್ ಮತ್ತು ಜೀನತ್ ಅಮಾನ್ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದಾರೆ. ಈ ಲಕ್ಸುರಿಯಸ್‌ ರಿಯಾಲಿಟಿ ಶೋನಲ್ಲಿ ಬರುವ ಸೆಲೆಬ್ರಿಟಿಗಳಿಗೆ ಸಿಗೋ ಹ್ಯಾಂಪರ್ ಸಹ ತುಂಬಾ ಬೆಲೆಬಾಳುವದ್ದಾಗಿರುತ್ತದೆ.

29

ಕರಣ್ ಜೋಹರ್ ಬಹಿರಂಗಪಡಿಸಿದಂತೆ ಹ್ಯಾಂಪರ್‌ನಲ್ಲಿ ಹಲವು ಬೆಲೆಬಾಳುವ ವಸ್ತುಗಳು ಹಾಗೂ ಜ್ಯುವೆಲ್ಲರಿ ಇರುತ್ತದೆ. ತಯಾನಿ ಜ್ಯುವೆಲ್ಲರಿಯ ರಾಜಮನೆತನದ ಆಭರಣಗಳು ಸುಮಾರು 6-9 ಲಕ್ಷ ರೂ. ಬೆಲೆ ಬಾಳುತ್ತದೆ.
 

39

30000-50000 ರೂ ಮೌಲ್ಯದ GoPro HERO11 ಕ್ಯಾಮ್, 43,000  ರೂ ಮೌಲ್ಯದ Sonos ಮೂವ್ ಸ್ಪೀಕರ್ ಮತ್ತು Google Pixel 8 Pro - 106,999 ರೂ. ಬೆಲೆ ಬಾಳುವ ಕೆಲವು ಟೆಕ್ ವಸ್ತುಗಳನ್ನು ಇದು ಒಳಗೊಂಡಿರುತ್ತದೆ.

49

ಇದರೊಂದಿಗೆ 60,000 ರೂಪಾಯಿ ಮೌಲ್ಯದ ಎಲೈಟ್ ಮಸಾಜ್ ಗನ್, 15,000 ರೂಪಾಯಿ ಮೌಲ್ಯದ YSL ಪರ್ಫ್ಯೂಮ್, 6000 ರೂಪಾಯಿ ಮೌಲ್ಯದ L'OCCTIANE ಹ್ಯಾಂಪರ್, 25,000 ರೂಪಾಯಿ ಮೌಲ್ಯದ ನಪ್ಪಾ ಡೋರಿ ಐಟಂಗಳು, ಆನಂದಿನಿ ಹಿಮಾಲಯ ಟೀ ಹ್ಯಾಂಪರ್ ಇರುತ್ತದೆ.

59

ಅಷ್ಟೇ ಅಲ್ಲ, ಹ್ಯಾಂಪರ್‌ನಲ್ಲಿ ಐಷಾರಾಮಿ ಪಾನೀಯಗಳು ಮತ್ತು ಗೌರ್ಮೆಟ್ ಚಾಕೊಲೇಟ್‌ಗಳು ಮತ್ತು ಕುಕೀಗಳು ಮತ್ತು ಕಾಫಿ ವಿತ್ ಕರಣ್ ಮಗ್‌ ಇರುತ್ತದೆ.

69

ಹ್ಯಾಂಪರ್‌ನಲ್ಲಿ ಒಂದೆರಡು ಹೆಚ್ಚು ಐಷಾರಾಮಿ ವಸ್ತುಗಳು ಮತ್ತು ಅತ್ಯಾಕರ್ಷಕ ಹೈಟೆಕ್ ಉತ್ಪನ್ನವಿದೆ. ಇದನ್ನು ಅತಿಥಿಗಳು ಇಷ್ಟಪಡುತ್ತಾರೆ ಅನ್ನೋದು ನಮಗೆ ಸಂಪೂರ್ಣ ಖಚಿತವಾಗಿದೆ. ಆದರೆ ಅವುಗಳ ಬಗ್ಗೆ ನಾವು ಹೇಳುವುದಿಲ್ಲ ಎಂದು ಕರಣ್ ಜೋಹರ್ ಹೇಳಿದರು.

79

ಕಾಫಿ ವಿತ್ ಕರಣ್ 8ರಲ್ಲಿ ಸೈಫ್ ಅಲಿ ಖಾನ್ ಅವರ ತಾಯಿ ಶರ್ಮಿಳಾ ಟ್ಯಾಗೋರ್, ನೀತು ಕಪೂರ್ ಮತ್ತು ರೋಹಿತ್ ಶೆಟ್ಟಿ ಜೊತೆ ಬಂದ ಜೀನತ್ ಅಮಾನ್, ಅಜಯ್ ದೇವಗನ್ ಸೇರಿದಂತೆ ಸೆಲೆಬ್ರಿಟಿಗಳು ಇಂಟ್ರೆಸ್ಟಿಂಗ್ ಎಪಿಸೋಡ್ ಹೊಂದಿದ್ದರು.
 

89

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕಾರ್ಯಕ್ರಮದ ಆರಂಭಿಕ ಅತಿಥಿಗಳಾಗಿದ್ದರು. ಕಾಫಿ ಅವಾರ್ಡ್ಸ್ ಸಮಯದಲ್ಲಿ ಅವರನ್ನು ಒಳಗೊಂಡ ಸಂಚಿಕೆಯನ್ನು ಅತ್ಯುತ್ತಮ ಸಂಚಿಕೆ ಎಂದು ಆಯ್ಕೆ ಮಾಡಲಾಯಿತು.

99

ಕರಣ್ ಜೋಹರ್ ಅವರ ಮುಂಬರುವ ನಿರ್ಮಾಣದ ಬಿಡುಗಡೆಗಾಗಿ ಕಾಯುತ್ತಿದ್ದಾರೆ, ಸಿದ್ಧಾರ್ಥ್ ಮಲ್ಹೋತ್ರಾ, ದಿಶಾ ಪಟಾನಿ ಮತ್ತು ರಾಶಿ ಖನ್ನಾ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ಚಿತ್ರವು ಕಳೆದ ವರ್ಷ ಡಿಸೆಂಬರ್‌ನಲ್ಲಿ ಥಿಯೇಟರ್‌ಗಳಲ್ಲಿ ಬರಲು ಯೋಜಿಸಲಾಗಿತ್ತು, ಆದರೆ ಈಗ ಮಾರ್ಚ್ 15ರಂದು ರಿಲೀಸ್ ಮಾಡಲು ನಿರ್ಧರಿಸಲಾಗಿದೆ.

Read more Photos on
click me!

Recommended Stories