ಟೀಕೆಗಳ ನಡುವೆಯೇ ಗ್ರಿಷ್ಣೇಶ್ವರ ಜ್ಯೋತಿರ್ಲಿಂಗ ದರ್ಶನ ಪಡೆದ ನಟಿ ಸಾರಾ ಆಲಿ ಖಾನ್

First Published | Jan 25, 2024, 3:55 PM IST

ಬಾಲಿವುಡ್ ನಟಿ ಸಾರಾ ಆಲಿ ಖಾನ್ ಹೆಚ್ಚಾಗಿ ದೇಗುಲ ದರ್ಶನ ಮಾಡುತ್ತ, ದೇವರ ಆಶೀರ್ವಾದ ಪಡೆಯುತ್ತಿರುತ್ತಾರೆ. ಈ ಬಾರಿಯೂ ಟೀಕೆಗಳ ನಡೆ ಸಾರಾ  ಗ್ರಿಷ್ಣೇಶ್ವರ  ಜ್ಯೋತಿರ್ಲಿಂಗ್ ದರ್ಶನ ಮಾಡಿದ್ದಾರೆ. 
 

ಬಾಲಿವುಡ್ ನವಾಬ್ ಸೈಫ್ ಆಲಿ ಖಾನ್ ಪುತ್ರಿ ಖ್ಯಾತ ನಟಿ ಸಾರಾ ಆಲಿಖಾನ್  (Sara Ali Khan) ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಗ್ರಿಷ್ಣೇಶ್ವರ ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಿ ಲಿಂಗ ದರ್ಶನ ಮಾಡಿದ್ದಾರೆ. 

ದೇಶದಲ್ಲಿರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಗ್ರಿಷ್ಣೇಶ್ವರ ಜ್ಯೋತಿರ್ಲಿಂಗ ದೇಶದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿಗೆ ಭೇಟಿ ನೀಡಿ ಭಕ್ತಿ ಪರವಶಳಾಗಿರುವ ಸಾರಾ, ಲಿಂಗ ದರ್ಶನದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

Tap to resize

ದೈವ ಭಕ್ತೆಯಾಗಿರುವ ಸಾರಾ ಆಲಿಖಾನ್ ಹೆಚ್ಚಾಗಿ ದೇಶದ ವಿವಿಧೆಡೆಯಲ್ಲಿರುವ ದೇಗುಲಗಳಿಗೆ ಭೇಟಿ ನೀಡಿ, ದೇವರ ದರ್ಶನ ಪಡೆದು ಬರುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಸಾಕಷ್ಟು ಟೀಕೆಗಳನ್ನು ಸಹ ಪಡೆಯುತ್ತಿರುತ್ತಾರೆ. 

ಶಿವಲಿಂಗದ ಎದುರು ಭಕ್ತಿಯಿಂದ ಕುಳಿತು, ಧ್ಯಾನಿಸುತ್ತಿರುವ, ಕೈ ಮುಗಿದು ಬೇಡುತ್ತಿರುವ ಹಲವಾರು ಫೋಟೋಗಳನ್ನು ಸಾರಾ ಆಲಿಖಾನ್ ಶೇರ್ ಮಾಡಿದ್ದು, ಅದಕ್ಕೆ ಜೈ ಭೋಲೆನಾಥ್ ಎಂದು ಕ್ಯಾಪ್ಶನ್ ಸಹ ಕೊಟ್ಟಿದ್ದಾರೆ. 

ಸೈಫ್ ಆಲಿ ಖಾನ್ ಮಗಳಾಗಿ (Saif Ali Khan), ಜೊತೆಗೆ ಓರ್ವ ಮುಸ್ಲಿಂ ಯುವತಿಯಾಗಿ ದೇವಾಲಯಗಳಿಗೆ ಭೇಟಿ ನೀಡುವುದಕ್ಕಾಗಿ ಸಾರಾ ಹೆಚ್ಚಾಗಿ ಟ್ರೋಲ್ ಮತ್ತು ಟೀಕೆಗೆ ಒಳಗಾಗುತ್ತಿರುತ್ತಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸಾರ ದೇಗುಲ ದರ್ಶನ ಮಾಡುತ್ತಲೇ ಇರುತ್ತಾರೆ. 

ಹಿಂದೊಮ್ಮೆ ಈ ಟೀಕೆಗಳ ಬಗ್ಗೆ ಅವರನ್ನು ಪ್ರಶ್ನಿಸಿದಾಗ "ಯಾರು ಇಷ್ಟಪಡಲಿ, ಇಷ್ಟಪಡದೆ ಇರಲಿ, ನಾನು ದೇಗುಲಕ್ಕೆ ಭೇಟಿ ನೀಡುವುದನ್ನು ಮುಂದುವರೆಸುವೆ, ಜನರಿಗೆ ಟೀಕಿಸುವುದೇ ಕೆಲಸ, ಅದರ ಬಗ್ಗೆ ನಾನು ಯೋಚಿಸೋದಿಲ್ಲ ಎಂದು ಸಾರಾ ಹೇಳಿದ್ದರು.

ಸಾರಾ ಆಲಿ ಖಾನ್ ತಂದೆ ಸೈಫ್ ಆಲಿ ಖಾನ್ ಮುಸ್ಲಿಂ ನಿಜ. ಆದರೆ ಸಾರಾ ತಾಯಿ ಅಮೃತಾ ಸಿಂಗ್ ಹಿಂದೂ. ಆಕೆ ಹಿಂದೂ ಧರ್ಮವನ್ನು, ನಂಬಿಕೆಯನ್ನು ಪಾಲಿಸುವುದರಲ್ಲಿ ಏನು ತಪ್ಪಿದೆ ಎಂದು ಹಲವು ಮಂದಿ ಸಾರಾಗೆ ಬೆಂಬಲವನ್ನೂ ನೀಡಿದ್ದಾರೆ. 

Latest Videos

click me!