Black Dress ಧರಿಸಿ ಬ್ಯಾಕ್​ಲೆಸ್ ಆಗಿ ಕಾಣಿಸಿಕೊಂಡ Krithi: ಈ ಸಲ ನಿನ್ನ ಸಿನಿಮಾ ಹಿಟ್ ಅಂದ ಫ್ಯಾನ್ಸ್‌!

First Published | Oct 15, 2023, 1:00 AM IST

ಕರ್ನಾಟಕ ಮೂಲದ ಚೆಲುವೆ ಕೃತಿ ಶೆಟ್ಟಿ, ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇದೀಗ ಮಲಯಾಳಂ ಚಿತ್ರರಂಗಕ್ಕೂ ಕೃತಿ ಕಾಲಿರಿಸಿದ್ದಾರೆ. ಇದೀಗ ನಟಿಯ ಹಾಟ್‌ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.
 

ಕರ್ನಾಟಕ ಮೂಲದ ನಟಿ ಕೃತಿ ಶೆಟ್ಟಿ, ತೆಲುಗು, ತಮಿಳಿನಲ್ಲಿ ಗಮನ ಸೆಳೆಯುತ್ತಿದ್ದಾರೆ.  ಕೃತಿ ಶೆಟ್ಟಿ ನಟನೆ ಆರಂಭಿಸಿದ್ದು ಹಿಂದಿ ಸಿನಿಮಾ ಮೂಲಕ. ಹೃತಿಕ್ ರೋಷನ್ ನಟನೆಯ ‘ಸೂಪರ್ 30’ ಸಿನಿಮಾದಲ್ಲಿ ಬಾಲನಟಿಯಾಗಿ ಕೃತಿ ನಟಿಸಿದ್ದರು.

ಇತ್ತೀಚೆಗೆ ಕೃತಿ ಶೆಟ್ಟಿ ಬ್ಲ್ಯಾಕ್ ಡ್ರೆಸ್ ಧರಿಸಿ ಬ್ಯಾಕ್​ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿ ಫೋಟೋಗಳಲ್ಲಿ ಬೋಲ್ಡ್ ಆಗಿ ಕಾಣಿಸಿದ್ದು ಅವರ ಫೋಟೋಗಳು ಇದೀಗ ಪಡ್ಡೆ ಹುಡುಗರ ನಿದ್ದೆಗೆಡಿಸಿವೆ.

Tap to resize

ನಟಿ ಕೃತಿ ಶೆಟ್ಟಿ ಹೆಚ್ಚಾಗಿ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಲೇಟೆಸ್ಟ್ ಫೋಟೋ ನೋಡಿದ ನೆಟ್ಟಿಗರು ಲುಕಿಂಗ್ ಹಾಟ್, ಮಾಡ್ರನ್ ಬ್ಯೂಟಿ, ಈ ಸಲ ನಿನ್ನ ಸಿನಿಮಾ ಹಿಟ್ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ನಟಿಯ ಬೋಲ್ಡ್ ಫೋಟೋಸ್​ಗೆ ಫಿದಾ ಆಗಿದ್ದಾರೆ.

ಕೃತಿ ಶೆಟ್ಟಿ ‘ಉಪ್ಪೇನ’ ಚಿತ್ರದ ಮೂಲಕ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಸಖತ್‌ ಹಿಟ್‌ ಆಗಿತ್ತು.  ನಾಯಕಿಯಾಗಿ ಎಂಟ್ರಿ ಕೊಟ್ಟ ಮೊದಲ ಸಿನಿಮಾದಲ್ಲೇ ತನ್ನ ಅಭಿನಯ ಮತ್ತು ಸೌಂದರ್ಯದ ಕೃತಿ ಸಿನಿ ಪ್ರೇಕ್ಷಕರ ಮನಗೆದ್ದರು.  

ಉಪ್ಪೇನಾ ನಂತರ ನಾನಿ ಜತೆ ‘ಶ್ಯಾಮ್ ಸಿಂಗ ರಾಯ್’ ಹಾಗೂ ನಾಗ ಚೈತನ್ಯ ಜೊತೆ ‘ಬಂಗಾರರಾಜು’ ಸಿನಿಮಾಗಳಲ್ಲಿ ನಟಿಸಿ ತೆಲುಗು ಪ್ರೇಕ್ಷಕರಿಗೆ ಹತ್ತಿರವಾದರು. 

ಇತ್ತೀಚಿಗೆ ಕೃತಿ ನಟಿಸಿದ ಸಾಲು ಸಾಲು ಚಿತ್ರಗಳ ಫ್ಲಾಪ್‌ ಆಗಿದ್ದಲ್ಲದೇ ಅವರಿಗೆ ಬರುತ್ತಿದ್ದ ಆಫರ್‌ಗಳು ದಿಢೀರ್ ಕಡಿಮೆಯಾಗಿದೆ. ಇತ್ತೀಚೆಗಷ್ಟೇ ಕೃತಿ ‘ಕಸ್ಟಡಿ’ ಸಿನಿಮಾ ಮೂಲಕ ಕಮ್‌ಬ್ಯಾಕ್‌ ಮಾಡಿದ್ದಾರೆ.  

Latest Videos

click me!