ಹೇಗಿದೆ ನೋಡಿ ಅಲ್ಲು ಅರ್ಜುನ್ ಹೈದರಾಬಾದ್ ಭವ್ಯ ಬಂಗಲೆ

Published : Oct 14, 2023, 05:27 PM IST

ಹೈದರಾಬಾದಿನಲ್ಲಿರುವ ಅಲ್ಲು ಅರ್ಜುನ್ ಮನೆ ಸೌಂದರ್ಯ ಮತ್ತು ಸರಳತೆಯ ಸಂಕೇತ. ವಿಶಿಷ್ಟವಾದ ಬಾಕ್ಸ್ ಆಕಾರದಲ್ಲಿ ವಿನ್ಯಾಸಗೊಳಿಸಲಾದ ಇದು ವಾಸ್ತು ಶಿಲ್ಪದ ಸುಂದರ ಬಂಗಲೆ. ಹೈದರಾಬಾದ್ ನಲ್ಲಿರುವ ಅಲ್ಲು ಅರ್ಜುನ್ ಮನೆಯ ಸುಂದರ ನೋಟ ಇಲ್ಲಿದೆ.   

PREV
110
ಹೇಗಿದೆ ನೋಡಿ ಅಲ್ಲು ಅರ್ಜುನ್ ಹೈದರಾಬಾದ್ ಭವ್ಯ ಬಂಗಲೆ

ಗ್ಲಾಮರಸ್ ಸ್ಟೈಲ್ ಐಕಾನ್, ಅದ್ಭುತ ಡ್ಯಾನ್ಸರ್ ಮತ್ತು ಅದ್ಭುತ ನಟ ಅಲ್ಲು ಅರ್ಜುನ್ (Allu Arjun) ಬಗ್ಗೆ ವಿವರಣೆಯೇ ಬೇಕಾಗಿಲ್ಲ. ಟಾಲಿವುಡ್ ಎಂದೂ ಕರೆಯಲ್ಪಡುವ ತೆಲುಗು ಚಲನಚಿತ್ರೋದ್ಯಮದ ಹಾಟ್ ಮೆಗಾಸ್ಟಾರ್.  
 

210

ಅಲ್ಲು ಅರ್ಜುನ್ 2003 ರಲ್ಲಿ ಗಂಗೋತ್ರಿ ಚಿತ್ರದ ಮೂಲಕ ಟಾಲಿವುಡ್ ಗೆ ಪಾದಾರ್ಪಣೆ ಮಾಡಿದರು ಮತ್ತು ಅಂದಿನಿಂದ ಅವರು ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 2004ರಲ್ಲಿ ತೆರೆಕಂಡ 'ಆರ್ಯ' ಚಿತ್ರದಲ್ಲಿನ ಅಭಿನಯದಿಂದ ಹಿಡಿದು, ಪುಷ್ಫ ಚಿತ್ರದವರೆಗೂ ಮನರಂಜನೆ ನೀಡುವಂತಹ ಚಿತ್ರಗಳನ್ನೇ ಇವರು ನೀಡಿದ್ದಾರೆ. 
 

310

ನಟಿಸಿದ ಪ್ರತಿಯೊಂದು ಚಿತ್ರದಲ್ಲೂ ಅಲ್ಲೂ ಅರ್ಜುನ್ ಅದ್ಭುತವಾಗಿ ನಟಿಸಿದ್ದು, ಅವರ ನಟನೆಗಾಗಿ ಮೂರು ನಂದಿ ಪ್ರಶಸ್ತಿಗಳು ಮತ್ತು ಐದು ಫಿಲ್ಮ್ಫೇರ್ ಪ್ರಶಸ್ತಿಗಳನ್ನು ಪಡೆದ ಅವರು ದೇಶಾದ್ಯಂತ ಕೋಟ್ಯಾಂತರ ಹೃದಯಗಳನ್ನು ಗೆದ್ದಿದ್ದಾರೆ.
 

410

ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ (Allu Sneha Reddy). ಇವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆಯನ್ ಮತ್ತು ಅರ್ಹ. ಮಗಳು ಅರ್ಹ ಈಗಾಗಲೇ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಪತ್ನಿ ಸ್ನೇಹಾ ಪತಿ ಅರ್ಜುನ್ ಮತ್ತು ಮಕ್ಕಳ ಫೋಟೋ, ಮಕ್ಕಳ ಜೊತೆ ಅರ್ಜುನ್ ಆಟಗಳ ವಿಡಿಯೋವನ್ನು ಶೇರ್ ಮಾಡುತ್ತಿರುತ್ತಾರೆ. ಜೊತೆಗೆ ತಮ್ಮ ಮನೆಯ ಸುಂದರ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. 
 

510

ಅಲ್ಲು ಅರ್ಜುನ್ ಅವರ ಮನೆ ಹೈದರಾಬಾದ್ ನ ಜುಬ್ಲಿ ಹಿಲ್ಸ್ ನಲ್ಲಿ ಮನೆ ಮಾಡಿದ್ದಾರೆ. ಮನೆಯ ಮೌಲ್ಯ ಸುಮಾರು 100 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಮನೆ 8000 ಚದರ ಅಡಿ ವಿಸ್ತೀರ್ಣದಲ್ಲಿದೆ ಮತ್ತು 2 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಅಂದಾಜಿಸಲಾಗಿದೆ.
 

610

ಆಫ್ ವೈಟ್ ಬಣ್ಣದ ಬೃಹತ್ ಬಂಗಲೆಯಲ್ಲಿ ಮಿನಿಮಲಿಸ್ಟ್ ಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮನೆಯ ಮುಂದೆ ದೊಡ್ಡದಾದ ಗಾರ್ಡನ್ ಸಹ ಇದೆ. ಇಲ್ಲಿ ಅಲ್ಲು ಅರ್ಜುನ್ ಹೆಚ್ಚಾಗಿ ತಮ್ಮ ಮಕ್ಕಳ ಜೊತೆ ಸಮಯ ಕಳೆಯುತ್ತಿರುತ್ತಾರೆ. 
 

710

ಅಲ್ಲು ಅರ್ಜುನ್ ಅವರ ಲಿವಿಂಗ್ ರೂಮ್ (Living Room) ತುಂಬಾನೆ ದೊಡ್ಡದಾಗಿದ್ದು, ಇಲ್ಲಿ ವಾಲ್ ಪೈಂಟಿಂಗ್ ಗೆ ವಿರುದ್ಧವಾದ ಕಪ್ಪು ಬಣ್ಣದ ಸೋಫಾ ಸೆಟ್ ಗಳನ್ನು ಇಡಲಾಗಿದೆ. ಇವರ ಮನೆಯಲ್ಲೊಂದು ಫ್ಯಾಮಿಲಿ ರೂಮ್ ಸಹ ಇದೆ. ಇಲ್ಲಿ ಮಕ್ಕಳ ಜೊತೆ ಅಲ್ಲು ಅರ್ಜುನ್, ಟಿವಿ ನೋಡೋಣ, ಆಡೋದು ಮಾಡ್ತಾರೆ. 
 

810

ಮಕ್ಕಳಿಗಾಗಿಯೆ ಸ್ಪೆಷಲ್ ಆಗಿ ತುಂಬಾನೆ ಸ್ಪೇಷಿಯಲ್ ಆಗಿ ಮನೆಯನ್ನು ನಿರ್ಮಿಸಲಾಗಿದೆ. ಈ ಮನೆಯಲ್ಲಿ ಮಕ್ಕಳು ಸುಲಭವಾಗಿ ಆಟವಾಡಲು ಸಾಧ್ಯವಾಗುವಂತೆ, ಪ್ರತಿಯೊಂದು ರೂಮ್, ಸ್ಟೆಪ್ಸ್ ಗಳನ್ನು ನಿರ್ಮಾಣ ಮಾಡಲಾಗಿದೆ. 
 

910

ಅಲ್ಲದೆ, ಅಲ್ಲು ಅರ್ಜುನ್ ಸಸ್ಯಗಳನ್ನು ತುಂಬಾನೆ ಇಷ್ಟಪಡ್ತಾರೆ, ಆದ್ದರಿಂದ ಮನೆಯ ಪ್ರತಿಯೊಂದು ಮೂಲೆಯಲ್ಲಿ ಸಸ್ಯಗಳನ್ನು ಕಾಣಬಹುದು. ಅಲ್ಲು ಅರ್ಜುನ್ ಅವರ ಮನೆಯ ಹೊರಗೆ ದೊಡ್ಡ ಉದ್ಯಾನ ಪ್ರದೇಶವಿದೆ, ಇದನ್ನು ಅಲ್ಲು ಅರ್ಜುನ್ ಅವರೇ ಸಮಯ ಸಿಕ್ಕಾಗಲೆಲ್ಲಾ ನೋಡಿಕೊಳ್ಳುತ್ತಾರೆ. ಅಲ್ಲದೆ ಮಗಳು ಅರ್ಹ ಫೋಟೋ ಸೆಶನ್ ಕೂಡ ಹೆಚ್ಚಾಗಿ ಇಲ್ಲಿಯೆ ನಡೆಯುತ್ತೆ. 
 

1010

ಅಲ್ಲು ಅರ್ಜುನ್ ಅವರಂತೆ ಪತ್ನಿ ಸ್ನೇಹಾ ಅವರು ಸಹ ಫಿಟ್ನೆಸ್ (Fitness) ಬಗ್ಗೆ ತುಂಬಾನೆ ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ಅವರ ಮನೆಯೊಳಗೆಯೇ ಜಿಮ್ ಮತ್ತು ಯೋಗ ಮಾಡಲು ಬೇಕಾಗುವಂತಹ ಎಲ್ಲಾ ರೀತಿಯ ಅರೇಂಜ್ ಮೆಂಟ್ ಮಾಡಲಾಗಿದೆ. 
 

Read more Photos on
click me!

Recommended Stories