ಯುದ್ಧರಂಗದಲ್ಲಿ ಹೋರಾಡುವುದು ಖಚಿತ: ಸೂಪರ್‌ ವುಮನ್‌ ಲುಕ್‌ನಲ್ಲಿ ಕಿಯಾರ ಅಡ್ವಾಣಿ

Published : Jun 27, 2025, 06:00 PM IST

ಇದೀಗ ಕಿಯಾರಾ ಪಾತ್ರದ ಮತ್ತೊಂದು ಶೇಡ್‌ ಹೊಸ ಪೋಸ್ಟರ್‌ ಮೂಲಕ ರಿವೀಲ್‌ ಆಗಿದೆ. ಈ ಹಿಂದೆ ಬಿಡುಗಡೆಯಾದ ಟೀಸರ್‌ನಲ್ಲಿ ಕಿಯಾರಾ ಸಿಕ್ಕಾಪಟ್ಟೆ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದರು.

PREV
16

ಹೃತಿಕ್‌ ರೋಷನ್‌, ಕಿಯಾರಾ ಅಡ್ವಾಣಿ ಹಾಗೂ ಜ್ಯೂ.ಎನ್‌ಟಿಆರ್‌ ನಟನೆಯ ‘ವಾರ್‌ 2’ ಸಿನಿಮಾ ಬಿಡುಗಡೆಗೆ 50 ದಿನ ಉಳಿದಿದೆ. ಈ ಹಿನ್ನೆಲೆಯಲ್ಲಿ ಹೊಸ ಪೋಸ್ಟರ್‌ ಬಿಡುಗಡೆಯಾಗಿದೆ. ಇದರಲ್ಲಿ ಕಿಯಾರಾ ಅಡ್ವಾಣಿ ಕರಿಬಣ್ಣದ ಸೂಪರ್‌ ವುಮೆನ್‌ ಲುಕ್‌ನಲ್ಲಿ ಕಂಗೊಳಿಸಿದ್ದಾರೆ.

26

ಈ ಹಿಂದೆ ಬಿಡುಗಡೆಯಾದ ಟೀಸರ್‌ನಲ್ಲಿ ಕಿಯಾರಾ ಸಿಕ್ಕಾಪಟ್ಟೆ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದರು. ಆ ಬಗ್ಗೆ ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಅಶ್ಲೀಲ ಹೇಳಿಕೆ ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.

36

ಇದೀಗ ಕಿಯಾರಾ ಪಾತ್ರದ ಮತ್ತೊಂದು ಶೇಡ್‌ ಹೊಸ ಪೋಸ್ಟರ್‌ ಮೂಲಕ ರಿವೀಲ್‌ ಆಗಿದೆ. ವಾರ್‌ 2ನಲ್ಲಿ ಅವರೂ ಯುದ್ಧರಂಗದಲ್ಲಿ ಹೋರಾಡುವುದು ಖಚಿತವಾಗಿದ್ದು, ಕಿಯಾರಾ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

46

ಇದು ಪಕ್ಕಾ ಆ್ಯಕ್ಷನ್ ಸಿನಿಮಾ. ಹಾಗಾಗಿಯೇ ಹೊಸ ಪೋಸ್ಟರ್​ನಲ್ಲಿ ಜೂನಿಯರ್ ಎನ್​ಟಿಆರ್, ಕಿಯಾರಾ ಅಡ್ವಾಣಿ ಮತ್ತು ಹೃತಿಕ್ ರೋಷನ್ ಅವರು ಯುದ್ಧಕ್ಕೆ ಸಜ್ಜಾಗಿ ನಿಂತವರಂತೆ ಕಾಣಿಸಿಕೊಂಡಿದ್ದಾರೆ.

56

ವಾರ್ 2 ಬಿಡುಗಡೆ ಆಗಲು ಇನ್ನು 50 ದಿನಗಳ ಮಾತ್ರ ಬಾಕಿ ಇವೆ. ಈಗಿನಿಂದಲೇ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ ‘ವಾರ್’ ಸಿನಿಮಾ 2019ರಲ್ಲಿ ತೆರೆಕಂಡಿತ್ತು.

66

ಅದರ ಸೀಕ್ವೆಲ್ ಆಗಿ ‘ವಾರ್ 2’ ಬರುತ್ತಿದೆ. ಈ ಸಿನಿಮಾಗೆ ಅಯಾನ್ ಮುಖರ್ಜಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಹಲವು ಸ್ಟಾರ್ ನಟರು ಈ ಚಿತ್ರದಲ್ಲಿ ಅತಿಥಿ ಪಾತ್ರ ಮಾಡುವ ನಿರೀಕ್ಷೆ ಇದೆ. ಈ ಸಿನಿಮಾ ಆ.14ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

Read more Photos on
click me!

Recommended Stories