ಕಂಗನಾ (Kangana Ranaut) ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಧಾಕಡ್' ರಿಲೀಸ್ ದಿನಾಂಕ (Dhaakad)ಈಗ ಪ್ರಕಟವಾಗಿದೆ. ಜೊತೆಗೆ ಸಿನಿಮಾದ ಹೊಸ ಪೋಸ್ಟರ್ ಸಹ ರಿವೀಲ್ ಆಗಿದ್ದು ಕಂಗನಾ ರಾಣಿಯಂತೆ ಕಂಗೊಳಿಸಿದ್ದಾರೆ.
ಥಲೈವಿ ಸಿನಿಮಾ ಬಾಲಿವುಡ್ ನಿಂದ ಮೆಚ್ಚುಗೆ ಪಡೆದುಕೊಂಡಿದ್ದು ಧಾಕಡ್ ಸಿನಿಮಾ ಪ್ರಮೋಶನ್ ಕಾರ್ಯಕ್ರಮದಲ್ಲಿ ಕಂಗನಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು.
ಕಂಗನಾ ರಣಾವತ್ ತಮ್ಮ ಬಹುನಿರೀಕ್ಷಿತ ಸಿನಿಮಾ ಧಾಕಡ್ ಚಿತ್ರೀಕರಣವನ್ನು ಬಹಳ ಹಿಂದೆಯೇ ಪೂರ್ಣಗೊಳಿಸಿದ್ದರು. ವಿದೇಶದಲ್ಲಿ ನಡೆದ ಸಿನಿಮಾ ಪಾರ್ಟಿಯಲ್ಲಿ ಕಂಗನಾ ಕಾಣಿಸಿಕೊಂಡ ಡ್ರೆಸ್ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಮುಂದಿನ ವರ್ಷ ಏಪ್ರಿಲ್ 8ಕ್ಕೆ ಈ ಸಿನಿಮಾ ಧಾಕಡ್ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿದೆ. ಚಿತ್ರರಂಗದ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಂಗನಾ ಆ್ಯಕ್ಷನ್ ಕ್ವೀನ್ ಆಗಿ ಕಾಣಿಸಿಕೊಂಡಿದ್ದು ರಜನೀಶ್ ನಿರ್ದೇಶನದ ಈ ಸಿನಿಮಾಗೆ ದೀಪಕ್ ಮುಕುಟ್ ಹಾಗೂ ಸೊಹೆಲ್ ಮಕ್ಲೈ ನಿರ್ಮಾಪಕರು.
ಸಿನಿಮಾದ ಟೀಸರ್ ಗೂ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.ಕೈಯಲ್ಲಿ ಗನ್ ಹಿಡಿದ ಕಂಗನಾ ಅವತಾರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಭಾರತ ನೂರು ಕೋಟಿ ಲಸಿಕೆ ಗುರಿಯನ್ನು ತಲುಪಿದ್ದಕ್ಕೆ ಕಂಗನಾ ಅಭಿನಂದನೆ ಸಲ್ಲಿಸಿದ್ದರು. ಕಂಗನಾ ರಾಜಕಾರಣ ಪ್ರವೇಶ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು.
ವಿವಾದಿತ ಹೇಳಿಕೆ ನೀಡುವುದರಲ್ಲಿಯೂ ನಟಿ ಎತ್ತಿದ ಕೈ. ಈ ಹಿಂದೆ ಮಹಾರಾಷ್ಟ್ರ ಸರ್ಕಾರವನ್ನೇ ಎದುರು ಹಾಕಿಕೊಂಡಿದ್ದರು. ಕೇಂದ್ರ ಸರ್ಕಾರ ನಟಿಗೆ ವಿಶೇಷ ಭದ್ರತೆಯನ್ನು ದಯಪಾಲಿಸಿದೆ.
ಥಲೈವಿ ಚಿತ್ರದಲ್ಲಿ ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಪಾತ್ರವನ್ನು ನಿರ್ವಹಿಸಿದ್ದ ಕಂಗನಾಗೆ ಸೂಪರ್ ಸ್ಟಾರ್ ರಜನೀಕಾಂತ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಜಿಮ್ ಮಾಡೋ ಹುಡುಗ ಬೇಡ.. ಯೋಗ ಮಾಡೋ ಹುಡುಗ ಬೇಕು ಎಂದು ಕಂಗನಾ ಕಪಿಲ್ ಶರ್ಮಾ ಶೋ ದಲ್ಲಿ ಹೇಳಿದ್ದರು. ಹಾಗೆಯೇ ಫ್ಯಾಮಿಲಿಯೋ ಅಥವಾ ಪಾರ್ಟಿ ಮಾಡೋನು ಬೇಕಾ ಎಂಬುದಕ್ಕೂ ಉತ್ತರಿಸಿದ್ದರು.
ಬಾಲಿವುಡ್ ಡ್ರಗ್ಸ್ ಪ್ರಕರಣದ ಬಗ್ಗೆಯೂ ಕಂಗನಾ ಮಾತನಾಡುತ್ತಲೇ ಇದ್ದಾರೆ. ಶಾರುಖ್ ಖಾನ್ ಕ್ಷಮೆ ಕೇಳಬೇಕಿತ್ತು ಎಂದು ಹೇಳಿದ್ದರು. ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಂದರ್ಭದಲ್ಲಿಯೂ ಮಾತನಾಡಿದ್ದರು.
'ಈ ತರಹ ಬಂದ್ರೆ y + ಸೆಕ್ಯೂರಿಟಿ ಏನಕ್ಕೂ ಸಾಕಾಗಲ್ಲ!, ದೇಶದಲ್ಲಿ ಹಲವಾರು ಸಮಸ್ಯೆಗಳು ಇದ್ದು ಅವುಗಳ ನಿವಾರಣೆಗೆ ಸರ್ಕಾರ ಗಮನ ಹರಿಸಬೇಕೆ ವಿನಾ ಇಂಥವರಿಗೆ ಭದ್ರತೆ ನೀಡಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಗಳು ಬಂದಿವೆ.