ಇತ್ತೀಚಿನ ವರದಿಯು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB)ಹಲವು ತಂಡಗಳು ಅರ್ಯನ್ ಖಾನ್ ಡ್ರಗ್ ಕೇಸ್‌ಗೆ ಸಂಬಂಧಿಸಿದಂತೆ ಶಾರುಖ್ ಖಾನ್ ಅವರ ಬಾಂದ್ರಾದಲ್ಲಿರುವ 'ಮನ್ನತ್' ಮತ್ತು ಖಾರ್ ವೆಸ್ಟ್‌ನಲ್ಲಿವರ ನಟಿ ಅನನ್ಯ ಪಾಂಡೆ ಅವರ ನಿವಾಸವನ್ನು ತಲುಪಿದೆ ಎಂದು ಸೂಚಿಸಿದೆ.
ವರದಿಗಳ ಪ್ರಕಾರ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ ಮನೆಯ ಮೇಲೆ ದಾಳಿ ಮಾಡಿದೆ. ನಟಿ ತನ್ನ ಪೋಷಕರಾದ ಚಂಕಿ ಪಾಂಡೆ ಮತ್ತು ಭಾವನಾ ಪಾಂಡೆಯೊಂದಿಗೆ ಖಾರ್ ವೆಸ್ಟ್ ಪ್ರದೇಶದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ.
ಅಕ್ಟೋಬರ್ 3 ರಂದು ಕ್ರೂಸ್ ಹಡಗು ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧಿತನಾದ ನಂತರ ಹಲವು ಬಾಲಿವುಡ್ ಸೆಲೆಬ್ರಿಟಿಗಳ ಮೇಲೆ ಈಗ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಕಣ್ಣಿಟ್ಟಿರುವಂತೆ ತೋರುತ್ತಿದೆ. ಪ್ರಸ್ತುತ ಅರ್ಯನ್ ಖಾನ್ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ.
ಮುಂಬೈ ಕರಾವಳಿಯಲ್ಲಿ ಕಾರ್ಡೆಲಿಯಾ ಕ್ರೂಸ್ ಹಡಗಿನ ಮೇಲೆ ಎನ್‌ಸಿಬಿ ದಾಳಿ ನಡೆಸಿದ ನಂತರ ಆರ್ಯನ್ ಖಾನ್ ಮತ್ತು 8 ಇತರರನ್ನು ಅಕ್ಟೋಬರ್ 3 ರಂದು ಬಂಧಿಸಲಾಯಿತು. ಬುಧವಾರ ಮುಂಬೈ ವಿಶೇಷ ನ್ಯಾಯಾಲಯವು ಆರ್ಯನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಬೇಲ್‌ಗಾಗಿ ಆರ್ಯನ್ ವಕೀಲರು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ ಮತ್ತು ಅಕ್ಟೋಬರ್ 26 ರಂದು ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಲ್ಲಿದೆ.
ಈಗ, ಇತ್ತೀಚಿನ ಅಪ್‌ಡೇಟ್‌ಗಳು ಪ್ರಕಾರ, NCB ಚಂಕಿ ಪಾಂಡೆಯವರ ಮಗಳು ಅನನ್ಯಾ ಪಾಂಡೆಯವರ ಮನೆಯಲ್ಲಿ ದಾಳಿ ನಡೆಸಿದೆ ಮತ್ತು ದಾಳಿಯ ನಂತರ ಎನ್‌ಸಿಬಿ ಅಧಿಕಾರಿಗಳು ಪಾಂಡೆಯ ಮನೆಯಿಂದ ಬ್ಯಾಗ್ ತೆಗೆದುಕೊಂಡು ಹೊರ ಹೋಗುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಆದಾಗ್ಯೂ, ದಾಳಿಯ ಬಗ್ಗೆ ಹೆಚ್ಚಿನ ವಿವರಗಳಿಲ್ಲ, ಮತ್ತು ಅದರ ಬಗ್ಗೆ ಇನ್ನೂ ತಿಳಿದುಬಂದಿಲ್ಲ.
ದಾಳಿ ಸಮಯದಲ್ಲಿ ಅನನ್ಯ ಪಾಂಡೆ ತನ್ನ ಮನೆಯಲ್ಲಿದ್ದರೋ ಅಥವಾ ಕೆಲಸಕ್ಕಾಗಿ ಹೊರಗಿದ್ದರೋ? ಇದು ಇನ್ನೂ ತಿಳಿದಿಲ್ಲ. ಆದರೆ ಅನನ್ಯಾ ಪಾಂಡೆ ಆರ್ಯನ್ ಖಾನ್ ಜೊತೆ ಸಂಪರ್ಕ ಹೊಂದಿದ್ದ ಕಾರಣ ಅವರ ಮನೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಆರ್ಯನ್ ಮತ್ತು ಅನನ್ಯಾ ಬಾಲ್ಯ ಸ್ನೇಹಿತರು. ಆದಾಗ್ಯೂ, ಅನನ್ಯಾ ಪಾಂಡೆಯನ್ನು ಇಂದು ಮಧ್ಯಾಹ್ನ 2 ಗಂಟೆಗೆ ಹಾಜರಾಗಲು ಎನ್‌ಸಿಬಿ ಸಮನ್ಸ್ ಮಾಡಿತ್ತು.
ಮೂರನೇ ಬಾರಿಗೆ ಅರ್ಯನ್ ಖಾನ್ ಜಾಮೀನು ನಿರಾಕರಿಸಿದ ನಂತರ ಇಂದು ಬೆಳಗ್ಗೆ ಶಾರುಖ್ ತನ್ನ ಮಗ ಆರ್ಯನ್ ಭೇಟಿ ಮಾಡಲು ಆರ್ಥರ್ ರೋಡ್ ಜೈಲಿಗೆ ಭೇಟಿ ನೀಡಿದ್ದರು. ಖಾನ್ ತನ್ನ ಮಗ ಆರ್ಯನ್ ಜೊತೆ ಸುಮಾರು 20 ನಿಮಿಷಗಳ ಕಾಲ ಇಂಟರ್‌ಕಾಮ್ ಮೂಲಕ ಜೈಲಿನ ಮೀಟಿಂಗ್ ಹಾಲ್‌ನಲ್ಲಿ ಮಾತನಾಡಿದ್ದಾರೆ ಎಂದು ವರದಿಗಳು ಹೇಳಿವೆ. COVID-19 ಸಾಂಕ್ರಾಮಿಕ ಪ್ರೋಟೋಕಾಲ್‌ನಿಂದಾಗಿ, ಜೈಲಿನಲ್ಲಿ ಫಿಸಿಕಲ್ ಮೀಟಿಂಗ್‌ಗೆ ಅನುಮತಿಸಲಾಗಲಿಲ್ಲ.
ನಟಿ ಅನನ್ಯಾ ಪಾಂಡೆ ಎನ್‌ಸಿಬಿ ಸೂಚನೆಯಂತೆ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ. ಅರೆಸ್ಟ್ ಆದವರಲ್ಲಿ ಯಾರೋ ಒಬ್ಬ ಆರೋಪಿ ಕೊಟ್ಟ ಲೀಡ್ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗಿದೆ