ಬದುಕುವ ಆಸೆ ಬರ್ಮಾ to ಭಾರತ 9ತಿಂಗಳ ಪಾದಯಾತ್ರೆ, ಬಾಲಿವುಡ್‌ ಆಳಿದ ವಿದೇಶಿ ನಟಿ ಈಗ ದೇಶದ ಶ್ರೀಮಂತ ನಟನ ತಾಯಿ!

ನಟಿ ಹೆಲೆನ್ ಬಾಲಿವುಡ್‌ನಲ್ಲಿ ತಮ್ಮ ನೃತ್ಯದಿಂದ ಪ್ರಸಿದ್ಧಿ ಪಡೆದರು. ಬರ್ಮಾ ಮೂಲದವರಾದ ಅವರು, ಯುದ್ಧದ ಸಂದರ್ಭದಲ್ಲಿ ಭಾರತಕ್ಕೆ ಬಂದು ಕಷ್ಟಗಳನ್ನು ಎದುರಿಸಿ, ಬಾಲಿವುಡ್‌ನ ಶ್ರೀಮಂತ ಕುಟುಂಬವನ್ನು ಸೇರಿದರು. ಅವರ ರೋಚಕ ಜೀವನ ಕಥೆಯೇ ಒಂದು ಸಿನೆಮಾದಂತಿದೆ . ಯಾರು ಆಕೆ? ಯಾರನ್ನು ಮದುವೆಯಾದರು. ಹೇಗೆ ಮದುವೆಯಾದರು ಎಂಬ ರೋಚಕ ಕಹಾನಿ ಇಲ್ಲಿದೆ.

ನೋರಾ ಫತೇಹಿ, ಸನ್ನಿ ಲಿಯೋನ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್  ಮುಂದಾದ ಗ್ಲಾಮರಸ್‌ ನಟಿಯರಿಗಿಂತ ಮೊದಲೇ ಬಾಲಿವುಡ್‌ ನಲ್ಲಿ ಮತ್ತೊಬ್ಬಳು ತನ್ನ ನೃತ್ಯದ ಮೂಲಕ ಮೋಡಿ ಮಾಡಿ ಪ್ರಸಿದ್ಧಿ ಪಡೆದಿದ್ದಳು. ವಿದೇಶಿ ಆಗಿದ್ದರೂ ಸಹ ಈಗ ಆಕೆ ಭಾರತೀಯಳೇ ಆಗಿದ್ದು, ಬಾಲಿವುಡ್‌ ನ ಶ್ರೀಮಂತ ಮನೆತನ ಸೇರಿ ತನ್ನ ಕಷ್ಟದ ದಿನಗಳನ್ನು ಮರೆತು ಆರಾಮ ಜೀವನ ಮಾಡುತ್ತಿದ್ದಾರೆ. ಆಕೆಯ ಇಡೀ ಕುಟುಂಬವೇ ಬಾಲಿವುಡ್‌ ಚಿತ್ರರಂಗಕ್ಕೆ ತನ್ನ ಜೀವವನ್ನು ಮುಡಿಪಾಗಿಟ್ಟಿದೆ. ಖಾನ್ ಕುಟುಂಬದ ಭಾಗವಾಗಿದ್ದಾರೆ. ಮಗ ಸಲ್ಮಾನ್ ಖಾನ್‌ ಬಾಲಿವುಡ್‌ನ ಶ್ರೀಮಂತ ನಟರಲ್ಲಿ ಒಬ್ಬ. 

ಯಾರೀಕೆ ನಟಿ:
ಆಕೆ ಮತ್ಯಾರು ಅಲ್ಲ ನಟಿ ಹೆಲೆನ್.  ಎರಡನೇ ಮಹಾಯುದ್ಧದಲ್ಲಿ ನಟಿ ತನ್ನ ತಂದೆಯನ್ನು ಕಳೆದುಕೊಂಡರು. ಕುಟುಂಬ ಬೀದಿಗೆ ಬಿತ್ತು. ಶಾಲೆಯನ್ನು ಅರ್ಧದಲ್ಲೇ ಮೊಟಕುಗೊಳಿಸಬೇಕಾದ ಸಂದರ್ಭ ಬಂತು. ಆಹಾರವಿಲ್ಲದೆ ದಿನಗಟ್ಟಲೆ ಕಷ್ಟಪಟ್ಟು ಬದುಕುವ ಪರಿಸ್ಥಿತಿ ಬಂದರೂ ನಂತರ ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಡಾನ್ಸರ್‌ ಗಳಲ್ಲಿ ಒಬ್ಬರಾಗಿ ಬೆಳೆದರು. ಮಾತ್ರವಲ್ಲ ಇಂದಿಗೂ  ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.

ರಶ್ಮಿಕಾರನ್ನು ಸಲ್ಲೂ ಒಮ್ಮೆ ಕಾರಿನೊಳಕ್ಕೆ ತಳ್ಳಿದ್ದು ಮತ್ತೆ ಹೊರಕ್ಕೆ ಎಳೆದಿದ್ದೇಕೆ? ಏನ್ ಮ್ಯಾಟರ್ ಗುರೂ..!?


ಭಾರತಕ್ಕೆ ಬಂದಿದ್ದು ಹೇಗೆ?
ನಟಿ ಹೆಲೆನ್ ಬರ್ಮಾದ ರಂಗೂನ್‌ ಎಂಬ ಪ್ರದೇಶದಲ್ಲಿ ಆಂಗ್ಲೋ-ಇಂಡಿಯನ್ ತಂದೆ ಮತ್ತು ಬರ್ಮಾ ಮೂಲದ ತಾಯಿಗೆ ಜನಿಸಿದರು. ಎರಡನೇ ಮಹಾಯುದ್ಧದ  ತಮ್ಮ ತಂದೆಯನ್ನು ಕಳೆದುಕೊಂಡ ನಂತರ 1943 ರಲ್ಲಿ ಬರ್ಮಾದಲ್ಲಿ ಜಪಾನಿನ ಆಕ್ರಮಣದಿಂದ ತಪ್ಪಿಸಿಕೊಳ್ಳಲು ಭಾರತದ ಅಸ್ಸಾಂನ ದಿಬ್ರುಗಢಕ್ಕೆ ಗುಳೆ ಹೊರಟರು. ಇದು ಅವರ ಜೀವನದ ಅತ್ಯಂತ ಸವಾಲಿನ ಸಮಯಗಳಲ್ಲಿ ಒಂದಾಗಿತ್ತು, ಏಕೆಂದರೆ ಕುಟುಂಬವು ಹಣವಿಲ್ಲದೆ ಮತ್ತು ಆಹಾರವನ್ನು ಹುಡುಕಲು ತೀವ್ರ ಕಷ್ಟಪಡುತ್ತಿತ್ತು.

ಪಾದಯಾತ್ರೆಯ ಸಮಯದಲ್ಲಿ ಅರಣ್ಯ ಮತ್ತು ನೂರಾರು ಹಳ್ಳಿಗಳನ್ನು ದಾಟಿ ಭಾರತಕ್ಕೆ ಬರಬೇಕಿತ್ತು. ಜನರ ಔದಾರ್ಯ, ಛತ್ರಗಳಿಂದ ಹೆಲೆನ್ ಕುಟುಂಬ ಬದುಕುಳಿಯಿತು. ಹಣವಿಲ್ಲದೆ, ಆಹಾರ ಮತ್ತು ಕಡಿಮೆ ಬಟ್ಟೆಗಳಿಂದ ನಾವು ಇರಬೇಕಾಯ್ತು. ಒಂದು ಸಮಯದಲ್ಲಿ ಬ್ರಿಟಿಷ್ ಸೈನಿಕರನ್ನು ಭೇಟಿಯಾದೆವು, ಅವರು ನಮಗೆ ಸಾರಿಗೆ ಒದಗಿಸಿದರು, ನಮಗೆ ಆಶ್ರಯ ನೀಡಿದರು ಎಂದು ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ನಟಿ ಹೇಳಿಕೊಂಡಿದ್ದಾರೆ.

ರಶ್ಮಿಕಾ ಮಗಳ ಜೊತೆನೂ ರೊಮಾನ್ಸ್​ ಮಾಡ್ತೇನೆ ನಿಮಗೇನ್ರಿ ಕಷ್ಟ? ಕಿಡಿಕಿಡಿಯಾದ ಸಲ್ಮಾನ್​ ಖಾನ್

ಸಿಡುಬಿನಿಂದ ಸಹೋದರ ಸಾವು
ಬ್ರಿಟಿಷರು ಆಶ್ರಯ ನೀಡಿದ ಬಳಿಕ ಗುಳ್ಳೆಗಳುಳ್ಳ ಪಾದಗಳು ಮತ್ತು ಬಳಲಿದ ಸುಕ್ಕು ಕಟ್ಟಿದ ದೇಹಗಳಿಗೆ  ಚಿಕಿತ್ಸೆ ನೀಡಿ ಆಹಾರವನ್ನು ಕೂಡ ಒದಗಿಸಿದರು. ನಾವು ಅಸ್ಸಾಂನ ದಿಬ್ರುಗಢ ತಲುಪುವ ಹೊತ್ತಿಗೆ, ನಾವು ಬಂದಿದ್ದ  ಗುಂಪಿನ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿತ್ತು. ಬಹುತೇಕರು ಅನಾರೋಗ್ಯಕ್ಕೆ ತುತ್ತಾಗಿ ಜೀವ ಕಳೆದುಕೊಂಡರು. ಕೆಲವರು ಹಸಿವು  ಮೃತಪಟ್ಟರು. ದಾರಿ ಮಧ್ಯದಲ್ಲಿ ನನ್ನ ತಾಯಿ ಗರ್ಭಪಾತಕ್ಕೀಡಾದರು. ಬದುಕುಳಿದವರನ್ನು ದಿಬ್ರುಗಢ ಆಸ್ಪತ್ರೆಗೆ  ಚಿಕಿತ್ಸೆಗಾಗಿ  ದಾಖಲು ಮಾಡಲಾಯ್ತು. ನಾನು ಮತ್ತು ತಾಯಿ ಬಹುತೇಕ ಅಸ್ಥಿಪಂಜರವಾಗಿದ್ದೆವು. ಎರಡು ತಿಂಗಳು ಆಸ್ಪತ್ರೆಯಲ್ಲಿದ್ದು ಚೇತರಿಕೆ ಕಂಡ ನಂತರ ಕೊಲ್ಕತ್ತಾಗೆ ಬಂದೆವು. ಆದರೆ ಅಲ್ಲಿ ಸಹೋದರ ಸಿಡುಬಿನಿಂದ ಮೃತಪಟ್ಟ ಎಂದು ನಟಿ ಹೆಲೆನ್‌ ಹೇಳಿದ್ದರು.
 

 ತಾಯಿ ನರ್ಸ್ ಆಗಿದ್ದರು. ಅವರ ಆದಾಯ ಬದುಕಲು ಸಾಕಾಗುತ್ತಿರಲಿಲ್ಲ. ಶಾಲೆಯನ್ನು ಬಿಟ್ಟು ಕುಟುಂಬಕ್ಕಾಗಿ ದುಡಿಯುವುದು ಅನಿವಾರ್ಯವಾಗಿತ್ತು. ಕುಟುಂಬದ ಸ್ನೇಹಿತೆ, ನಟಿ ಕುಕೂ, ಶಬಿಸ್ತಾನ್ ಮತ್ತು ಆವಾರಾ ಚಲನಚಿತ್ರಗಳಲ್ಲಿ ಗ್ರೂಪ್‌ ಡ್ಯಾನ್ಸರ್‌ ಆಗಿ ಕೆಲಸ ಹುಡುಕಲು ಸಹಾಯ ಮಾಡಿದರು. ಬಳಿಕ ಬಾಲುವುಡ್‌ ಗೆ ಎಂಟ್ರಿಯಾದೆ ಎಂದು ತಮ್ಮ ಹಳೇಯ ದಿನಗಳನ್ನು ನೆನಪಿಸಿಕೊಂಡರು.

ಸಿಕಂದರ್ ತಾರಾಗಣದ ನಿವ್ವಳ ಮೌಲ್ಯ, ಯಾರು ಎಷ್ಟು ಶ್ರೀಮಂತರು ನೋಡಿ ಒಂದ್ಸಲ..!

 ನಟಿ  ಹೆಲೆನ್‌, ಹೌರಾ ಬ್ರಿಡ್ಜ್‌ನಲ್ಲಿ ಮೇರಾ ನಾಮ್ ಚಿನ್ ಚಿನ್ ಚು ಹಾಡಿನ ಮೂಲಕ  ತನ್ನ ಕೆರಿಯರ್‌ ನಲ್ಲಿ ದೊಡ್ಡ ಬ್ರೇಕ್ ಪಡೆದುಕೊಂಡರು. ಆಗ ಅವರಿಗೆ ಕೇವಲ 19 ವರ್ಷವಾಗಿತ್ತು. ಅಲ್ಲಿಂದ ನಂತರ ತಿರುಗಿ ನೊಡಲೇ ಇಲ್ಲ. ಶಮ್ಮಿ ಕಪೂರ್ ಜೊತೆಗೆ ಚೀನಾ ಟೌನ್ ಮತ್ತು ಸಚಾ ಝೂತಾ ನಂತಹ ಹಿಟ್‌ ಚಿತ್ರಗಳಲ್ಲಿ ನಟಿಸಿದರು. ಅವರ ಕೆರಿಯರ್‌ ನಲ್ಲಿ ಹಿಟ್‌ ಹಾಡು ಹಾಡುಗಳೆಂದರೆ ಸುಕು ಸುಕು (ಜಂಗ್ಲೀ), ಯಮ್ಮಾ ಯಮ್ಮಾ (ಚೀನಾ ಟೌನ್), ಓ ಹಸೀನಾ ಜುಲ್ಫೋನ್‌ವಾಲಿ (ತೀಸ್ರಿ ಮಂಜಿಲ್), ಹೈ ಪ್ಯಾರ್ ಕಾ ಹಿ ನಾಮ್ (ಸಿಂಗಾಪುರ), ಮತ್ತು ಮುಕಾಬ್ಲಾ ಹಮ್ಸೆ ನಾ ಕರೋ ಹೀಗೆ ಹಲವು ಪಟ್ಟಿಗಳಿವೆ. ಅಷ್ಟರಲ್ಲಾಗಲೇ ಅವರಿಗೆ ಬಾಲಿವುಡ್‌ನ ನೃತ್ಯ ರಾಣಿ ಎಂದು ಬಿರುದು ಬಂದಿತ್ತು. ಅಂದಿನ ಕಾಲಕ್ಕೆ  ಅವರು ಬಾಲಿವುಡ್‌ ನ ಅತೀ ಹೆಚ್ಚು ಸಂಭಾವನೆ ಪಡೆಯುವ ನೃತ್ಯಗಾರ್ತಿ ಎನ್ನುವ ಮಟ್ಟಕ್ಕೆ ಬೆಳೆದರು.

ಅಂದಿನ ಕಾಲದ ಸೂಪರ್‌ ಸ್ಟಾರ್ಸ್ ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್ , ಧರ್ಮೇಂದ್ರರಂತಹ ಅನೇಕ  ಪ್ರಸಿದ್ಧ ನಟರ ಜೊತೆಗೆ ಹೆಲೆನ್‌ ಕೆಲಸ ಮಾಡಿದ್ದಾರೆ. ಇಮಾನ್ ಧರಮ್, ಡಾನ್, ದೋಸ್ತಾನಾ ಮತ್ತು ಶೋಲೆಯಂತಹ ಚಿತ್ರಗಳಲ್ಲಿ ಅವಕಾಶ ಮಾಡಿಕೊಟ್ಟದ್ದು ಸಲೀಂ ಖಾನ್ . 1983 ರಲ್ಲಿ ತಮ್ಮ ಬಣ್ಣದ ಬದುಕಿಗೆ ಹೆಲೆನ್‌ ವಿದಾಯ ಹೇಳಿದರು.   ಹೆಲೆನ್ ಮೊದಲು 1957 ರಲ್ಲಿ ತಮಗಿಂತ 27 ವರ್ಷಕ್ಕಿಂದ ಹಿರಿಯರಾಗಿರುವ ಚಲನಚಿತ್ರ ನಿರ್ದೇಶಕ ಪ್ರೇಮ್ ನಾರಾಯಣ್ ಅರೋರಾ ಅವರನ್ನು ವಿವಾಹವಾದರು ಆದರೆ 1974 ರಲ್ಲಿ ಡಿವೋರ್ಸ್ ಪಡೆದರು. ನಂತರ ಸಲೀಂ ಜೊತೆಗೆ ಸ್ನೇಹ ಬೆಳೆದು ಪ್ರೀತಿಯಾಗಿ 1981 ರಲ್ಲಿ ರೈಟರ್‌ ಸಲೀಂ ಖಾನ್ ಅವರನ್ನು ಮದುವೆಯಾದರು.  ಅದಾಗಲೇ ಮದುವೆಯಾಗಿದ್ದ ಸಲೀಂ ನಾಲ್ಕು ಮಕ್ಕಳ ತಂದೆಯಾಗಿದ್ದರು.

ಅರ್ಥಾತ್​, ಸಲ್ಮಾನ್​ ಖಾನ್​ ಅವರ ತಂದೆ ಸಲೀಂ ಖಾನ್​ (Saleem Khan) ಅವರಿಗೆ ಇಬ್ಬರು ಪತ್ನಿಯರು. ಮೊದಲನೆಯವರ ಹೆಸರು ಸುಶೀಲಾ ಚರಕ್​. ನಂತರ ಇವರ ಹೆಸರನ್ನು ಸಲ್ಮಾ ಎಂದು ಬದಲಾಯಿಸಲಾಯಿತು. ಸಲೀಂ ಖಾನ್ ಅವರ ನಿವ್ವಳ ಮೌಲ್ಯ 1000 ಕೋಟಿ ರೂ. ಸಲ್ಮಾನ್ ಖಾನ್, ಸೊಹೈಲ್ ಖಾನ್, ಅರ್ಬಾಜ್ ಖಾನ್ ಮತ್ತು ಅರ್ಪಿತಾ ಖಾನ್ ಅವರಿಗೆ ಮಲತಾಯಿ ಹೆಲೆನ್‌. ಈಗ ಹೆಲೆನ್ ಗೆ 86 ವರ್ಷ ಬಾಲುವುಡ್‌ ನಟ ಸಲ್ಮಾನ್ 2,900 ಕೋಟಿ ರೂ ಆಸ್ತಿಯ ಒಡೆಯನಾಗಿದ್ದಾರೆ.

Latest Videos

click me!