ನಟ ದುಲ್ಖರ್ ಸಲ್ಮಾನ್ ಎಂಥ ಸುಂದರ ನಟ ಎಂದು ಅನೇಕರು ಹೊಗಳುತ್ತಾರೆ. ಕಟ್ಟುಮಸ್ತಾದ ದೇಹ, ಸುಂದರವಾದ ಮುಖ, ಸಖತ್ ಆಗಿರೋ ಹೇರ್‌ಸ್ಟೈಲ್. ವಾವ್, ಇದ್ದರೆ ಹೀಗೆ ಇರಬೇಕು ಎಂದು ಅನೇಕರು ಹೇಳೋದುಂಟು. ಈ ರೀತಿ ಆಗೋಕೆ ಇದರ ಹಿಂದಿನ ಪರಿಶ್ರಮದ ಬಗ್ಗೆ ಅನೇಕರಿಗೆ ಮಾಹಿತಿ ಇರಲಿಕ್ಕಿಲ್ಲ.
ನಟ ದುಲ್ಖರ್ ಸಲ್ಮಾನ್ ಅವರು ಚಿಕ್ಕ ವಯಸ್ಸಿನಿಂದ ಇಲ್ಲಿಯವರೆಗೆ ಇದ್ದ ಫೋಟೋಗಳು ಲೀಕ್ ಆಗಿವೆ. ಡಾ ಮಿಥುನ್ ಪಾಂಚಾಲ್ ಅವರು ಸೋಶಿಯಲ್ ಮೀಡಿಯಾದಲ್ಲಿ ದುಲ್ಖರ್ ಸಲ್ಮಾನ್‌ರ ಈ ಹಿಂದಿನ ಫೋಟೋಗಳನ್ನು ಶೇರ್ ಮಾಡಿ ದೊಡ್ಡ ಅಚ್ಚರಿ ಮೂಡಿಸಿದ್ದಾರೆ.
ದುಲ್ಖರ್ ಸಲ್ಮಾನ್ ಅವರು ಎಷ್ಟು ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂಬುದರ ಬಗ್ಗೆ ವರದಿ ಇಲ್ಲಿದೆ. ಇದು ಎಷ್ಟು ನಿಜವೋ ಏನೋ! ಆದರೆ ಈ ಫೋಟೋಗಳು ಎಡಿಟೆಡ್ ಫೋಟೋ ರೀತಿಯಂತೂ ಇಲ್ಲ.
ದುಲ್ಖರ್ ಸಲ್ಮಾನ್ ಅವರು ಮೂಗು, ಕಿವಿ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ಫಿಟ್‌ನೆಸ್ ಕಡೆಗೆ ದುಲ್ಖರ್ ಗಮನ ಕೊಡುತ್ತಾರಂತೆ.
ಇಂದು ತುಟಿ, ಮೂಗು, ಮುಖ, ಕಣ್ಣು ಎಲ್ಲದಕ್ಕೂ ಸರ್ಜರಿ ಮಾಡಿಸಿಕೊಳ್ಳಬಹುದಾಗಿದೆ. ಕನ್ನಡದಿಂದ ಬಾಲಿವುಡ್‌ವರೆಗೆ ಸಾಕಷ್ಟು ನಟ, ನಟಿಯರು ಸರ್ಜರಿ ಮಾಡಿಸಿಕೊಂಡಿದ್ದಾರೆ. ಒಮ್ಮೊಮ್ಮೆ ಈ ಸರ್ಜರಿಗಳು ಸರಿಯಾಗಿ ಪ್ರತಿಫಲ ಕೊಟ್ಟರೆ, ಇನ್ನೂ ಕೆಲವೊಮ್ಮೆ ಎಡವಟ್ಟಾಗುತ್ತವೆ. ಈ ರೀತಿ ಸರ್ಜರಿ ಮಾಡಿಸಿಕೊಂಡವರ ಆರೋಗ್ಯ ತುಂಬ ಹಾಳಾಗಿದ್ದ ಉದಾಹರಣೆಯೂ ಇದೆ. ಇನ್ನೂ ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಬಾಲಿವುಡ್‌ನಲ್ಲಂತೂ ಸಿಕ್ಕಾಪಟ್ಟೆ ಸ್ಟಾರ್ ನಟಿಯರು ಸರ್ಜರಿ ಮಾಡಿಸಿಕೊಂಡಿದ್ದಾರೆ. ಕನ್ನಡದಲ್ಲಿ ʼಅಮೃತವರ್ಷಿಣಿʼ ಧಾರಾವಾಹಿ ನಟಿ ರಜನಿ ಕೂಡ ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಾರೆ. ದುಲ್ಖರ್ ಸಲ್ಮಾನ್ ಸರ್ಜರಿ ಮಾಡಿಸಿಕೊಂಡಿದ್ದು ಸತ್ಯ ಎಂದು ಕೆಲ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಇನ್ನೂ ಕೆಲವರು ಇಲ್ಲ ಎಂದು ಹೇಳುತ್ತಿದ್ದಾರೆ. ಏನೇ ಇರಲಿ, ಇವರೊಬ್ಬ ಅದ್ಭುತ ನಟ, ಸುಂದರ ಎಂಬ ಮಾತು ವ್ಯಕ್ತವಾಗಿವೆ.