Anushka Sharma: ಕೊಹ್ಲಿ ಪತ್ನಿಗೆ ಕನ್ನಡದ ಮದುವೆ ಪತ್ರಿಕೆ, ಸ್ವೀಟೆಸ್ಟ್ ಎಂದ ನಟಿ

Published : Nov 21, 2021, 05:25 PM ISTUpdated : Nov 21, 2021, 05:33 PM IST

ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ(Anushka Sharma)ಕನ್ನಡದಲ್ಲಿ ಮದುವೆ ಆಮಂತ್ರಣ ಪತ್ರಿಕೆಯೊಂದು ಸಿಕ್ಕಿದೆ. ಅದು ಮೈಸೂರಿನ ಜೋಡಿಯ ಮದುವೆ ಕರೆಯೋಲೆ. ಆಮಂತ್ರಣ ನೋಡಿ ಖುಷ್ ಆಗಿದ್ದಾರೆ ನಟಿ

PREV
16
Anushka Sharma: ಕೊಹ್ಲಿ ಪತ್ನಿಗೆ ಕನ್ನಡದ ಮದುವೆ ಪತ್ರಿಕೆ, ಸ್ವೀಟೆಸ್ಟ್ ಎಂದ ನಟಿ

ಬಾಲಿವುಡ್ ನಟಿ ಕ್ರಿಕೆಟರ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಮೈಸೂರಿನ ಜೋಡಿ ಮದುವೆ ಆಮಂತ್ರಣ ಕಳುಹಿಸಿದ್ದಾರೆ. ಮೈಸೂರಿನ ಜೋಡಿ ಕನ್ನಡದಲ್ಲೇ ನಟಿ ಅನುಷ್ಕಾ ಶರ್ಮಾಗೆ(Anushka Sharma) ಮದುವೆಯ ಕರೆಯೋಲೆಯನ್ನು ಕಳುಹಿಸಿದ್ದಾರೆ. ಇದನ್ನ ಕಂಡ ನಟಿ ಅನುಷ್ಕಾ ಶರ್ಮಾ ಖುಷಿ ಪಟ್ಟಿದ್ದಾರೆ.

26

ಮದುವೆ ಆಮಂತ್ರಣವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ನಟಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ನಟಿ ಅನುಷ್ಕಾ ಓದಿದ್ದು ಬೆಂಗಳೂರಿನಲ್ಲಿಯೇ. ಹಾಗಾಗಿ ಅವರಿಗೆ ಕರುನಾಡ ನಂಟಿದೆ

36

ಮೈಸೂರಿನ ವಧು - ವರ ನಯನ - ರುದ್ರೇಶ್ ತಮ್ಮ ಮದುವೆಯ ಇನ್ವಿಟೇಷನ್ ನಟಿ ಅನುಷ್ಕಾ ಶರ್ಮಾಗೆ ಕಳುಹಿಸಿಕೊಟ್ಟಿದ್ದಾರೆ. ಮದುವೆಯ ಕರೆಯೋಲೆ ಜೊತೆಗೆ ಒಂದು ಪತ್ರ ಹಾಗೂ ಸ್ವೀಟ್‌ಗಳನ್ನೂ ಕಳುಹಿಸಿದ್ದಾರೆ.

46

ಇದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡ ನಟಿ, ಇದು ಸ್ವೀಟೆಸ್ಟ್ ಮದುವೆ ಆಮಂತ್ರಣ. ನಯನಗೆ ಧನ್ಯವಾದಗಳು. ನೀನು ಅತ್ಯಂತ ಸುಂದರ ವಧುವಾಗುತ್ತೀ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಕನ್ನಡದ ಮದುವೆ ಆಮಂತ್ರಣ ಪತ್ರಿಕೆಯ ಫೋಟೋವನ್ನೂ ನಟಿ ಅನುಷ್ಕಾ ಶರ್ಮಾ ಹಂಚಿಕೊಂಡಿದ್ದಾರೆ.

56

2008ರಲ್ಲಿ ತೆರೆಗೆ ಬಂದ ರಬ್ ನೇ ಬನಾದಿ ಜೋಡಿ ಚಿತ್ರದ ಮೂಲಕ ಬಾಲಿವುಡ್‌ಗೆ ಅನುಷ್ಕಾ ಶರ್ಮಾ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಬದ್ಮಾಶ್ ಕಂಪನಿ, ಪಟಿಯಾಲಾ ಹೌಸ್, ಜಬ್ ತಕ್ ಹೇ ಜಾನ್, ಪಿಕೆ, ಬಾಂಬೆ ವೆಲ್ವೆಟ್, ಸುಲ್ತಾನ್, ಪರಿ, ಸಂಜು, ಝೀರೋ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

66

ಕ್ರಿಕೆಟರ್ ವಿರಾಟ್ ಕೊಹ್ಲಿ ಅವರನ್ನು ಮದುವೆಯಾದ ನಟಿ ಹೆಣ್ಣು ಮಗುವಿಗೆ ತಾಯಿ ಆಗಿದ್ದಾರೆ. ಇತ್ತೀಚೆಗಷ್ಟೇ ಅವರ ಪುತ್ರಿ ವಮಿಕಾ ಮೇಲೆ ಅತ್ಯಾಚಾರ ಬೆದರಿಕೆ ಬಂದಿತ್ತು.

Read more Photos on
click me!

Recommended Stories