ಬಾಲಿವುಡ್ ನಟಿ ಕತ್ರಿನಾ ಕೈಫ್ ನಟ ವಿಕ್ಕಿ ಕೌಶಲ್ ಅವರೊಂದಿಗಿನ ವಿವಾಹದ ಕಾರಣದಿಂದ ಸುದ್ದಿಯಲ್ಲಿದ್ದಾರೆ, ಅದು ಕೆಲವೇ ವಾರಗಳಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ವಿಕ್ಕಿ ಮತ್ತು ಕತ್ರಿನಾ ರಾಜಸ್ಥಾನದ ಐತಿಹಾಸಿಕ ಕೋಟೆಯಲ್ಲಿ ಕೆಲವು ಆಪ್ತ ಸ್ನೇಹಿತರು ಮತ್ತು ಕುಟುಂಬದ ಸಮ್ಮುಖದಲ್ಲಿ ಮದುವೆಯಾಗುವ ನಿರೀಕ್ಷೆಯಿದೆ.
ಈ ನಡುವೆ ಕತ್ರಿನಾರಗೆ ಸಂಬಂಧಪಟ್ಟ ವಿಷಯವೊಂದು ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ. ಆದರೆ ಇದು ಅವರ ಮದುವೆಯ ಬಗ್ಗೆ ಯಾವುದೇ ಹೊಸ ಅಪ್‌ಡೇಟ್ ಅಲ್ಲ. ಆಕೆಯ ಹ್ಯಾಂಡ್‌ಸಮ್ ಬಾಡಿಗಾರ್ಡ್ ಬಗ್ಗೆ ಆಗಿದೆ. ಕತ್ರಿನಾರ ಬಾಡಿಗಾರ್ಡ್ ದೀಪಕ್ ಸಿಂಗ್ ಅವರು ಯಾವುದೇ ಬಾಲಿವುಡ್ ಹೀರೋ ಗಿಂತ ಕಡಿಮೆಯಿಲ್ಲ.
ಕತ್ರಿನಾ ಕೈಫ್ ಜೊತೆ ಇರುವ ದೀಪಕ್ ಯಾವಾಗಲೂ ಉತ್ತಮವಾದ ಡ್ರೆಸ್‌ನಲ್ಲಿರುವುದು ಕಾಣಬಹುದು. ಕತ್ರಿನಾ ಕೈಫ್ ಅವರ ಅನೇಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಸೂಟ್-ಬೂಟ್ ಧರಿಸಿದ ಈ ಹ್ಯಾಂಡ್‌ಸಮ್ ಮನುಷ್ಯ ಕಾಣಿಸಿಕೊಂಡಿದ್ದಾರೆ. 6 ಅಡಿ ಎತ್ತರವಿರುವ ದೀಪಕ್ ಕತ್ರೀನಾ ರ ಜೊತೆ ಇವರು ಸಹ ಎಲ್ಲರ ಗಮನ ಸೆಳೆಯುತ್ತಾರೆ
ಸಂದರ್ಶನವೊಂದರಲ್ಲಿ ದೀಪಿಕ್ ತಮ್ಮ ಉಡುಪಿನ ಬಗ್ಗೆ ಮಾತನಾಡಿದ್ದಾರೆ ಮತ್ತು ಚೆನ್ನಾಗಿ ಡ್ರೆಸ್ಸಿಂಗ್ ಕೂಡ ನಿಮಗೆ ತೂಕ ನೀಡುತ್ತದೆ ಎಂದು ಹೇಳಿದರು. ನೀವು ಸಾಮಾನ್ಯ ಸಫಾರಿ ಸೂಟ್ ಧರಿಸಿದರೆ, ಈ ವ್ಯಕ್ತಿ ಸೆಕ್ಯುರಿಟಿ ಗಾರ್ಡ್ ಎಂಬ ಭಾವನೆಯನ್ನು ಎಲ್ಲರಿಗೂ ನೀಡುತ್ತದೆ. ಆದ್ದರಿಂದ VVIP ಜೊತೆ ಇರುವಾಗ ಪ್ರೆಸೆಂಟೆಬಲ್ ಆಗಿ ಕಾಣಬೇಕು ಎಂದು ಅವರು ಹೇಳಿದರು.
ಕತ್ರಿನಾ ಕೈಫ್ ಮಾತ್ರವಲ್ಲದೆ, ದೀಪಕ್ ಸಿಂಗ್ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯದ ಹಲವಾರು ಸೆಲೆಬ್ರಿಟಿಗಳೊಂದಿಗೆ ಕೆಲಸ ಮಾಡಿದ್ದಾರೆ. ಅವರು ವಿವಿಧ ಸಂದರ್ಭಗಳಲ್ಲಿ ಅವರಿಗೆ ಸೆಕ್ಯುರಿಟಿಯನ್ನು ಒದಗಿಸಿದ್ದಾರೆ ಎಂದು ವರದಿಯಾಗಿದೆ.
ಶಾರಖ್ ಖಾನ್,ಸಲ್ಮಾನ್ ಖಾನ್‌ನಿಂದ ಜಾಕ್ವೆಲಿನ್ ಫರ್ನಾಂಡೀಸ್ ವರೆಗೆ , ಮಾಧುರಿ ದೀಕ್ಷಿತ್‌ನಿಂದ ಪ್ಯಾರಿಸ್ ಹಿಲ್ಟನ್‌ವರೆಗೆ ಮತ್ತು ಇನ್ನೂ ಹಲವು ಸೆಲಬ್ರಿಟಿಗಳ ಜೊತೆ ದೀಪಕ್ ಸಿಂಗ್ ಕೆಲಸ ಮಾಡಿದ ಉದಾಹರಣೆಗಳಿವೆ.
ಬಾಲಿವುಡ್ ನಟ ರೋನಿತ್ ರಾಯ್ ಅವರು ದೀಪಕ್ ಅವರ ಬ್ರದರ್ ಇನ್ ಲಾ ಮತ್ತು ರೀನಿತ್ ರಾಯ್ ಅವರು ಅವರ ಭದ್ರತಾ ಏಜೆನ್ಸಿಯಲ್ಲಿ ದೀಪಕ್‌ಗೆ ಕೆಲಸ ನೀಡಿದರು.
ScoopWhoop ಪ್ರಕಾರ, ದೀಪಕ್ ಸಿಂಗ್ ಅವರ ಸಂಬಳ ವಾರ್ಷಿಕವಾಗಿ ಸುಮಾರು 1 ಕೋಟಿ ರೂಪಾಯಿಗಳು. ಅಮಿತಾಭ್ ಬಚ್ಚನ್ ಮತ್ತು ರಾಣಿ ಮುಖರ್ಜಿ ನಟಿಸಿರುವ ಸಂಜಯ್ ಲೀಲಾ ಬನ್ಸಾಲಿಯವರ 2005 ರ ಬ್ಲಾಕ್ ಸಿನಿಮಾದ ಸೆಟ್‌ನಲ್ಲಿ ಡೋರ್‌ಮ್ಯಾನ್ ಆಗಿ ದೀಪಿಕ್ ಅವರ ಮೊದಲ ಆಸೈನ್‌ಮೆಂಟ್ ಆಗಿತ್ತು ಎಂದು ಹೇಳಲಾಗಿದೆ.