Soni Razdan and sister Shaheen Bhatt
ಆಲಿಯಾ ಭಟ್ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶ ಮಾಡಿದರು ಮತ್ತು ಆದರ ನಂತರ ಅವರು ಹಿಂತಿರುಗಿ ನೋಡಲಿಲ್ಲ. 'ಶನಯಾ' ಪಾತ್ರಕ್ಕಾಗಿ ಆಡಿಷನ್ ನೀಡಿದ ಆಲಿಯಾ ತನ್ನ ಚೊಚ್ಚಲ ಚಿತ್ರಕ್ಕೆ 15 ಲಕ್ಷ ರೂಪಾಯಿ ಸಂಭಾವನೆ ಪಡೆದು ನೇರವಾಗಿ ತನ್ನ ತಾಯಿಯ ಬಳಿಗೆ ಹೋಗಿ ಚೆಕ್ ಅನ್ನು ಕೊಟ್ಟು 'ಅಮ್ಮಾ, ನೀವು ಹಣವನ್ನು ನಿಭಾಯಿಸಿ' ಎಂದು ಹೇಳಿದರು.
ಸಂದರ್ಶನವೊಂದರಲ್ಲಿ, ನಟಿ ತನ್ನ ತಾಯಿ ಸೋನಿ ರಾಜ್ಡಾನ್ ಇನ್ನೂ ತನ್ನ ಹಣವನ್ನು ನಿಯಂತ್ರಿಸುತ್ತಾರೆ ಮತ್ತು ತನ್ನ ಹಣ ಎಲ್ಲಿಗೆ ಹೋಗುತ್ತಿದೆ ಎಂದು ನೋಡುವುದಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ.
ಆಲಿಯಾ ಭಟ್ ಅವರನ್ನು ಬಾಲಿವುಡ್‌ನ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ನಟಿ ಚಿಕ್ಕ ವಯಸ್ಸಿನಲ್ಲೇ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು
ಡಿಯರ್ ಜಿಂದಗಿ, ಗಲ್ಲಿ ಬಾಯ್, ಹೈವೇ, ಹಂಪ್ಟಿ ಶರ್ಮಾ ಕಿ ದುಲ್ಹನಿಯಾ, 2 ಸ್ಟೇಟ್ಸ್, ಕಪೂರ್ ಮತ್ತು ಸನ್ಸ್, ರಾಝಿ ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ಅತ್ಯುತ್ತಮವಾದ ಅಭಿನಯವನ್ನು ನೀಡಿದ್ದಾರೆ.
ಆಲಿಯಾ ಭಟ್ ಅವರ ಚೊಚ್ಚಲ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರನ್ನು ಮೆಚ್ಚಿಸಲಿಲ್ಲ. ಹಾಗಾಗಿ ಅವರು ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.
ಹೈವೇ, ಇಮ್ತಿಯಾಜ್ ಅಲಿ ಅವರೊಂದಿಗಿನ ಅವರ ಎರಡನೇ ಚಿತ್ರ, ಅವರ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದರು ಮತ್ತು ಅದರ ನಂತರ ಅವರು ಪ್ರತಿಯೊಂದು ಪಾತ್ರದಲ್ಲಿ ತಮ್ಮನ್ನು ತಾವು ಸಾಭಿತು ಪಡಿಸುತ್ತಾ ಬಂದಿದ್ದಾರೆ. ಅವರು ಪಾತ್ರದ ವ್ಯಕ್ತಿತ್ವವನ್ನು ಅಪ್ಪಿಕೊಳ್ಳುತ್ತಾರೆ ಮತ್ತು ಪ್ರೇಕ್ಷಕರನ್ನು ಮೂಕರನ್ನಾಗಿಸುತ್ತಾರೆ.
ಆಲಿಯಾ ತನ್ನ ಸಿಎ, ಕುಟುಂಬದ ಸ್ನೇಹಿತ ಕೂಡ ತುಂಬಾ ಒತ್ತಡದಲ್ಲಿದ್ದಾರೆ ಮತ್ತು ಹಣವನ್ನು ಖರ್ಚು ಮಾಡಲು ಮತ್ತು ಮಜಾ ಮಾಡಲು ಒತ್ತಾಯಿಸುತ್ತಾರೆ ಎಂದು ಹೇಳಿಕೊಂಡಿದ್ದಾರೆ. ತಾನು ದೊಡ್ಡ ಖರ್ಚು ಮಾಡುವವಳಲ್ಲ ಮತ್ತು ಹೂಡಿಕೆ ಮಾಡುವುದಿಲ್ಲ ಎಂದೂ ಅವರು ಹೇಳಿದ್ದಾರೆ.
'ನನ್ನ ತಾಯಿ ಎಲ್ಲವನ್ನೂ ಮಾಡುತ್ತಾರೆ, ಮತ್ತು ಹಣವನ್ನು ಎಲ್ಲಿ ಹೂಡಿಕೆ ಮಾಡಲಾಗಿದೆ ಎಂಬುದರ ಕುರಿತು ಅವರು ನನಗೆ ಅಪ್‌ಡೇಟ್ ಮಾಡುತ್ತಾರೆ ಎಂದು ಹೇಳಿದ ಅವರು ತಾನು 19 ವರ್ಷದವಳಿದ್ದಾಗ ತನ್ನ ಮೊದಲ ಕಾರು ಮತ್ತು 22 ನೇ ವಯಸ್ಸಿನಲ್ಲಿ ತನ್ನ ಮೊದಲ ಮನೆಯನ್ನು ಖರೀದಿಸಿದೆ ಎಂದು ಆಲಿಯಾ ಹಂಚಿಕೊಂಡಿದ್ದಾರೆ.