ಸುಖೇಶ್ ಚಂದ್ರಶೇಖರ್ ನಂತರ ವಿದೇಶಿ ನಟನೊಂದಿಗೆ ಜಾಕ್ವೆಲಿನ್ ಫೆರ್ನಾಂಡಿಸ್ ಡೇಟಿಂಗ್‌?

First Published | Aug 22, 2022, 3:25 PM IST

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಸಿನಿಮಾಗಳಿಗಿಂತ ಹೆಚ್ಚು ಪರ್ಸನಲ್‌ ಲೈಫ್‌ಗಾಗಿ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಸುಖೇಶ್ ಚಂದ್ರಶೇಖರ್ ಅವರೊಂದಿಗೆ ಸಂಪರ್ಕ ಹೊಂದಿದ ನಂತರ, ಜಾಕ್ವೆಲಿನ್ ಫೆರ್ನಾಂಡಿಸ್ ಈಗ 365 ಡೇಸ್ (365 Days) ಸ್ಟಾರ್ ಮೈಕೆಲ್ ಮೊರೊನ್ (Michele Morrone) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸುಖೇಶ್ ಚಂದ್ರಶೇಖರ್  ಅವರೊಂದಿಗೆ ಸಂಪರ್ಕ ಹೊಂದಿದ ನಂತರ, ಜಾಕ್ವೆಲಿನ್ ಫೆರ್ನಾಂಡಿಸ್ ಈಗ 365 ಡೇಸ್ ಸ್ಟಾರ್ ಮೈಕೆಲ್ ಮೊರೊನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.  

ಟೋನಿ ಮತ್ತು ನೇಹಾ ಕಕ್ಕರ್ ಅವರ ಬಾಲಿವುಡ್ ಹಾಡಿನ ಮಡ್ ಮಡ್ ಕೆಯಲ್ಲಿ ಜಾಕ್ವೆಲಿನ್ ಮತ್ತು ಮಿಚೆಲ್ ಕಾಣಿಸಿಕೊಂಡ ನಂತರ ವದಂತಿಗಳು ಹರಡಲು ಪ್ರಾರಂಭಿಸಿದವು. ಮ್ಯೂಸಿಕ್ ವೀಡಿಯೊವನ್ನು ಪ್ರಕಟಿಸಿದ ನಂತರ ಅವರ ಹಾಟ್ ಆನ್-ಸ್ಕ್ರೀನ್ ಕೆಮಿಸ್ಟ್ರಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

Tap to resize

ಬೋಲ್ಡ್‌ನೆಸ್‌ನಿಂದ ಇಬ್ಬರೂ ತಾಪಮಾನವನ್ನು ಹೆಚ್ಚಿಸಿದ್ದಾರೆ ಮತ್ತು ಇಬ್ಬರ ನಡುವಿನ ಕೆಮಿಸ್ಟ್ರಿ ನೋಡಿ ಜನ ನಿಜ ಜೀವನದ ಸಂಬಂಧದಲ್ಲಿದ್ದಾರೆ ಎಂದು ಊಹಿಸಲು ಕಾರಣವಾಯಿತು.
 

Image: Still from the video

ಇದಕ್ಕೆ ವಿರುದ್ಧವಾಗಿ, ಮೊರೊನ್ ತನ್ನ Instagram ಸ್ಟೋರಿಗಳಲ್ಲಿ ಅಭಿಮಾನಿಗಳಿಗೆ ಉತ್ತರಿಸುವಾಗ ಸಂಬಂಧದ ವದಂತಿಗಳನ್ನು ಹೊರಹಾಕಿದರು. ನಟ ತಾನು ಪ್ರಸ್ತುತ ಸಿಂಗಲ್‌ ಮತ್ತು ಯಾರನ್ನೂ ನೋಡುತ್ತಿಲ್ಲ ಎಂದು ಹೇಳಿದ್ದಾರೆ. 

ಪ್ರಸ್ತುತ ಈ ನಟ  ತನ್ನ ಕೆಲಸದ ಮೇಲೆ ಕೇಂದ್ರೀಕರಿಸುತ್ತಿರುವಂತೆ ತೋರುತ್ತಿದೆ. 2020 ರಲ್ಲಿ ವೈರಲ್ ಆದ 365 ಡೇಸ್‌  ನಂತರ ಮೊರೊನ್‌ ಅವರ ಫೇಮ್‌   ಶೀಘ್ರವಾಗಿ  ಏರಿತು.
 

ಮೊರೊನ್ ತನ್ನ ಡಿಸೈನರ್ ಮಾಜಿ-ಪತ್ನಿ ರೌಬಾ ಸಾದೇಹ್ ಅವರ ವಿಚ್ಛೇದನದ ನಂತರ  ತುಂಬಾ ಕಷ್ಟದ ಸಮಯವನ್ನು ಹೊಂದಿದ್ದರು. ಭವಿಷ್ಯದ ಬಗ್ಗೆ ಭಿನ್ನಾಭಿಪ್ರಾಯದಿಂದಾಗಿ ಮೊರೊನ್ ಮತ್ತು ಪ್ಯಾರಾಡಿಸ್ ಡೆಸ್ ಫೌಸ್ ಸ್ಥಾಪಕಿ  ರೌಬಾ ಅವರು ಬೇರೆಯಾದರು. ಮೈಕೆಲ್ ಅಸಮಾಧಾನ ಮತ್ತು ಖಿನ್ನತೆಗೆ ಒಳಗಾಗಿದ್ದರು. 
 

ಚಂದ್ರಶೇಖರ್ ಜೊತೆಗಿನ ಜಾಕ್ವೆಲಿನ್ ಅವರ ರೊಮ್ಯಾಂಟಿಕ್ ಮ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಆದ ನಂತರ  ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಉತ್ತೇಜನ ನೀಡಲಾಯಿತು. ಆದಾಗ್ಯೂ, ನಟಿಯು ಸುಕೇಶ್‌ ಜೊತೆ  ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ನಿರಾಕರಿಸಿದರು. 

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ಸುಕೇಶ್ ಭಾಗಿಯಾಗಿರುವುದನ್ನು ಪತ್ತೆ ಹಚ್ಚಿದ ನಂತರ ಜಾರಿ ನಿರ್ದೇಶನಾಲಯ (ಇಡಿ) ಜಾಕ್ವೆಲಿನ್‌ಗೆ ಸಮನ್ಸ್ ನೀಡಿದೆ. ವರದಿಗಳ ಪ್ರಕಾರ, ಜಾಕ್ವೆಲಿನ್ ಮತ್ತು ಸುಕೇಶ್ ಚೆನ್ನೈನಲ್ಲಿ ಭೇಟಿಯಾದರು ಮತ್ತು ನಟಿಯನ್ನು ಭೇಟಿ ಮಾಡಲು ಖಾಸಗಿ ವಿಮಾನವನ್ನು ಏರ್ಪಡಿಸಿದ್ದರು. ಅವರ ಸಂಬಂಧ 2021 ರಲ್ಲಿ ಪ್ರಾರಂಭವಾಯಿತು ಮತ್ತು ಸುಕೇಶ್ ಆಕೆಗೆ ಜೈಲಿನಿಂದ ಸಂದೇಶ ಕಳುಹಿಸುತ್ತಿದ್ದರು ಎಂದು ವರದಿಯಾಗಿದೆ

Latest Videos

click me!