ಯಶ್-ರಾಧಿಕಾ ರೀತಿಯಲ್ಲೇ ಮದ್ವೆಯಾದ್ರ ರಶ್ಮಿಕಾ ಮಂದಣ್ಣ … ಎರಡೂ ಮದ್ವೇಲಿ ಏನಿದೆ ಹೋಲಿಕೆ?

Published : Feb 28, 2026, 11:56 PM ISTUpdated : Mar 01, 2026, 12:03 AM IST

ದಕ್ಷಿಣ ಭಾರತದ ಈ ಜನಪ್ರಿಯ ಜೋಡಿಗಳ ಪ್ರೀತಿ ಶುರುವಾಗಿದ್ದೇ ಸಿನಿಮಾ ಸೆಟ್ ಮೂಲಕ, ಆದರೆ ಆಕ್ಷನ್ ಹೇಳುವಾದ ಶುರುವಾದ ಪ್ರೇಮ, ಕಟ್ ನಲ್ಲಿ ಕೊನೆಗೊಳ್ಳಲಿಲ್ಲ. ಅದು ಮದುವೆ ತನಕ ಬಂದು, ಮೂರು ಗಂಟುಗಳ ಪವಿತ್ರ ಬಂಧನದಲ್ಲಿ ಗಟ್ಟಿಯಾಗಿದೆ. ಅಂತಹ ನಟ-ನಟಿಯರು ಯಾರ್ಯಾರು ನೋಡೋಣ. 

PREV
18
ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ

ವಿಜಯ್ ಮತ್ತು ರಶ್ಮಿಕಾ ಪ್ರೀತಿ ಶುರುವಾಗಿದ್ದು, 2018ರಲ್ಲಿ ತೆರೆಕಂಡ ‘ಗೀತಾ ಗೋವಿಂದಂ’ ಸಿನಿಮಾ ಮೂಲಕ. ಈ ಚಿತ್ರದಲ್ಲಿ ಶುರುವಾದ ಪ್ರೀತಿ ಮುಂದುವರೆದು, ಇದೀಗ 2026ರ ಫೆಬ್ರುವರಿಯಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

28
ಸೂರ್ಯ ಮತ್ತು ಜ್ಯೋತಿಕಾ

ತಮಿಳಿನ ಜನಪ್ರಿಯ ಜೋಡಿಗಳಾದ ಸೂರ್ಯ ಮತ್ತು ಜ್ಯೋತಿಕಾ ಪೂವೆಲ್ಲಾ ಕೇಟುಪಾರ್ ಸಿನಿಮಾದಲ್ಲಿ ಮೊದಲಬಾರಿ ನಟಿಸಿದ್ದರು, ಅಷ್ಟರಲ್ಲೇ ಲವ್ವಲ್ಲಿ ಬಿದ್ದಿದ್ದ ಜೋಡಿ ಬಳಿಕ 6-7 ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದರು. ಈ ಜೋಡಿ 2006ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

38
ಅಜಿತ್ ಮತ್ತು ಶಾಲಿನಿ

ಮಲಯಾಳಂ ಸಿನಿಮಾ ಮೂಲಕ ಜನಪ್ರಿಯತೆ ಪಡೆದ ಶಾಲಿನಿ ಅಜಿತ್ ಜೊತೆ ಮೊದಲು ಮತ್ತು ಕೊನೆಯದಾಗಿ ನಟಿಸಿದ ಸಿನಿಮಾ ‘ಅಮರಕಾಲಮ್’ 1999 ರಲ್ಲಿ ಈ ಚಿತ್ರ ಬಿಡುಗಡೆಯಾದರೆ, 2000ದಲ್ಲಿ ಈ ಜೋಡಿ ಮದುವೆಯಾದರು. ಬಳಿಕ ಶಾಲಿನಿ ಸಂಪೂರ್ಣವಾಗಿ ಸಿನಿಮಾದಿಂದ ದೂರ ಉಳಿದರು.

48
ಫಹಾದ್ ಫಾಜಿಲ್ ಮತ್ತು ನಸ್ರೀಯ

ಈ ಜೋಡಿ ಬೆಂಗಳೂರ್ ಡೇಸ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದರು, ಅದೇ ಸಮಯದಲ್ಲಿ ಪ್ರೀತಿಯಲ್ಲಿ ಬಿದ್ದು, ಅದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

58
ಯಶ್ ಮತ್ತು ರಾಧಿಕಾ ಪಂಡಿತ್

ರಶ್ಮಿಕಾ ಮತ್ತು ಯಶ್ ಮದುವೆಗೆ ಹೋಲಿಕೆ ಯಾಕೆಂದರೆ, ಇಬ್ಬರೂ ಕೂಡ ತಮ್ಮ ಜೊತೆಯಲ್ಲಿ ನಟಿಸಿದ ಸಹನಟರನ್ನೇ ಮದುವೆಯಾಗಿರುವುದರಿಂದ ಹೋಲಿಕೆ ಮಾಡಲಾಗಿದೆ. ಮೊಗ್ಗಿನ ಮನಸು ಸಿನಿಮಾದಲ್ಲಿ ಈ ಜೋಡಿ ಜೊತೆಯಾಗಿ ನಟಿಸಿದ್ರೂ ಸಹ ಇವರು ಅದಕ್ಕೂ ಮುನ್ನ ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸಿದ್ದರು.

68
ಮಹೇಶ್ ಬಾಬು ಮತ್ತು ನಮ್ರತಾ

2001ರಲ್ಲಿ ಬಿಡುಗಡೆಯಾದ ವಂಶಿ ಸಿನಿಮಾದಲ್ಲಿ ನಮೃತಾ ಶಿರೋಡ್ಕರ್ ಮತ್ತು ಮಹೇಶ್ ಬಾಬು ಜೊತೆಯಾಗಿ ನಟಿಸಿದ್ದರು. ಆ ಸಮಯದಲ್ಲೇ ಪ್ರೀತಿಯಲ್ಲಿ ಬಿದ್ದ ಈ ಜೋಡಿ 2005ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಂತರ ನಮೃತಾ ಸಿನಿಮಾರಂಗದಿಂದ ದೂರ ಉಳಿದರು.

78
ಅದಿತಿ-ಸಿದ್ದಾರ್ಥ್

ನಟಿ ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಮೊದಲ ಬಾರಿಗೆ ಜೊತೆಯಾಗಿ 2021ರಲ್ಲಿ ಮಹಾ ಸಮುದ್ರಮ್ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ನಂತರ 2024ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

88
ಲಾವಣ್ಯ-ವರುಣ್

ಲಾವಣ್ಯ ತ್ರಿಪಾಠಿ ಮತ್ತು ವರುಣ್ ತೇಜ್ ಜೊತೆಯಾಗಿ 2017ರಲ್ಲಿ ಮಿಸ್ಟರ್ ಸಿನಿಮಾದಲ್ಲಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿ, ಅದೇ ಸಿನಿಮಾ ಸೆಟ್ಟಲ್ಲಿ ಪ್ರೀ ಹುಟ್ಟಿಕೊಂಡು, ಕೊನೆಗೆ 2025ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories