ಎದೆ ಸೀಳು ತೋರಿಸಿದ Sunny Leone: ಮಾಜಿ ನೀಲಿ ತಾರೆಯ ನೀಲಿ ಡ್ರೆಸ್ ಪೋಟೋಸ್ ವೈರಲ್!

First Published | Oct 18, 2023, 8:53 AM IST

ಐಟಮ್ ಡ್ಯಾನ್ಸ್​ಗಳ ಮೂಲಕ ಪ್ರೇಕ್ಷರನ್ನು ರಂಜಿಸುವ ನಟಿ ಸನ್ನಿ ಲಿಯೋನ್​ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಬಾಲಿವುಡ್​ನ ಕ್ಯೂಟ್ ನಟಿ ಇದೀಗ ನೇವಿ ಬ್ಲೂ ಪ್ಯಾಂಟ್‌ಸೂಟ್‌ ಧರಿಸಿ ಪೋಸ್ ಕೊಟ್ಟಿದ್ದಾರೆ.

ಸನ್ನಿ ಲಿಯೋನ್ ಅವರದು ಒಮ್ಮೆ ನೋಡಿದರೆ ಮರೆತುಬಿಡುವ ಮೈಮಾಟವಲ್ಲ. ಒಮ್ಮೆ ನೋಡಿದವರು ಮತ್ತೆ ಮತ್ತೆ ನೋಡಲೇಬೇಕು ಎನ್ನುವಷ್ಟು ಸೌಂದರ್ಯದ ಖನಿ ಸನ್ನಿ ಲಿಯೋನ್. ಕೊಟ್ಟ ಜಾಗವನ್ನು ಬಿಟ್ಟ ಬಾಣವನ್ನು ಸರಿಯಾಗಿಯೇ ಉಪಯೋಗಿಸಿಕೊಂಡ ಸನ್ನಿ ಲಿಯೋನ್ ಹಿಂದಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ನಟಿಯಾಗಿ ಮಾತ್ರ ಗುರುತಿಸಿಕೊಳ್ಳದ ಸನ್ನಿ ಲಿಯೋನ್, ಆಗಾಗ ತಮಗಾದಷ್ಟು ಸಾಮಾಜಿಕ ಸೇವೆಗಳಲ್ಲಿ ಕೂಡ ತೊಡಗಿಸಿಕೊಂಡು ಭಾರತೀಯರ ಪ್ರೀತಿ  ವಿಶ್ವಾಸ ಗಳಿಸಿದ್ದಾರೆ. ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮೂಲಕ ತಮ್ಮ ಸಾಮಾಜಿಕ ಕಳಕಳಿಯನ್ನು ಸಹ ಸನ್ನಿ ಲಿಯೋನ್ ಜಗಜ್ಜಾಹೀರು ಮಾಡಿದ್ದಾರೆ. 

Tap to resize

ಬಿಟೌನ್‌ ಸನ್ನಿ ಲಿಯೋನ್ ತಮ್ಮ ಸೌಂದರ್ಯದಿಂದಲೇ ಸಾಕಷ್ಟು ಹೆಸರು ಮಾಡಿದ ಸುಂದರಿ. ಬಾಲಿವುಡ್‌ ಸೇರಿದಂತೆ ಸೌತ್‌ ಸಿನಿರಂಗದಲ್ಲೂ ಈ ಚೆಲುವೆಗೆ ಸಾಕಷ್ಟು ಬೇಡಿಕೆ ಇದೆ. ಇದೀಗ ನೇವಿ ಬ್ಲೂ ಪ್ಯಾಂಟ್‌ಸೂಟ್‌ ಧರಿಸಿ ಕ್ಯಾಮರಾಗೆ ಪೋಸ್‌ ನೀಡಿರುವ ಮಾದಕ ನಟಿಯ ನೋಟ ಅಂತರ್ಜಾಲದಲ್ಲಿ ವೈರಲ್‌ ಆಗುತ್ತಿದೆ. 

ಸನ್ನಿ ಲಿಯೋನ್ ಲುಕ್ ನೋಡಿದ ನೆಟ್ಟಿಗರು ಫಿದಾ ಆಗಿದ್ದಾರೆ. ಸನ್ನಿ ಯಾವಾಗಲೂ ತುಂಬಾ ಸುಂದರವಾಗಿ ಕಾಣಿಸುತ್ತಾರೆ. ಅವರ ಚೆಲುವಿಗೆ ಮಿತಿಯೇ ಇಲ್ಲ. ಬೇಬಿ ಡಾಲ್​ನಂತೆ ಕಾಣುತ್ತೀರಿ. ಎಷ್ಟೊಂದು ಕ್ಯೂಟ್ ಎಂದಿದ್ದಾರೆ ನೆಟ್ಟಿಗರು.

ನಟಿ ಸನ್ನಿ ಲಿಯೋನ್ ತಮ್ಮ ವೃತ್ತಿಯಲ್ಲಿ ಮೊದಲಿನಿಂದಲೂ ಹಂತಹಂತವಾಗಿ ಟ್ರಾನ್ಸ್‌ಫಾರ್ಮ್ ಆಗಿರುವ ರೀತಿ ನಿಜಕ್ಕೂ ರೋಚಕ ಎನಿಸುವ ಕಥೆ. ವೃತ್ತಿ ಜೀವನದ ಪ್ರಾರಂಭದಲ್ಲಿ ನೀಲಿ ನಟಿ ಎಂಬ ಅಪಖ್ಯಾತಿ ಹೊತ್ತು ಬಂದು ಸನ್ನಿ ಲಿಯೋನ್, ಬಳಿಕ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 

ದಕ್ಷಿಣ ಭಾರತದಲ್ಲಿ ಈಗಾಗಲೇ ಮಲಯಾಳಂ ಚಿತ್ರರಂಗದಲ್ಲಿ ಕಾಲಿಡುವ ತಯಾರಿಯಲ್ಲಿರುವ ಸನ್ನಿ ಲಿಯೋನ್‌, 2024ರಲ್ಲಿ ರಂಗೀಲಾ ಎನ್ನುವ ಸಿನಿಮಾದೊಂದಿಗೆ ಕೇರಳ ಸಿನಿ ಇಂಡಸ್ಟ್ರಿಗೆ ಕಾಲಿಡಲಿದ್ದಾರೆ. 

ಸನ್ನಿ ಲಿಯೋನ್ ಈಗಾಗಲೇ ಕನ್ನಡದಲ್ಲಿ ಕೆಲವು ವರ್ಷಗಳ ಹಿಂದೆಯೇ 'ಲವ್‌ ಯು ಆಲಿಯಾ' ಹಾಗೂ ಡಿಕೆ ಸಿನಿಮಾದಲ್ಲಿ ಸ್ಪೆಷಲ್‌ ಹಾಡಿಗೆ ನೃತ್ಯ ಮಾಡುವ ಮೂಲಕ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ನಟಿ ಸನ್ನಿ ಲಿಯೋನ್ ಅವರು ಕೊನೆಯ ಬಾರಿಗೆ ಅನುರಾಗ್ ಕಷ್ಯಪ್ ಅವರ ಕೆನಡಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಐಐಎಫ್​ಎನಲ್ಲಿ ಪ್ರೀಮಿಯರ್ ಶೋ ಆಗಿತ್ತು. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Latest Videos

click me!