“ನನ್ನ ಮಗನ ಬರ್ತ್ ಸೆರ್ಟಿಫಿಕೇಟ್‌ನಲ್ಲಿ ಧರ್ಮದ ಕಾಲಂ ಖಾಲಿ ಇಡಲಾಗಿದೆ. ಸರ್ಕಾರದಿಂದ ಬರ್ತ್ ಸೆರ್ಟಿಫಿಕೇಟ್‌ನ ಬಂದಾಗ, ಅದರಲ್ಲಿ ಧರ್ಮವನ್ನು ಉಲ್ಲೇಖ ಮಾಡಿರಲಿಲ್ಲ. ಸರ್ಕಾರವು ಧರ್ಮವನ್ನು ಕಡ್ಡಾಯವಾಗಿ ಬರೆಯಬೇಕು ಅಂತ ಹೇಳೋದಿಲ್ಲ, ಅದು ನಮ್ಮ ಆಯ್ಕೆ. ನಾನು ಬರ್ತ್ ಸೆರ್ಟಿಫಿಕೇಟ್ ನೋಡಿದ ಕೂಡಲೇ, ಧರ್ಮದ ಕಾಲಂನಲ್ಲಿ ಒಂದು ಡ್ಯಾಶ್ ಗುರುತು ಹಾಕಿದೆ. ನನ್ನ ಮಗ ಧರ್ಮ ನೋಡಿ ಯಾರನ್ನಾದರೂ ಅನುಸರಿಸಿ, ಆಮೇಲೆ ತಾರತಮ್ಯ ಮಾಡಿದರೆ, ಬೇಸರ ಆಗುವುದು. ನಾನು ನನ್ನ ಮಗನನ್ನು ಆ ರೀತಿ ಬೆಳೆಸ್ತಿಲ್ಲ” ಎಂದು ಹೇಳಿದ್ದಾರೆ.