Actor Thalapathy Vijay News: ದಳಪತಿ ವಿಜಯ್ ಅವರು ಕ್ರಿಶ್ಚಿಯನ್. ಅವರಿಗೆ ಜೋಸೆಫ್ ವಿಜಯ್ ಎಂಬ ಹೆಸರಿದೆ. ಆದರೆ ಅವರು ಹೆಚ್ಚಾಗಿ ಹಿಂದು ದೇವಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದರು. ಇದರ ಹಿಂದೆ ಕೂಡ ವಿಶೇಷವಾದ ಕಾರಣವಿದೆ. ಏನದು?
ನಾಲ್ಕು ವರ್ಷಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ವಿಜಯ್ ದಳಪತಿ ಅವರು ನಾನು ದೇವರನ್ನು ನಂಬುತ್ತೇನೆ, ನಾನು ಚರ್ಚ್‌ಗಳಿಗೆ ಹೋಗುವೆ, ದೇವಸ್ಥಾನಗಳಿಗೆ ಹೋಗುವೆ, ದರ್ಗಾಕ್ಕೂ ಕೂಡ ಹೋಗಿದ್ದೆ. ಎಲ್ಲ ಸ್ಥಳಗಳಲ್ಲಿ ನನಗೆ ಒಂದು ದೈವದ ಭಾವನೆ ಬರುವುದು. ನನ್ನ ತಾಯಿ ಹಿಂದು, ತಂದೆ ಕ್ರಿಶ್ಚಿಯನ್. ಅವರಿಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಅಲ್ಲಿಗೆ ಹೋಗಬಾರದು, ಇಲ್ಲಿಗೆ ಹೋಗಬಾರದು ಎಂದು ಮನೆಯಲ್ಲಿ ಹೇಳಿಲ್ಲ, ನಾನು ಕೂಡ ನನ್ನ ಮಕ್ಕಳಿಗೆ ಹೇಳೋದಿಲ್ಲ ಎಂದು ಹೇಳಿದ್ದರು.
24
ಸಾಯಿ ಬಾಬಾ ಮಂದಿರ ಕಟ್ಟಿದ್ರು
ತಾಯಿ ಸಾಯಿಬಾಬಾ ಭಕ್ತೆ, ಹೀಗಾಗಿ ಅವರು ತಾಯಿಗೋಸ್ಕರ ಸಾಯಿ ಬಾಬಾ ಮಂದಿರನ್ನು ಕಟ್ಟಿಸಿದ್ದರು. ಇದನ್ನು ಅವರು ಎಲ್ಲಿಯೂ ಪ್ರಚಾರ ಮಾಡದೆ, ಸಿಂಪಲ್ ಆಗಿ ಆರಂಭಿಸಿ ಮುಗಿಸಿದ್ದರು.
34
ತಂದೆಗೆ 70 ವರ್ಷದ ಶಾಂತಿ
ಹಿಂದು ಧರ್ಮದಲ್ಲಿ ವ್ಯಕ್ತಿಗೆ ವಯಸ್ಸು 60, 80 ಆಗುತ್ತಿದ್ದಂತೆ ವಿಶೇಷ ಪೂಜೆ ಮಾಡಲಾಗುತ್ತದೆ. ಅದರಂತೆ ವಿಜಯ್ ತಂದೆ ಎಸ್ ಎ ಚಂದ್ರಶೇಖರ್ ಕೂಡ 80 ವರ್ಷ ಆಗುತ್ತಿದ್ದಂತೆ ತಿರುಕಡೈಯೂರ್ ಅಮೃತೇಶ್ವರ ದೇವಸ್ಥಾನದಲ್ಲಿ 80 ವರ್ಷದ ಶಾಂತಿ ಮಾಡಿಸಿದ್ದರು.
ವಿಜಯ್ ತಂದೆ ಎಸ್ ಎ ಚಂದ್ರಶೇಖರ್ ಅವರು ಒಮ್ಮೆ ಈ ಬಗ್ಗೆ ಮಾತನಾಡಿದ್ದು, "ನಮ್ಮ ಮನೆಯಲ್ಲಿ ದೊಡ್ಡ ಪೂಜೆ ರೂಮ್‌ಗಳಿವೆ. ನಾನು ಎಲ್ಲ ಧರ್ಮವನ್ನು ನಂಬುತ್ತೇನೆ. ವಿಜಯ್ ಹಾಗೂ ಸಂಗೀತಾ ಹಿಂದು ಧರ್ಮದಂತೆ ಮದುವೆ ಆಗಿದ್ದಾರೆ, ಕ್ರಿಶ್ಚಿಯನ್ ಧರ್ಮದಂತೆ ಮದುವೆ ಆಗಿಲ್ಲ" ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.