‌Thalapathy Vijay ಭವಿಷ್ಯ ನಿರ್ಧಾರವಾಗೋ ದಿನವೇ ತಿರುಪತಿ ಮೊರೆ ಹೋದ ನಟಿ ತ್ರಿಶಾ; ಈಗಲೇ ಇಷ್ಟು ಬೆಂಬಲವೇ?

Published : May 04, 2026, 08:59 AM IST

‌Thalapathy Vijay Election News: ನಟಿ ತ್ರಿಶಾ ಕೃಷ್ಣನ್‌ಗೆ ಇಂದು 43ನೇ ವರ್ಷದ ಜನ್ಮದಿನ. ಗೆಳೆಯ ದಳಪತಿ ವಿಜಯ್‌ ರಾಜಕೀಯ ಭವಿಷ್ಯ ನಿರ್ಧಾರ ಆಗಲಿದೆ. ಹೀಗಾಗಿ ಅವರು ರಾತ್ರಿ ತಿರುಪತಿಗೆ ಪ್ರಯಾಣ ಬೆಳೆಸಿ, ಮುಂಜಾನೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಲ್ಲದೆ, ವಿಶೇಷ ಪೂಜೆ ಸಲ್ಲಿಸಿದ್ದಾರೆ. 

PREV
15
'ತಮಿಳಗ ವೆಟ್ರಿ ಕಳಗಂ' ಪಕ್ಷ ಸ್ಥಾಪಿಸಿರೋ ದಳಪತಿ ವಿಜಯ್

ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಗೊತ್ತಾಗುವ ದಿನವೇ ತ್ರಿಶಾ ಕೂಡ ಭೇಟಿ ಕೊಟ್ಟಿರೋದು ಅಚ್ಚರಿ ತಂದಿದೆ. ಅನೇಕ ವರ್ಷಗಳಿಂದ ನಟ ವಿಜಯ್‌ ಅವರು ರಾಜಕೀಯಕ್ಕೆ ಬರ್ತಾರೆ ಎಂದು ಗಾಸಿಪ್‌ ಕೇಳಿ ಬರುತ್ತಲೇ ಇತ್ತು. ಆದರೆ ದಳಪತಿ ವಿಜಯ್‌ ಅವರು ಅವರದ್ದೇ ಆದ ಪಕ್ಷವನ್ನು ಸ್ಥಾಪನೆ ಮಾಡಿದರು. 

ಸಿನಿಮಾದಿಂದ ದೂರ ಉಳಿದ ನಟ ವಿಜಯ್ ಅವರು 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷವನ್ನು ಸ್ಥಾಪನೆ ಮಾಡಿದರು. ಹೀಗಾಗಿ ಇವರ ಪಕ್ಷವು ಮೊದಲ ಬಾರಿಗೆ ಚುನಾವಣೆಯಲ್ಲಿ ಭಾಗವಹಿಸಿದೆ, ಹೀಗಾಗಿ ಈ ಫಲಿತಾಂಶದ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಸೃಷ್ಟಿ ಆಗಿದೆ.

25
ತಿರುಪತಿಗೆ ಭೇಟಿ ಕೊಟ್ಟ ತ್ರಿಶಾ

ತ್ರಿಶಾ ಅವರು ವಿಜಯ್‌ಗಾಗಿ ತಿರುಪತಿಗೆ ಭೇಟಿ ಕೊಟ್ಟಿದ್ದಾರೆ ಎಂದು ಅನೇಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಗೆಳೆಯ ದಳಪತಿ ವಿಜಯ್ TVK ಗೆಲುವಿಗಾಗಿ ತ್ರಿಶಾ ದೇವರ ಮೊರೆ ಹೋಗಿದ್ದಾರೆ ಎಂದು ಹೇಳುತ್ತಿದ್ದಾರೆ. ತಿರುಪತಿಗೆ ಪ್ರಯಾಣ ಮಾಡುತ್ತಿರುವ ವೀಡಿಯೊವನ್ನು ತ್ರಿಶಾ ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

35
ಕೆಲವು ಸಿನಿಮಾಗಳಲ್ಲಿ ಒಟ್ಟಿಗೆ ನಟನೆ

ನಟಿ ತ್ರಿಶಾ ಅವರು ಸಿನಿಮಾ ರಂಗದಲ್ಲಿ ಸಾಕಷ್ಟು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ದಳಪತಿ ವಿಜಯ್‌ ಹಾಗೂ ತ್ರಿಶಾ ಸಿನಿಮಾ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಒಟ್ಟೂ ನಾಲ್ಕು ( Ghilli, Thirupaachi, Kuruvi, Aathi ) ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದ ಈ ಜೋಡಿ, ಆ ಬಳಿಕ ಒಂದಿಷ್ಟು ವರ್ಷಗಳು ಕಳೆದ ಬಳಿಕ GOAT ಸಿನಿಮಾದಲ್ಲಿ ನಟಿಸಿದ್ದರು. ದಳಪತಿ ವಿಜಯ್‌ಗೆ ಈಗ 51 ವರ್ಷ, ತ್ರಿಶಾಗೆ 43 ವರ್ಷ.

45
ತ್ರಿಶಾರಿಂದಲೇ ದಳಪತಿ ವಿಜಯ್‌ ಸಂಸಾರದಲ್ಲಿ ಬಿರುಕು!

ದಳಪತಿ ವಿಜಯ್‌ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೆ ತ್ರಿಶಾ ಜೊತೆ ಸಂಬಂಧ ಇದೆ ಎಂದು ಅವರ ಪತ್ನಿ ಸಂಗೀತಾ ಡಿವೋರ್ಸ್‌ ಬೇಕೆಂದು ಕೋರ್ಟ್‌ ಮೆಟ್ಟಿಲೇರಿದ್ದಾರೆ. ಚುನಾವಣೆ ಮಧ್ಯೆ ಅವರ ವೈಯಕ್ತಿಕ ವಿಷಯ ದೊಡ್ಡ ಸಂಚಲನ ಮೂಡಿಸಿತ್ತು. ಇನ್ನೊಂದು ಕಡೆ ತ್ರಿಶಾ ಹಾಗೂ ದಳಪತಿ ವಿಜಯ್‌ ಅವರು ಒಂದೇ ಕಾರ್‌ನಲ್ಲಿ ಬಂದು ತಮಿಳು ನಿರ್ಮಾಪಕರೊಬ್ಬರ ಮನೆಯ ಮದುವೆ ಕಾರ್ಯಕ್ರಮದಲ್ಲಿ ಭಾಗಹಿಸಿದ್ದು ಮಾತ್ರ ಈ ವದಂತಿಗೆ, ಆರೋಪಕ್ಕೆ ಪುಷ್ಠಿ ಕೊಡುವಂತಿತ್ತು.

55
ದಳಪತಿ ವಿಜಯ್‌ ಸಂಸಾರದ ಕಥೆ ಏನು?

ದಳಪತಿ ವಿಜಯ್‌ ಸಂಸಾರದ ಕಥೆ ಏನಾಗಲಿದೆ? ಡಿವೋರ್ಸ್‌ ತಗೊಳ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories