ಡಿವೋರ್ಸ್‌ ಕೇಳಿರೋ ದಳಪತಿ ವಿಜಯ್‌ ಹೆಂಡ್ತಿ ಸಂಗೀತಾ ಸಾಮಾನ್ಯದವರಲ್ಲ! ಕೂತು ತಿನ್ನುವಷ್ಟಿದೆ ಅಪ್ಪನ ಆಸ್ತಿ!

Published : Mar 02, 2026, 04:45 PM IST

ನಟ ದಳಪತಿ ವಿಜಯ್‌ ಪತ್ನಿ ಸಂಗೀತಾ ಅವರು ಡಿವೋರ್ಸ್‌ಗಾಗಿ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಅಂದಹಾಗೆ ಸಂಗೀತಾ ಅವರು ಮೊದಲು ವಿಜಯ್‌ ಅಭಿಮಾನಿಯಾಗಿ, ಪ್ರೀತಿಸಿ ಮದುವೆಯಾಗಿದ್ದರು. ವಿಜಯ್‌ ಅವರಿಗೆ ಬೇರೆ ನಟಿಯ ಜೊತೆ ಅನೈತಿಕ ಸಂಬಂಧವಿದೆ ಎಂದು ಸಂಗೀತಾ ಹೇಳಿದ್ದರು. 

PREV
14
ವಿಜಯ್‌ಗೆ ಪತ್ರ ಬರೆಯುತ್ತಿದ್ದ ಸಂಗೀತಾ

80ರ ದಶಕದಿಂದ ವಿಜಯ್‌ ದಳಪತಿ ಅವರು ನಟನೆ ಆರಂಭಿಸಿ, ಹೀರೋ ಆಗಿದ್ದರು. ಅದಕ್ಕಿಂತ ಮುಂಚೆಯೇ ಲಂಡನ್‌ನ ಯಶಸ್ವಿ ಉದ್ಯಮಿ ಶ್ರೀಲಂಕಾ ಮೂಲದ ಅವರ ಸ್ವರ್ಣಲಿಂಗಂ ಮಗಳು ಸಂಗೀತಾ ಲಂಡನ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದಾಗಲೇ ವಿಜಯ್ ದೊಡ್ಡ ಅಭಿಮಾನಿಯಾಗಿದ್ದರು. ಅಲ್ಲಿಂದಲೇ ದಳಪತಿಗೆ ಸತತವಾಗಿ ಪತ್ರಗಳನ್ನು ಬರೆಯುತ್ತಾ, ಅವರ ಸಿನಿಮಾ ಜರ್ನಿಯಲ್ಲಿ ಭಾಗಿ ಆಗಿದ್ದರು.

24
ಅಭಿಮಾನವು ಪ್ರೀತಿ ಆಯ್ತು!

1996ರಲ್ಲಿ ತೆರೆಕಂಡ ವಿಜಯ್‌ ಹಾಗೂ ಸಂಗೀತಾ ಮಾಧವನ್ ಅಭಿನಯದ 'ಪೂವೆ ಉನ್ನಕ್ಕಾಗ’ ಸಿನಿಮಾ ಯಶಸ್ಸಿಗೆ ಶುಭಾಶಯ ತಿಳಿಸಲು ಭಾರತಕ್ಕೆ ಬಂದಿದ್ದರು. ಆಗ ಇವರಿಬ್ಬರ ಪರಿಚಯ ಆಗಿ, ಸ್ನೇಹ, ಪ್ರೀತಿ ಉಂಟಾಗಿತ್ತು. ವಿಜಯ್‌ ಕೂಡ ಮನೆಯವರಿಗೆ ಸಂಗೀತಾ ಪರಿಚಯ ಮಾಡಿಸಿದ್ದರು. ಸಂಗೀತಾ ಹಿಂದು ಧರ್ಮಕ್ಕೆ ಸೇರಿದವರಾದ್ದರಿಂದ 1999ರಲ್ಲಿ ಹಿಂದು ಧರ್ಮದಂತೆ ಈ ಜೋಡಿ ಮದುವೆ ಆಯ್ತು.

34
ಹೆಂಡ್ತಿಯನ್ನು ಹೊಗಳಿದ್ದ ದಳಪತಿ ವಿಜಯ್

ಮಾಧ್ಯಮದ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳದ ಪತ್ನಿ ಸಂಗೀತಾ ಬಗ್ಗೆ 2004ರ ಕಾರ್ಯಕ್ರಮ ಒಂದರಲ್ಲಿ ನಟ ವಿಜಯ್ ಅವರೇ, `ನಾನೆಷ್ಟು ಚೆನ್ನಾಗಿದ್ದೀನಿ ಅಂತ ಗೊತ್ತಿಲ್ಲ. ಆದರೆ ನನಗಿಷ್ಟು ಚಾರ್ಮ್ ಬರಲು, ನಟಿಸಲು ನನ್ನಮ್ಮ ಹಾಗೂ ನನ್ನ ಪತ್ನಿ ಸಂಗೀತಾ ಕಾರಣ' ಎಂದು ಹೇಳಿದ್ದರು. 2021ರಿಂದ ವಿಜಯ್ ಹಾಗೂ ನಟಿಯೊಬ್ಬರ ಜತೆಗೆ ಅನೈತಿಕ ಸಂಬಂಧ ಇದೆ ಎನ್ನಲಾಗಿದೆ.‌ ಸಂಗೀತಾ ಮತ್ತು ವಿಜಯ್‌ ದಂಪತಿಗೆ ದೇಸನ್ ಸ೦ಜಯ್‌ ಹಾಗೂ ದಿವ್ಯಾ ಸಾಶಾ ಎಂಬ ಇಬ್ಬರು ಮಕ್ಕಳಿದ್ದಾರೆ.

44
ಆಸ್ತಿ ಎಷ್ಟು?

ತಂದೆ ಸ್ವರ್ಣಲಿಂಗಂ ನಡೆಸುವ ಬಿಸ್ಸೆಸ್ ಹಾಗೂ ಸಂಗೀತಾ ಆಸ್ತಿ ಮೌಲ್ಯವೇ 400 ಕೋಟಿ ರೂಪಾಯಿಗೂ ಅಧಿಕವಿದೆ. ಈಗ ಸಂಗೀತಾ ಅವರು ತವರು ಮನೆ ಸೇರಿಕೊಂಡು, ತಂದೆ ಬ್ಯುಸಿನೆಸ್‌ ನೋಡಿಕೊಳ್ತಿದ್ದಾರಂತೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories