ಮಗಳು ದಿಯಾ Graduation Photos ಶೇರ್‌ ಮಾಡಿದ ನಟ ಸೂರ್ಯ, ಜ್ಯೋತಿಕಾ!

Published : May 31, 2025, 10:28 AM ISTUpdated : Jun 02, 2025, 02:30 PM IST

ತಮಿಳು ನಟ ಸೂರ್ಯ, ಜ್ಯೋತಿಕಾ ತಮ್ಮ ಮಕ್ಕಳಾದ ದಿಯಾ ಮತ್ತು ದೇವ್ ಅವರ ಶಿಕ್ಷಣಕ್ಕಾಗಿ ಚೆನ್ನೈನಿಂದ ಮುಂಬೈಗೆ ಸ್ಥಳಾಂತರಗೊಂಡಿದ್ದಾರೆ. ಈಗ ಮಗಳು ಜ್ಯೋತಿಕಾ ಗ್ರ್ಯಾಜುವೇಶನ್‌ ಡೇ ದಿನ ದಂಪತಿ ಹೆಮ್ಮೆಯಿಂದ ಇವೆಂಟ್‌ನಲ್ಲಿ ಭಾಗಿಯಾಗಿದ್ದಾರೆ. 

PREV
17

ನಟ ಸೂರ್ಯ, ಜ್ಯೋತಿಕಾರ ಮಗಳು ದಿಯಾ ಇತ್ತೀಚೆಗೆ ಶಾಲಾ ಶಿಕ್ಷಣ ಮುಗಿಸಿದ್ದು, ಪದವಿ ಪ್ರದಾನ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

27

ತಮಿಳು ಚಿತ್ರರಂಗದಲ್ಲಿ ಸೂರ್ಯ ಒಬ್ಬ ಖ್ಯಾತ ನಟ. 'ಪೂವೆಲ್ಲಾಂ ಕೇಟ್ಟುಪ್ಪಾರ್', 'ಕಾಕ್ಕ ಕಾಕ್ಕ', 'ಸಿಲ್ಲುನು ಒರು ಕಾದಲ್', ‘ಮಾಯಾವಿ’ ಸಿನಿಮಾಗಳಲ್ಲಿ ಜ್ಯೋತಿಕಾ ಜೊತೆ ನಟಿಸಿದ್ದಾರೆ.

37

ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಇಬ್ಬರಿಗೂ ಪ್ರೀತಿ ಶುರುವಾಯಿತು. 2006 ರಲ್ಲಿ ಮದುವೆಯಾದರು. ದಿಯಾ ಎಂಬ ಮಗಳು ಮತ್ತು ದೇವ್ ಎಂಬ ಮಗ ಇದ್ದಾರೆ.

47

ದಿಯಾ ಮತ್ತು ದೇವ್ ಅವರ ಶಾಲಾ ಶಿಕ್ಷಣಕ್ಕಾಗಿ ಸೂರ್ಯ ಮತ್ತು ಜ್ಯೋತಿಕಾ ಚೆನ್ನೈನಿಂದ ಮುಂಬೈಗೆ ಸ್ಥಳಾಂತರಗೊಂಡರು. ಅಷ್ಟೇ ಅಲ್ಲದೆ ಜ್ಯೋತಿಕಾ ಕೂಡ ಈಗ ಬಾಲಿವುಡ್‌ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. 

57

ತಮಿಳುನಾಡಿನಲ್ಲಿ ಒಳ್ಳೆಯ ಶಾಲೆಗಳಿದ್ದರೂ ಮುಂಬೈಗೆ ಹೋಗುವ ಅಗತ್ಯವೇನಿತ್ತು ಎಂದು ಜನ ಪ್ರಶ್ನಿಸಿದರು. ಆದರೂ ಸೂರ್ಯ ಮಕ್ಕಳನ್ನು ಮುಂಬೈನಲ್ಲೇ ಓದಿಸುತ್ತಿದ್ದಾರೆ.

67

ಸೂರ್ಯ ಅವರ ಹಿರಿಯ ಮಗಳು ದಿಯಾ ಶಾಲಾ ಶಿಕ್ಷಣ ಮುಗಿಸಿದ್ದಾರೆ. ಪದವಿ ಪ್ರದಾನ ಸಮಾರಂಭ ನಡೆದಿದೆ. ಪ್ರಮಾಣಪತ್ರಗಳೊಂದಿಗೆ ಸೂರ್ಯ, ಜ್ಯೋತಿಕಾ, ಶಿವಕುಮಾರ್ ಸೇರಿದಂತೆ ಇಡೀ ಕುಟುಂಬ ಫೋಟೋ ತೆಗೆಸಿಕೊಂಡಿದೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

77

ದಿಯಾ ಅವರು ತಾಯಿ ಜ್ಯೋತಿಕಾ ಅವರಂತೆಯೇ ಇದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ದಿಯಾ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.

Read more Photos on
click me!

Recommended Stories