ಒಂದು ಕಾಲದ ಖ್ಯಾತ ಬರಹಗಾರ, ನಿರ್ದೇಶಕ ಡಿ.ವಿ. ನರಸರಾಜು ಅವರು ಅನೇಕ ಅದ್ಭುತ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ನಿರ್ದೇಶಕರಾಗಿದಕ್ಕಿಂತ ಬರಹಗಾರರಾಗಿ ಅವರು ಹೆಚ್ಚು ಖ್ಯಾತಿ ಪಡೆದಿದ್ದರು. ಯುಗಂಧರ್, ಯಮಗೋಲ, ಗುಂಡಮ್ಮ ಕಥೆ, ರಂಗುಲರಾಟ್ನಂ, ರಾಜಮಕುಟಂ, ರಾಮುಡು ಭೀಮುಡು ಮುಂತಾದ ಚಿತ್ರಗಳಿಗೆ ನರಸರಾಜು ಬರಹಗಾರರಾಗಿ ಕೆಲಸ ಮಾಡಿದ್ದಾರೆ. ನರಸರಾಜು ಕುಟುಂಬದೊಂದಿಗೆ ನಟ ಸುಮನ್ ಅವರಿಗೆ ಆತ್ಮೀಯ ಸಂಬಂಧವಿತ್ತು. ನರಸರಾಜು ಅವರ ಮೊಮ್ಮಗಳನ್ನೇ ಸುಮನ್ ವಿವಾಹವಾದರು. ಸುಮನ್ ಪತ್ನಿಯ ಹೆಸರು ಶಿರೀಷ ತಲ್ವಾರ್. ಅವರು ನರಸರಾಜು ಅವರ ಮಗಳ ಮಗಳು. ಶಿರೀಷ ಮತ್ತು ಸುಮನ್ ವಿವಾಹವು ತುಂಬಾ ನಾಟಕೀಯವಾಗಿ ನಡೆಯಿತು.