ನಾಯಕಿಯಾಗಿ ದಿವ್ಯಾ ಭಾರತಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದುಕೊಂಡಿದ್ದೆ. ಆಗ ಅವರು ತೆಲುಗಿನಲ್ಲಿ ಮೊದಲ ಚಿತ್ರ ಮಾತ್ರ ಮಾಡುತ್ತಿದ್ದರು. ಆ ಹುಡುಗಿಯನ್ನು ನಾಯಕಿಯಾಗಿ ತೆಗೆದುಕೊಳ್ಳಬೇಡಿ, ಶೂಟಿಂಗ್‌ನಿಂದ ಬೇಗ ಹೊರಟು ಹೋಗುತ್ತಾಳೆ ಎಂದು ಅನೇಕರು ದಿವ್ಯಾ ಭಾರತಿ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದರು. ಆದರೂ ದಿವ್ಯಾ ಭಾರತಿಯನ್ನೇ ನಾಯಕಿಯಾಗಿ ಆಯ್ಕೆ ಮಾಡಿಕೊಂಡೆ ಎಂದು ಮೋಹನ್ ಬಾಬು ಹೇಳಿದ್ದಾರೆ. ದಿವ್ಯಾ ಭಾರತಿ ಬದುಕಿದ್ದರೆ ಭಾರತದಲ್ಲೇ ಟಾಪ್ ನಾಯಕಿಯಾಗುತ್ತಿದ್ದರು ಎಂದು ಮೋಹನ್ ಬಾಬು ಹೇಳಿದ್ದಾರೆ. ಅಷ್ಟು ಪ್ರತಿಭೆ, ಸೌಂದರ್ಯ ಅವರದಾಗಿತ್ತು.