ನನಗೂ ಮದುವೆ ಆಸೆಯುಂಟು, ಆದ್ರೆ: ಮೊದಲ ಬಾರಿ ಪ್ರಭಾಸ್ ಜೊತೆಗಿನ ಸಂಬಂಧದ ಬಗ್ಗೆ ಅನುಷ್ಕಾ ಶೆಟ್ಟಿ ಮಾತು

Published : Jul 12, 2025, 07:47 PM IST

Anushka Shetty-Prabhas Relationship: ದಕ್ಷಿಣ ಭಾರತದ ಸೂಪರ್ ಲೇಡಿ ನಟಿ ಅನುಷ್ಕಾ ಶೆಟ್ಟಿ ತಮ್ಮ ಮದುವೆ ಬಗ್ಗೆ ಮೌನ ಮುರಿದಿದ್ದಾರೆ. ಪ್ರಭಾಸ್ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದು, ಮದುವೆ ಆಸೆ ಇದೆ ಎಂದಿದ್ದಾರೆ.

PREV
15
ಅನುಷ್ಕಾ ಶೆಟ್ಟಿ ಮದುವೆ ಯಾವಾಗ?

ದಕ್ಷಿಣ ಭಾರತದ ಸೂಪರ್ ಲೇಡಿ ನಟಿ, ಸ್ವೀಟಿ ಅನುಷ್ಕಾ ಶೆಟ್ಟಿ ಮದುವೆ ಯಾವಾಗ ಎಂಬವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಬಾಹುಬಲಿ ಸಹನಟ ಪ್ರಭಾಸ್ ಜೊತೆ ತಮ್ಮ ಹೆಸರು ಕೇಳಿ ಬರುತ್ತಿದ್ರೂ ಅನುಷ್ಕಾ ಶೆಟ್ಟಿ ಮಾತ್ರ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಪ್ರಭಾಸ್ ಮಾತ್ರ ನಾವು ಒಳ್ಳೆಯ ಫ್ರೆಂಡ್ಸ್ ಎಂದು ಗಾಸಿಪ್‌ಗೆ ತೆರೆ ಎಳೆಯುವ ಪ್ರಯತ್ನವನ್ನು ಯಾವಾಗಲೂ ಮಾಡುತ್ತಿರುತ್ತಾರೆ.

25
ದೇವಸೇನಾ ಮುಕ್ತ ಮಾತು

ಇದೀಗ ಮೊದಲ ಬಾರಿಗೆ ಪ್ರಭಾಸ್ ಜೊತೆಗಿನ ಸಂಬಂಧದ ಬಗ್ಗೆ ಸ್ವೀಟಿ ದೇವಸೇನಾ ಅನುಷ್ಕಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಮದುವೆ, ಡೇಟಿಂಗ್ ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆ 'ತೆಲುಗುವನ್‌'ಗೆ ನೀಡಿದ ಸಂದರ್ಶನದಲ್ಲಿ ಅನುಷ್ಕಾ ಶೆಟ್ಟಿ ಮಾತನಾಡಿದ್ದಾರೆ.

35
ನನಗೂ ಆಸೆ ಇದೆ

ಮದುವೆ ಮತ್ತು ಮಕ್ಕಳು ಮಾಡಿಕೊಳ್ಳಬೇಕು ಎಂಬ ಆಸೆ ನನಗೂ ಇದೆ. ಆದ್ರೆ ನಾನು ಸೂಕ್ಷ್ಮವಾಗಿದ್ದು, ನನ್ನ ಎಲ್ಲಾ ನೋವುಗಳನ್ನು ಹಂಚಿಕೊಳ್ಳುವ ವ್ಯಕ್ತಿಯನ್ನು ಹುಡುಕುತ್ತಿದ್ದೇನೆ. ನನ್ನ ಎಲ್ಲಾ ಭಾವನೆಗಳನ್ನು ಸ್ಪಂದಿಸುವ ಸಂಗಾತಿಯಾಗಬೇಕೆಂದು ಬಯಸುತ್ತೇನೆ. ನಾನು ಕುಟುಂಬದ ಜೊತೆಯಲ್ಲಿರಬೇಕೆಂದು ಬಯಸುವ ಹೆಣ್ಣು ಎಂದು ಅನುಷ್ಕಾ ಶೆಟ್ಟಿ ಹೇಳಿಕೊಂಡಿದ್ದಾರೆ.

45
ನಮ್ಮ ಭಾವನೆಗಳು...

ಪ್ರಭಾಸ್ ಮತ್ತು ನನ್ನ ಜೋಡಿ ಪರದೆ ಮೇಲೆ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಅದಕ್ಕಾಗಿ ನಮ್ಮಿಬ್ಬರ ಹೆಸರು ಜೊತೆಯಾಗಿ ಪದೇ ಪದೇ ಕೇಳಿ ಬರುತ್ತಿರುತ್ತದೆ. ಒಂದು ವೇಳೆ ನಮ್ಮಿಬ್ಬರ ನಡುವೆ ಏನಾದ್ರೂ ಇದ್ದಿದ್ರೆ ಇಷ್ಟೊತ್ತಿಗಾಗಲೇ ಎಲ್ಲರಿಗೂ ಗೊತ್ತಾಗುತ್ತಿತ್ತು. ನಾವಿಬ್ಬರು ಎಂದಿಗೂ ನಮ್ಮ ಭಾವನೆಗಳನ್ನು ಮರೆಮಾಡುವವರಲ್ಲ ಎಂದು ಅನುಷ್ಕಾ ಹೇಳಿದ್ದಾರೆ.

55
ಪ್ರಭಾಸ್ ಸ್ಪಷ್ಟನೆ

ಈ ಹಿಂದೆ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಭಾಸ್, ಯಾರಾದರೂ ಒಬ್ಬರ ಜೊತೆಯಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದ್ರೆ ಇಂತಹ ಗಾಸಿಪ್ ಕೇಳಿ ಬರುತ್ತವೆ. ತರೆ ಮೇಲೆ ನಮ್ಮನ್ನು ನೋಡಿರುವ ಅಭಿಮಾನಿಗಳು, ನಾವು ನಿಜ ಜೀವನದಲ್ಲಿಯೂ ಒಂದಾಗಲಿ ಎಂದು ಬಯಸುತ್ತಾರೆ. ಸಿನಿಮಾ ಮತ್ತು ಜೀವನ ತುಂಬಾ ಭಿನ್ನ ಎಂದು ಹೇಳುವ ಮೂಲಕ ಎಲ್ಲಾ ಗಾಸಿಪ್‌ಗೆ ತೆರೆ ಎಳೆದಿದ್ದರು.

Read more Photos on
click me!

Recommended Stories