ಒಂದೇ ದಿನದಲ್ಲಿ ಎರಡು ಮದುವೆಯಾದ ಕೀರ್ತಿ ಸುರೇಶ್? ಲಿಪ್ ಲಾಕ್ ಫೋಟೋ ವೈರಲ್!

Published : Dec 16, 2024, 10:44 AM ISTUpdated : Dec 16, 2024, 11:56 AM IST

ನಟಿ ಕೀರ್ತಿ ಸುರೇಶ್ ತಮ್ಮ ಪ್ರಿಯಕರ ಆಂಟನಿ ಥಟ್ಟಿಲ್ ಅವರನ್ನು ಡಿಸೆಂಬರ್ 12 ರಂದು ವಿವಾಹವಾದರು. ಕೀರ್ತಿ ಹಿಂದೂ ಕುಟುಂಬಕ್ಕೆ ಸೇರಿದವರು. ಆಂಟನಿ ಕ್ರಿಶ್ಚಿಯನ್. ಹೀಗಾಗಿ ಅವರಿಗೆ ಒಂದೇ ದಿನದಲ್ಲಿ ಎರಡೂ ಕುಟುಂಬಗಳ ಸಂಪ್ರದಾಯದ ಪ್ರಕಾರ ಎರಡು ಬಾರಿ ವಿವಾಹ ನಡೆದಿದೆ.

PREV
15
ಒಂದೇ ದಿನದಲ್ಲಿ ಎರಡು ಮದುವೆಯಾದ ಕೀರ್ತಿ ಸುರೇಶ್? ಲಿಪ್ ಲಾಕ್ ಫೋಟೋ ವೈರಲ್!
ಕೀರ್ತಿ ಸುರೇಶ್ ವಿವಾಹ

ಕೀರ್ತಿ ಸುರೇಶ್ ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲಿ ಮುಂಚೂಣಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಬಹುಕಾಲದ ಗೆಳೆಯನೊಂದಿಗೆ ಗೋವಾದಲ್ಲಿ ಡಿಸೆಂಬರ್ 12 ರಂದು ಮದುವೆಯಾದರು.

25
ಕೀರ್ತಿ & ಆಂಟನಿ ಥಟ್ಟಿಲ್ ವಿವಾಹ

ಕೀರ್ತಿ ತಮ್ಮ ದೀರ್ಘಕಾಲದ ಗೆಳೆಯ ಆಂಟನಿ ಥಟ್ಟಿಲ್ ಅವರನ್ನು ವಿವಾಹ ಅದ್ದೂರಿಯಾಗಿ ನಡೆಯಿತು.. ದುಬೈ ಮೂಲದ ಉದ್ಯಮಿಯಾಗಿರುವ ಆಂಟನಿ ಥಟ್ಟಿಲ್ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

35
ಗೋವಾದಲ್ಲಿ ಕೀರ್ತಿ ವಿವಾಹ

ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಭಾಗವಹಿಸಿದ್ದ ಈ ವಿವಾಹವು ಗೋವಾದಲ್ಲಿ ಅದ್ದೂರಿಯಾಗಿ ನೆರವೇರಿತು. ನಟ ವಿಜಯ್, ನಟಿ ತ್ರಿಷಾ ಸೇರಿದಂತೆ ಹಲವು ಸಿನಿಮಾ ತಾರೆಯರು ಭಾಗವಹಿಸಿದ್ದರು.

45
ಕೀರ್ತಿ ಸುರೇಶ್

ಕೀರ್ತಿ ಸುರೇಶ್ - ಆಂಟನಿ ಥಟ್ಟಿಲ್ ಅವರಿಗೆ ಅಯ್ಯಂಗಾರ್ ಬ್ರಾಹ್ಮಣ ಕುಟುಂಬದ ಸಂಪ್ರದಾಯದಂತೆ ವಿವಾಹ ನೆರವೇರಿತು. ಈ ವಿವಾಹದ ಫೋಟೋಗಳು ವೈರಲ್ ಆಗಿವೆ. ಕೀರ್ತಿ ಸುರೇಶ್ ಸೀರೆಯುಟ್ಟು ಮದುಮಗಳಾಗಿ ಕಂಗೊಳಿಸುತ್ತಿದ್ದಾರೆ. ಆಂಟನಿ ವೇಷ್ಟಿ ಧರಿಸಿ ಬ್ರಾಹ್ಮಣ ವರನಂತೆ ಕಾಣಿಸಿಕೊಂಡಿದ್ದಾರೆ.

55
ಕೀರ್ತಿ ಸುರೇಶ್

ಬ್ರಾಹ್ಮಣ ಸಂಪ್ರದಾಯದಲ್ಲಿ ವಿವಾಹವಾದ ಅದೇ ದಿನ ಸಂಜೆ ಆಂಟನಿ ಕುಟುಂಬದ ಕ್ರಿಶ್ಚಿಯನ್ ಸಂಪ್ರದಾಯದಂತೆಯೂ ಮತ್ತೊಮ್ಮೆ ವಿವಾಹ ನೆರವೇರಿತು. ಇದರಲ್ಲಿ ಕೀರ್ತಿ ಬಿಳಿ ಉಡುಪಿನಲ್ಲಿ ಮಿಂಚುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎರಡೂ ವಿವಾಹದ ಫೋಟೋಗಳು ವೈರಲ್ ಆಗಿವೆ.

click me!

Recommended Stories