ನಟ ಮೋಹನ್‌ಲಾಲ್‌ಗೆ ಪ್ರತಿಷ್ಠಿತ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಿಸಿದ ಕೇಂದ್ರ ಸರ್ಕಾರ

Published : Sep 20, 2025, 07:28 PM IST

ನಟ ಮೋಹನ್‌ಲಾಲ್‌ಗೆ ಪ್ರತಿಷ್ಠಿತ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಿಸಿದ ಕೇಂದ್ರ ಸರ್ಕಾರ, 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ ನಟನಿಗೆ ಶ್ರೇಷ್ಠ ಗೌರವ ಸಂದಿದೆ.ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಲಾಗಿದೆ.

PREV
15
ಮೋಹನ್‌ಲಾಲ್‌ಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ

ಮೋಹನ್‌ಲಾಲ್‌ಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ

ಮಲೆಯಾಳಂ ಸೂಪರ್ ಸ್ಟಾರ್ ಮೋಹನ್‌ಲಾಲ್‌ಗೆ ಪ್ರತಿಷ್ಠಿತ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಸಿನಿಮಾದ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಘೋಷಿಸಿದೆ. 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ನಟ, ಹಲವು ಸೂಪರ್ ಹಿಟ್ ಸಿನಿಮಾ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

25
ಮೋಹನ್‌ಲಾಲ್ ಸಿನಿಮಾ ಪಯಣ ಹಲವರಿಗೆ ಸ್ಪೂರ್ತಿ

ಮೋಹನ್‌ಲಾಲ್ ಸಿನಿಮಾ ಪಯಣ ಹಲವರಿಗೆ ಸ್ಪೂರ್ತಿ

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಯ ಈ ಕುರಿತು ಪ್ರಕಟಣೆ ಹೊರಡಿಸಿದೆ. ದಾದಾಸಾಹೇಬ್ ಪಾಲ್ಕೆ ಆಯ್ಕೆ ಸಮಿತಿ ಕೇಂದ್ರಕ್ಕೆ ಮೋಹನ್‌ಲಾಲ್ ಹೆಸರು ಶಿಫಾರಸು ಮಾಡಿತ್ತು. ಈ ಶಿಫಾರಸಿನಂತೆ ಭಾರತ ಸರ್ಕಾರ ನಟ ಮೋಹನ್‌ಲಾಲ್‌ಗೆ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ 2023 ನೀಡುತ್ತಿದೆ. ಮೋಹನ್‌ಲಾಲ್ ಸಿನಿಮಾ ಪಯಣ ಹಲವರಿಗೆ ಸ್ಪೂರ್ತಿಯಾಗಿದೆ. ನಟ, ನಿರ್ದೇಶಕ ಹಾಗೂ ನಿರ್ಮಾಪಕ ಮೋಹನ್‌ಲಾಲ್‌ಗೆ ಪ್ರತಿಷ್ಠಿತ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.

35
ಸೆಪ್ಟೆಂಬರ್ 23ಕ್ಕೆ ಪ್ರಶಸ್ತಿ ಪ್ರಧಾನ

ಸೆಪ್ಟೆಂಬರ್ 23ಕ್ಕೆ ಪ್ರಶಸ್ತಿ ಪ್ರಧಾನ

ಮೋಹನ್‌ಲಾಲ್‌ಗೆ ಪ್ರತಿಷ್ಠಿತ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಸೆಪ್ಟೆಂಬರ್ 23ರಂದು ಪ್ರಧಾನ ಮಾಡಲಾಗುತ್ತದೆ. 71ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮೋಹನ್‌ಲಾಲ್‌ಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ ಎಂದು ಕೇಂದ್ರ ಪ್ರಸಾರ ಮತ್ತು ಮಾಹಿತಿ ಸಚಿವಾಲಯ ಹೇಳಿದೆ.

45
ಹಲವು ಭಾಷೆಗಳಲ್ಲಿ ಅಭಿನಯ

ಹಲವು ಭಾಷೆಗಳಲ್ಲಿ ಅಭಿನಯ

ಮಲೆಯಾಳಂ, ತಮಿಳು, ತೆಲುಗು, ಕನ್ನಡ, ಹಿಂದಿ ಭಾಷೆಗಳ ಸಿನಿಮಾದಲ್ಲಿ ಅಭಿನಯಿಸಿರುವ ಮೋಹನ್‌ಲಾಲ್, ಇತ್ತೀಚೆಗೆ ಎಲ್2 ಎಂಪುರಾನ್ ಸೇರಿದಂತೆ ಹಲವು ಸಿನಿಮಾ ನೀಡಿದ್ದರು. ಮೋಹನ್‌ಲಾಲ್ ಅಭಿನಯಿಸುತ್ತಿರುವ ವೃಷಭಾ ಸಿನಿಮಾ ಬಹುನಿರೀಕ್ಷಿತ ಸಿನಿಮಾ ಆಗಿದೆ. ದಕ್ಷಿಣ ಭಾರತ ಮಾತ್ರವಲ್ಲ, ಉತ್ತರ ಭಾರತದಲ್ಲೂ ಮೋಹನ್‌ಲಾಲ್ ಜನಪ್ರಿಯ ನಟರಾಗಿದ್ದಾರೆ.

55
ಮೋದಿ ಅಭಿನಂದನೆ

ಮೋದಿ ಅಭಿನಂದನೆ

ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಮೋಹನ್‌ಲಾಲ್‌ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ವಿಶೇಷ ಹಾಗೂ ಅಪ್ರತಿಮ ಕಲಾವಿದ ಮೋಹನ್‌ಲಾಲ್‌ಗೆ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Read more Photos on
click me!

Recommended Stories