ಮಜ್ಜಿಗೆಗೋಸ್ಕರ 3000 ಎಕರೆ ಜಮೀನು ಬರೆದುಕೊಟ್ಟ ಪ್ರಖ್ಯಾತ ನಟನ ಅಜ್ಜ! ಯಾರದು?

Published : Mar 08, 2026, 03:27 PM IST

Krishnam Raju Family: ರೆಬೆಲ್ ಸ್ಟಾರ್ ಕೃಷ್ಣರಾಜು ರಾಜಮನೆತನದವರು. ಅವರ ಅಜ್ಜ, ಮೊಗಲ್ತೂರು ಮಹಾರಾಜ, ತೆಲುಗಿನ ಸ್ಟಾರ್ ನಿರ್ದೇಶಕರೊಬ್ಬರ ಕುಟುಂಬಕ್ಕೆ ಬರೋಬ್ಬರಿ 3000 ಎಕರೆ ಜಮೀನು ಬರೆದುಕೊಟ್ಟಿದ್ದರಂತೆ. ಇದರ ಹಿಂದಿನ ಕಾರಣ ಕೇಳಿದ್ರೆ ನೀವು ಅಚ್ಚರಿಪಡ್ತೀರಾ. ಈ ಬಗ್ಗೆ ಮಾಹಿತಿ ಇಲ್ಲಿದೆ. 

PREV
14
ರಾಜಮನೆತನದ ನಟ

ಕೃಷ್ಣಂರಾಜು ರಾಜಮನೆತನದವರು. ಅವರ ಹಿಂದಿನ ಹತ್ತು ತಲೆಮಾರುಗಳು ರಾಜರಾಗಿದ್ದರು. ಸುಮಾರು ಒಂಬತ್ತು ಸಂಸ್ಥಾನಗಳನ್ನು ಅವರು ಆಳುತ್ತಿದ್ದರು. ಈ ಸಂಸ್ಥಾನಗಳು ನಿಜಾಂ ನವಾಬರ ಅಧೀನದಲ್ಲಿದ್ದವು. ನಂತರ ರಾಜರ ಕಾಲ ಮುಗಿದು, ಕೃಷ್ಣಂರಾಜು ಕುಟುಂಬ ಎಲ್ಲರೊಂದಿಗೆ ಬೆರೆಯಿತು. ಆದರೆ, ಸಹಾಯ ಮಾಡುವ ಗುಣ ಮಾತ್ರ ಹಾಗೆಯೇ ಉಳಿದುಕೊಂಡಿದೆ.

24
ಸಾವಿರಾರು ಎಕರೆ ಜಮೀನು ಕೊಟ್ರು

ಕೃಷ್ಣಂರಾಜು ಹಾಗೂ ಪ್ರಭಾಸ್ ಇಬ್ಬರೂ ಮನೆಗೆ ಬಂದವರಿಗೆ ಭರ್ಜರಿ ಭೋಜನ ನೀಡದೇ ಕಳುಹಿಸುವುದಿಲ್ಲ. ಈ ಗುಣ ಅವರಿಗೆ ವಂಶಪಾರಂಪರ್ಯವಾಗಿ ಬಂದಿದೆ. 

ಇದೇ ಔದಾರ್ಯದ ಗುಣದಿಂದ ಕೃಷ್ಣಂರಾಜು ಅವರ ಅಜ್ಜ, ಸ್ಟಾರ್ ನಿರ್ದೇಶಕರೊಬ್ಬರ ಕುಟುಂಬಕ್ಕೆ ಸಾವಿರಾರು ಎಕರೆ ಜಮೀನು ನೀಡಿದ್ದರು. ಈ ವಿಚಾರವನ್ನು ನಿರ್ದೇಶಕ ರಾಜಾ ವನ್ನೆಂರೆಡ್ಡಿ ಐಡ್ರೀಮ್‌ಗೆ ನೀಡಿದ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

34
ಅಂದು ಏನಾಯ್ತು?

ಕೃಷ್ಣಂರಾಜು ಅವರ ಅಜ್ಜ ಮೊಗಲ್ತೂರು ಮಹಾರಾಜರಾಗಿದ್ದರು. ನಿರ್ದೇಶಕ ರಾಜಾ ವನ್ನೆಂರೆಡ್ಡಿ ಅವರ ಹತ್ತು ತಲೆಮಾರಿನ ಹಿಂದಿನ ಪೂರ್ವಜರು, ಈ ಮಹಾರಾಜರಿಗೆ ಸ್ನೇಹಿತರಾಗಿದ್ದರು. ಅವರು ದನಕರುಗಳನ್ನು ಕಾಯುತ್ತಾ ಊರೂರು ಸುತ್ತುವಾಗ, ಒಮ್ಮೆ ಮೊಗಲ್ತೂರಿಗೆ ಬಂದಿದ್ದರು. ಆಗ ರಾಜನಿಗೆ ತಣ್ಣನೆಯ ಮಜ್ಜಿಗೆ ನೀಡಿದರು. ಆ ಮಜ್ಜಿಗೆ ಕುಡಿದ ರಾಜನಿಗೆ ಅದು ಬಹಳ ಇಷ್ಟವಾಯಿತು.

44
ಮಜ್ಜಿಗೆಗೋಸ್ಕರ ಹೀಗೆ ಮಾಡಿದ್ರು

ಮಜ್ಜಿಗೆಯ ರುಚಿಗೆ ಮರುಳಾದ ರಾಜ, ಪ್ರತಿದಿನ ಬಂದು ಕುಡಿಯುತ್ತಿದ್ದರು. ಹೀಗೆ ಸ್ನೇಹ ಬೆಳೆಯಿತು. ಕೆಲವು ದಿನಗಳ ನಂತರ, ವನ್ನೆಂರೆಡ್ಡಿ ಪೂರ್ವಜರು ಅಲ್ಲಿಂದ ಹೊರಟಾಗ, ರಾಜ ಅವರನ್ನು ತಡೆದರು. ತನಗೆ ಅಂತಹ ರುಚಿಕರ ಮಜ್ಜಿಗೆ ಮತ್ತೆ ಸಿಗುವುದಿಲ್ಲವೆಂದು ಹೇಳಿ, ಅವರನ್ನು ಅಲ್ಲೇ ಉಳಿಸಿಕೊಳ್ಳಲು 3000 ಎಕರೆ ಜಮೀನು ಬರೆದುಕೊಟ್ಟರು. ಆದರೆ, ಆ ಆಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ರಾಜಾ ವನ್ನೆಂರೆಡ್ಡಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories