ಸ್ವರ್ಗದಲ್ಲಿ ನಟ Dharmendra: ನಿಧನದ ಬಳಿಕ ಸ್ನೇಹಿತರ ಭೇಟಿ: ಮನಮುಟ್ಟುವ AI ವಿಡಿಯೋ ವೈರಲ್​

Published : Nov 25, 2025, 01:05 PM IST

ಹಿರಿಯ ನಟ ಧರ್ಮೇಂದ್ರ ಅವರ ನಿಧನದ ನಂತರ, ಅಕ್ಟೋಬರ್‌ನಲ್ಲಿ ನಿಧನರಾದ ಸತೀಶ್ ಷಾ, ಗೋವರ್ಧನ್ ಅರ್ಸಾನಿ ಮತ್ತು ಪಂಕಜ್ ಧೀರ್ ಅವರನ್ನು ಸ್ವರ್ಗದಲ್ಲಿ ಭೇಟಿಯಾಗುವ ಎಐ-ರಚಿತ ವಿಡಿಯೋವೊಂದು ರಚನೆಯಾಗಿದೆ. ಈ ನಾಲ್ವರು ನಟರು ಸ್ವರ್ಗದಲ್ಲಿ ಸಂತೋಷವಾಗಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

PREV
16
ಸಂಭ್ರಮದ ನಡುವೆಯೇ ನಿಧನ

ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ಅವರು ನಿನ್ನೆ (ನವೆಂಬರ್​ 24) ನಿಧನರಾದರು. ಅವರ ಶೋಲೆ ಚಿತ್ರದ 50ನೇ ವರ್ಷಾಚರಣೆಗೆ ಸಕಲ ಸಿದ್ಧತೆ ನಡೆದಿರುವ ಮುನ್ನವೇ ಅವರು ವಿಧಿವಶರಾಗಿ ಬಿಟ್ಟರು.

26
ನಾಲ್ವರು ಖ್ಯಾತ ನಟರನ್ನು ಕಳೆದುಕೊಂಡ ಬಾಲಿವುಡ್​

ಆದರೆ, ಬಾಲಿವುಡ್​ಗೆ ಈ ವರ್ಷ ತುಂಬಾ ಆಘಾತ ಕೊಟ್ಟಿದೆ. ಧರ್ಮೇಂದ್ರ ಅವರ ಅಗಲಿಕೆಯ ಮುನ್ನ ಕಳೆದ ಅಕ್ಟೋಬರ್​ನಲ್ಲಿ ಮೂವರು ಖ್ಯಾತ ಬಾಲಿವುಡ್​ನ ಹಿರಿಯ ನಟರ ನಿಧನವಾಗಿದೆ.

36
ಬಾಲಿವುಡ್​ಗೆ ಅಕ್ಟೋಬರ್​ ಶಾಕ್​

ಖ್ಯಾತ ಹಾಸ್ಯ ನಟರಾಗಿದ್ದ ಸತೀಶ್​ ಷಾ, ಗೋವರ್ಧನ್​ ಅರ್ಸಾನಿ ಹಾಗೂ ಮಹಾಭಾರತದಲ್ಲಿ ಕರ್ಣನ ಪಾತ್ರದ ಮೂಲಕ ಫೇಮಸ್​ ಆಗಿದ್ದ ನಟ ಪಂಕಜ್​ ಧೀರ್​ ಅವರು ಅಕ್ಟೋಬರ್​ನಲ್ಲಿ ಇಹಲೋಕ ತ್ಯಜಿಸಿದ್ದಾರೆ.

46
ಮೂವರು ನಟರ ನಿಧನ

ಅಕ್ಟೋಬರ್​ 15ರಂದು ಪಂಕಜ್​ ಧೀರ್​, ಅಕ್ಟೊಭರ್​ 20ರಂದು ಗೋವರ್ಧನ್​ ಅರ್ಸಾನಿ ಹಾಗೂ 25ರಂದು ಸತೀಶ್​ ಷಾ ಅವರು ಮೃತಪಟ್ಟಿದ್ದಾರೆ.

56
ಎಐ ವಿಡಿಯೋ

ಈಗ ಈ ಎಲ್ಲಾ ನಟರು ಸ್ವರ್ಗದಲ್ಲಿ ಭೇಟಿಯಾಗುವ ರೀತಿಯ ಎಐ ವಿಡಿಯೋ ರಚಿಸಲಾಗಿದೆ. ಧರ್ಮೇಂದ್ರ ಅವರು ಆಸ್ಪತ್ರೆಯ ಹಾಸಿಗೆಯಿಂದ ಮೇಲೆ ಎದ್ದು, ಸ್ವರ್ಗದ ಹಾದಿಯಲ್ಲಿ ಇದ್ದಾರೆ. ಅಲ್ಲಿ ಅವರನ್ನು ಕಳೆದ ತಿಂಗಳು ನಿಧನರಾದ ನಟರು ಸ್ವಾಗತಿಸುತ್ತಿರುವಂತೆ ವಿಡಿಯೋ ಮಾಡಲಾಗಿದೆ.

66
ಅಭಿಮಾನಿಗಳ ಹಾರೈಕೆ

ಇಲ್ಲಿ ಈ ನಾಲ್ವರು ನಟರು ಸೇರಿ ಮಾತುಕತೆ ನಡೆಸುತ್ತಿರುವಂತೆ ತೋರಿಸಲಾಗಿದೆ. ನಾಲ್ವರು ನಟರು ಸ್ವರ್ಗದಲ್ಲಿ ಇದೇ ರೀತಿ ಖುಷಿಯಾಗಿ ಇರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಮಿಸ್ಟರ್​ ಹೆಲ್​ರಾಕರ್​ ಎನ್ನುವವರು ಶೇರ್​ ಮಾಡಿರುವ ಈ ವಿಡಿಯೋದ ಲಿಂಕ್​ ಇಲ್ಲಿದೆ

https://www.instagram.com/reel/DRcI5CFjxTn/?utm_source=ig_web_copy_link&igsh=NTc4MTIwNjQ2YQ==

Read more Photos on
click me!

Recommended Stories