100 ಏಕರೆ ಫಾರ್ಮ್ ಹೌಸ್, ರೆಸ್ಟೋರೆಂಟ್, ಐಷಾರಾಮಿ ಕಾರು; ನಟ ಧರ್ಮೇಂದ್ರ ಬಿಟ್ಟುಹೋದ ಆಸ್ತಿ, ಧರ್ಮೇಂದ್ರ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಇವರ ಒಟ್ಟು ಆಸ್ತಿ ಎಷ್ಟಿದೆ? ಕುಟುಂಬದ ಆಸ್ತಿ ಎಷ್ಟು?
ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನರಾಗಿದ್ದಾರೆ. ಹಲವು ದಿನಗಳಿಂದ ತೀವ್ರ ಆರೋಗ್ಯ ಸಮಸ್ಯೆ ಎದುರಿಸಿದ ಧರ್ಮೇಂದ್ರ 89ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 300ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಧರ್ಮೇಂದ್ರ ಭಾರತ ಕಂಡ ಅತ್ಯುನ್ನತ ನಟ. ಧರ್ಮೇಂದ್ರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ದಿಗ್ಗಜರು ಸಂತಾಪ ಸೂಚಿಸಿದ್ದಾರೆ. ಧರ್ಮೇಂದ್ರ ನಿಧನದಿಂದ ಅವರು ಬಿಟ್ಟು ಹೋದ ಆಸ್ತಿಯೆಷ್ಟು?
26
100 ಏಕರೆ ಫಾರ್ಮ್ ಹೌಸ್
ಇಡೀ ದೇಶವೇ ಮೆಚ್ಚಿಕೊಂಡ ನಟ ಧರ್ಮೇಂದ್ರ. ತಮ್ಮ ಕರಿಯರ್ ಉತ್ತುಂಗದಲ್ಲಿ ಹಲವು ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. ಈ ಪೈಕಿ ಅತೀ ದೊಡ್ಡ ಆಸ್ತಿ, ಬರೋಬ್ಬರಿ 100 ಏಕರೆಯಲ್ಲಿರುವ ಫಾರ್ಮ್ ಹೌಸ್. ಲೋನವಾಲದಲ್ಲಿರುವ ಧರ್ಮೇಂದ್ರ ಫಾರ್ಮ್ ಹೌಸ್ ಮೌಲ್ಯ ಊಹೆಗೂ ನಿಲುಕುತ್ತಿಲ್ಲ. ಈ ಫಾರ್ಮ್ 100 ಏಕರೆ ಪ್ರದೇಶದಲ್ಲಿದೆ. ತೋಟ, ಹೂವಿನ ಗಾರ್ಡನ್, ಸ್ವಿಮ್ಮಿಂಗ್ ಪೂಲ್ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನೊಳಗೊಂಡ ಈ ಫಾರ್ಮ್ ಹೌಸ್ ಅತ್ಯಂತ ದುಬಾರಿ ಬೆಲೆಯದ್ದಾಗಿದೆ.
36
ಧರ್ಮೇಂದ್ರ ಒಟ್ಟು ಆಸ್ತಿ
100 ಏಕರೆ ಫಾರ್ಮ್ ಹೌಸ್ ಸದ್ಯದ ಮೌಲ್ಯವೆಷ್ಟು ಅನ್ನೋ ಚರ್ಚೆಗಳು ನಡೆಯುತ್ತಿದೆ. ಇದನ್ನು ಹೊರತುಪಡಿಸಿದರೆ ಧರ್ಮೇಂದ್ರ ಒಟ್ಟು ಆಸ್ತಿ 350 ರಿಂದ 450 ಕೋಟಿ ರೂಪಾಯಿ. ಪ್ರತಿ ತಿಂಗಳು ಧರ್ಮೇಂದ್ರ ತಮ್ಮ ಹೂಡಿಕೆಯಿಂದ ಲಕ್ಷ ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದರು. ಇವರ ಕುಟುಂಬದ ಒಟ್ಟು ಆಸ್ತಿ ಸರಿಸುಮಾರು 1,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಧರ್ಮೇಂದ್ರ ತಮ್ಮ ಕರಿಯರ್ ಸಮಯದಲ್ಲಿ ವಿಜಯ್ತ ಫಿಲ್ಮ್ಸ್ ಅನ್ನೋ ಪ್ರೊಡಕ್ಷನ್ ಕಂಪನಿ ಆರಂಭಿಸಿದ್ದಾರೆ. ಹಲವು ಸನಿಮಾಗಳನ್ನು ನಿರ್ಮಾಣ ಮಾಡಿದೆ. ಮಹಾರಾಷ್ಟ್ರದಲ್ಲಿ ಧರ್ಮೇಂದ್ರ 17 ಕೋಟಿ ರೂಪಾಯಿ ಬೆಲೆಬಾಳುವ ನಿವೇಷನ ಹೊಂದಿದ್ದಾರೆ.
56
ರೆಸ್ಟೋರೆಂಟ್, ರಿಯಲ್ ಎಸ್ಟೇಟ್
ಧರ್ಮೇಂದ್ರ ರಿಯಲ್ ಎಸ್ಟೇಟ್ ಹಾಗೂ ರೆಸ್ಟೋರೆಂಟ್‌ಗಳಲ್ಲೂ ಧರ್ಮೇಂದ್ರ ಹೂಡಿಕೆ ಮಾಡಿದ್ದಾರೆ. ಅತೀ ಹೆಚ್ಚು ಜನರನ್ನು ಆಕರ್ಷಿಸುತ್ತಿರುವ ಗರಂ ಧರಮ್ ಢಾಬಾ ಎಂಬ ರೆಸ್ಟೋರೆಂಟ್ ಧರ್ಮೇಂದ್ರಗೆ ಸೇರಿದ್ದು. ಈ ರೆಸ್ಟೋರೆಂಟ್‌ನಿಂದ ಉತ್ತಮ ಆದಾಯಗಳಿಸುತ್ತಿದ್ದರು. ಕರ್ನಲ್ ಹೆದ್ದಾರಿಯಲ್ಲಿರುವ ಹೀ ಮ್ಯಾನ್ ಅನ್ನೋ ರೆಸ್ಟೋರೆಂಟ್ ಕೂಡ ಹೊಂದಿದ್ದಾರೆ.
ರೆಸ್ಟೋರೆಂಟ್, ರಿಯಲ್ ಎಸ್ಟೇಟ್
66
ಧರ್ಮೇಂದ್ರ ಬಳಿ ಇದೆ ಐಷಾರಾಮಿ ಕಾರು
ನಟ ಧರ್ಮೇಂದ್ರ ಬಳಿಕ ಹಲವು ಐಷಾರಾಮಿ ಕಾರುಗಳಿವೆ. ಈ ಪೈಕಿ ತಮ್ಮ ಕರಿಯರ್ ಉತ್ತುಂಗದಲ್ಲಿ ಬಳಸುತ್ತಿದ್ದ ವಿಂಟೇಜ್ ಫಿಯೆಟ್ ಕಾರನ್ನು ಹಾಗೇ ಉಳಿಸಿಕೊಂಡಿದ್ದಾರೆ. ಇದರ ಜೊತೆಗೆ ರೇಂಜ್ ರೋವರ್ ಇವೋಕ್, ಮರ್ಸಿಡೀಸ್ ಬೆಂಜ್ SL500 ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.