2500 ಕೋಟಿ ರೂ ಆಸ್ತಿ ಇದ್ರೂ, ಒಂದು ಸಿನಿಮಾಕ್ಕೆ 100 ಕೋಟಿ ತಗೊಂಡ್ರೂ ಅಕ್ಷಯ್‌ ಕುಮಾರ್‌ಗೆ ಬಟ್ಟೆ ಗತಿ ಇಲ್ವಾ?

Published : Apr 07, 2026, 05:16 PM IST

Actor Akshay Kumar: ಬಾಲಿವುಡ್ ನಟ ಅಕ್ಷಯ್ ಕುಮಾರ್, ನಿರ್ದೇಶಕ ಪ್ರಿಯದರ್ಶನ್ ಅವರ 'ಭೂತ್ ಬಂಗ್ಲಾ' ಸಿನಿಮಾದ ಟ್ರೈಲರ್ ಲಾಂಚ್‌ಗೆ ಬಂದಿದ್ದರು. ಈ ವೇಳೆ ಅವರು ಹಾಕಿದ್ದ ಶರ್ಟ್ ನೋಡಿ ಜನ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.  

PREV
15
'ಭೂತ್ ಬಂಗ್ಲಾ' ಸಿನಿಮಾ

ಬಾಲಿವುಡ್‌ನ ಖಿಲಾಡಿ ಅಕ್ಷಯ್ ಕುಮಾರ್ ಸದ್ಯ ಒಂದು ದೊಡ್ಡ ಸಕ್ಸಸ್‌ಗಾಗಿ ಕಾಯುತ್ತಿದ್ದಾರೆ. ಒಂದ್ಕಾಲದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದ ಅಕ್ಕಿಗೆ, ಇತ್ತೀಚೆಗೆ ಸಾಲು ಸಾಲು ಸೋಲುಗಳು ಕಾಡಿವೆ. ಕೆಲವು ಸಿನಿಮಾಗಳು ಓಕೆ ಎನಿಸಿದ್ರೆ, ಇನ್ನು ಕೆಲವು ಹಾಕಿದ ಬಂಡವಾಳವನ್ನೂ ವಾಪಸ್ ತಂದುಕೊಟ್ಟಿಲ್ಲ. ಈ ಸೋಲುಗಳಿಂದ ಕಮ್‌ಬ್ಯಾಕ್ ಮಾಡಲು ಅಕ್ಷಯ್ ಕುಮಾರ್ ಈಗ ಹೊಸ ಸಿನಿಮಾ ಜೊತೆ ಬರ್ತಿದ್ದಾರೆ. 'ಭೂತ್ ಬಂಗ್ಲಾ' ಅನ್ನೋ ಈ ಚಿತ್ರವನ್ನು ಖ್ಯಾತ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶಿಸಿದ್ದಾರೆ.

25
ಹರಿದ ಡಿಸೈನ್

ಇತ್ತೀಚೆಗೆ 'ಭೂತ್ ಬಂಗ್ಲಾ' ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಅಕ್ಷಯ್ ಕುಮಾರ್ ಹಾಕಿಕೊಂಡು ಬಂದಿದ್ದ ಡ್ರೆಸ್ ಈಗ ಸಖತ್ ಟ್ರೋಲ್ ಆಗ್ತಿದೆ. ಕಪ್ಪು ಪ್ಯಾಂಟ್ ಜೊತೆ ಅವರು ಹಾಕಿದ್ದ ಹರಿದಂತಿರೋ ಶರ್ಟ್ ನೋಡಿ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. 

ಶರ್ಟ್‌ನ ಕೆಳಭಾಗದಲ್ಲಿ ಈ ರೀತಿ ಹರಿದ ಹಾಗೆ ಡಿಸೈನ್ ಮಾಡಲಾಗಿದೆ. ಇದರ ಜೊತೆ ಒಂದು ಟೈ ಕೂಡ ಕಟ್ಟಿಕೊಂಡಿದ್ದರು. ಈ ಕಾರ್ಯಕ್ರಮದ ವಿಡಿಯೋಗಳು ವೈರಲ್ ಆಗ್ತಿದ್ದಂತೆ, ಟ್ರೋಲ್‌ಗಳ ಸುರಿಮಳೆಯೇ ಶುರುವಾಗಿದೆ.

35
ಒಳ್ಳೆ ಶರ್ಟ್ ತಗೊಳ್ಳೋಕೆ ಈ ಸೂಪರ್‌ಸ್ಟಾರ್‌ಗೆ ಗತಿ ಇಲ್ವಾ?

'2500 ಕೋಟಿ ಆಸ್ತಿ ಇದೆ. ಒಂದು ಸಿನಿಮಾಗೆ 100 ಕೋಟಿ ಸಂಭಾವನೆ ತಗೋತಾರೆ. ಆದ್ರೂ ಒಂದು ಒಳ್ಳೆ ಶರ್ಟ್ ತಗೊಳ್ಳೋಕೆ ಈ ಸೂಪರ್‌ಸ್ಟಾರ್‌ಗೆ ಗತಿ ಇಲ್ವಾ?' ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 'ಇವ್ರು ಯಾವುದೋ ಬೇರೆ ಪ್ರಪಂಚದಲ್ಲಿ ಬದುಕುತ್ತಿದ್ದಾರೆ', 'ಸಿನಿಮಾ ಹೇಗಿರುತ್ತೆ ಅಂತ ಅಕ್ಷಯ್ ತನ್ನ ಶರ್ಟ್‌ನಲ್ಲೇ ತೋರಿಸಿಬಿಟ್ಟಿದ್ದಾರೆ', 'ದುಡ್ಡು ಸಿಕ್ಕರೆ ಎಂಥಾ ಬೇಕಾದ್ರೂ ಕಾಮಿಡಿ ಮಾಡೋಕೆ ರೆಡಿ ಇರ್ತಾರೆ' ಅಂತೆಲ್ಲಾ ಬಗೆಬಗೆಯ ಕಾಮೆಂಟ್‌ಗಳು ಹರಿದಾಡುತ್ತಿವೆ.

45
'ಭೂತ್ ಬಂಗ್ಲಾ' ಸಿನಿಮಾ ರಿಲೀಸ್‌ ಯಾವಾಗ?

ತುಂಬ ದಿನಗಳ ನಂತರ ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಜೋಡಿ 'ಭೂತ್ ಬಂಗ್ಲಾ' ಚಿತ್ರದ ಮೂಲಕ ಮತ್ತೆ ಒಂದಾಗಿದೆ. ಈ ಸಿನಿಮಾ ಏಪ್ರಿಲ್ 16 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. 2024ರ ಡಿಸೆಂಬರ್‌ನಲ್ಲಿ ಶುರುವಾದ ಈ ಸಿನಿಮಾದ ಶೂಟಿಂಗ್, 2025ರ ಮೇ ತಿಂಗಳಲ್ಲಿ ಮುಗಿದಿತ್ತು. 

55
ಹಾರರ್‌ ಕಾಮಿಡಿ ಸಿನಿಮಾ

ಇದು ಹಾರರ್-ಕಾಮಿಡಿ ಜಾನರ್‌ನ ಸಿನಿಮಾ. ಅಕ್ಷಯ್ ಕುಮಾರ್, ಶೋಭಾ ಕಪೂರ್ ಮತ್ತು ಏಕ್ತಾ ಕಪೂರ್ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆಕಾಶ್ ಕೌಶಿಕ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories