ಸಿನಿಮಾಗೆ ಸೇರುವ ಮೊದಲು ಎಲ್ಐಸಿ ಏಜೆಂಟ್ ಆಗಿದ್ದ ಅಭಿಷೇಕ್ ಬಚ್ಚನ್

First Published | Feb 6, 2022, 8:39 PM IST

ಅಮಿತಾಬ್ ಬಚ್ಚನ್ (Amitabh Bachchan) ಪುತ್ರ, ನಟ ಅಭಿಷೇಕ್ ಬಚ್ಚನ್ (Abhishek Bachchan) ಅವರಿಗೆ ಜನ್ಮದಿನ ಸಂಭ್ರಮ. ಫೆಬ್ರವರಿ 5 ರಂದು ಅಭಿಷೇಕ್ ತಮ್ಮ 46 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. . 2000ನೇ ಇಸವಿಯಲ್ಲಿ ರೆಫ್ಯೂಜಿ ಸಿನಿಮಾದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಅಭಿಷೇಕ್ ಬಚ್ಚನ್ ಹಾದಿ ಸುಲಭವಾಗಿರಲಿಲ್ಲ. ಅವರ ಮೊದಲ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತಿತು. 4 ವರ್ಷಗಳಲ್ಲಿ 17 ಫ್ಲಾಪ್ ಚಿತ್ರಗಳು ಅಭಿಷೇಕ್ ಖಾತೆಗೆ ಜಮಾ ಆಗಿವೆ. ಆದರೆ ಇದೆಲ್ಲವನ್ನೂ ಲೆಕ್ಕಿಸದೆ ಮುಂದೆ ಸಾಗುತ್ತಾ ತನ್ನದೇ ಆದ ಗುರುತನ್ನು ಸ್ಥಾಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈ ಬಾಲಿವುಡ್ (Bollywood) ನಟನ ಜೀವನಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ.

ವೈಫಲ್ಯದ ಹೊರತಾಗಿಯೂ, ಸವಾಲಿನ ಪಾತ್ರಕ್ಕಾಗಿ ಅಭಿಷೇಕ್ ತನ್ನ ಕಂಫರ್ಟ್‌ ಜೋನ್‌ನಿಂದ ಹೊರಬರಲು ಎಂದಿಗೂ ಹಿಂಜರಿಯಲಿಲ್ಲ. ಯುವದಿಂದ ಹಿಡಿದು ಗುರು ಹೀಗೆ ಹಲವಾರು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಮೂಲಕ ನಟ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

ಅಭಿಷೇಕ್ ಬಚ್ಚನ್ ಅವರ ಜನ್ಮ ಪ್ರಮಾಣಪತ್ರದಲ್ಲಿ ಅವರ ಹೆಸರು ಬೇರೆ ಇದೆ. ಈ ವಿಷಯ ತಿಳಿದವರು ಬಹಳ ಕಡಿಮೆ. ಅವರ ಬರ್ತ್‌ ಸರ್ಟಿಫಿಕೇಟ್‌ನಲ್ಲಿ ಅಭಿಷೇಕ್‌  ಹೆಸರು  ಬಾಬಾ ಬಚ್ಚನ್ ಎಂದು ಇದೆ. 

Tap to resize

Image: Abhishek BachchanInstagram

ಅಭಿಷೇಕ್ ಬಚ್ಚನ್ ಅವರಿಗೆ ಬಾಲ್ಯದಲ್ಲಿ ಡಿಸ್ಲೆಕ್ಸಿಯಾ ಕಾಯಿಲೆ ಇತ್ತು. ಇದು ಮಗುವಿಗೆ ಓದಲು, ಬರೆಯಲು ಮತ್ತು ಮಾತನಾಡಲು ಕಷ್ಟವಾಗುವ ಕಾಯಿಲೆಯಾಗಿದೆ. ಆದರೆ ನಟ ತನ್ನ ಸತತ ಪ್ರಯತ್ನದಿಂದ ಅದನ್ನೂ ಮೀರಿದರು  

ಅಭಿಷೇಕ್ ಬಚ್ಚನ್ ಹಿನ್ನೆಲೆ ಗಾಯಕ ಕೂಡ. ಅವರು 2005 ರಲ್ಲಿ ಬಿಡುಗಡೆಯಾದ ಬ್ಲಫ್‌ಮಾಸ್ಟರ್‌ ಸಿನಿಮಾದಲ್ಲಿ ಹಾಡನ್ನೂ ಹಾಡಿದರು. ಇದಲ್ಲದೆ,ಅಭಿಷೇಕ್ ಬಚ್ಚನ್  ಅವರು ಅನೇಕ ರಾಪ್‌ ಸಾಂಗ್‌ಗಳನ್ನು ಹಾಡಿದ್ದಾರೆ.

ಚಿತ್ರರಂಗಕ್ಕೆ ಸೇರುವ ಮುನ್ನ ಅಭಿಷೇಕ್ ಎಲ್ ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ನಂತರ ಅವರು ಬಾಲಿವುಡ್ ಪ್ರವೇಶಿಸುವ ಮನsu ಮಾಡಿದರು. 2000ನೇ ಇಸವಿಯಲ್ಲಿ ರೆಫ್ಯೂಜಿ ಸಿನಿಮಾದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಅಭಿಷೇಕ್ ಬಚ್ಚನ್ ಹಾದಿ ಸುಲಭವಾಗಿರಲಿಲ್ಲ. 

ಅಮಿತಾಭ್ ಬಚ್ಚನ್ ಅವರ ಡಾನ್ ಚಿತ್ರದ ಐಕಾನಿಕ್ ಸಾಂಗ್ 'ಖೈಕೆ ಪಾನ್ ಬನಾರಸ್ ವಾಲಾ' ನ ಡ್ಯಾನ್ಸ್‌ ಸ್ಟೆಪ್‌ಗಳನ್ನು ಅಭಿಷೇಕ್ ಬಚ್ಚನ್ ಬಾಲ್ಯ ಡ್ಯಾನ್ಸ್‌ನಿಂದ  ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತದೆ. ಅಭಿಷೇಕ್ ಖೇಲ್ ಖೇಲ್ ನಲ್ಲಿ ಆ ಡ್ಯಾನ್ಸ್ ಸ್ಟೆಪ್ ರಿಪೀಟ್‌ ಮಾಡಿದ್ದಾರೆ.
 

2004ರ ‘ಯುವ’ಸಿನಿಮಾದಲ್ಲಿನ ಅವರ ಅಭಿನಯ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಇದಾದ ನಂತರ  ಅವರು ಬಾಲಿವುಡ್‌ನಲ್ಲಿ ಗುರು, ಪಾ, ಧೂಮ್, ಸರ್ಕಾರ್‌, ದೋಸ್ತಾನ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 

ಪಾ ಚಿತ್ರದ ಕಾರಣದಿಂದಾಗಿ, ಅವರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಏಕೆಂದರೆ ಈ ಸಿನಿಮಾದಲ್ಲಿ ಅವರು ಅಮಿತಾಬ್ ಬಚ್ಚನ್ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ.

ಅಭಿಷೇಕ್ ಬಚ್ಚನ್ ಒಂದು ವಿಶೇಷವಾದ  ಹವ್ಯಾಸವನ್ನು ಹೊಂದಿದ್ದಾರೆ.  ಅದರ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ನಟನೆ ಮತ್ತು ಗಾಯನದ ಹೊರತಾಗಿ, ಅಭಿಷೇಕ್ ವಿವಿಧ ದೇಶಗಳ ಬೋರ್ಡಿಂಗ್ ಕಾರ್ಡ್‌ಗಳನ್ನು ಸಂಗ್ರಹಿಸಲು ಇಷ್ಟಪಡುತ್ತಾರೆ.

ಗುರು ಸಿನಿಮಾ ಸಮಯದಲ್ಲಿ ಅಭಿಷೇಕ್ ಜೀವನದಲ್ಲಿ ಐಶ್ವರ್ಯಾ ರೈ  ಬಂದರು. ಈ ಚಿತ್ರದ ಸೆಟ್‌ನಲ್ಲಿ ಅಭಿಷೇಕ್ ತಮ್ಮ ಸಹನಟಿ ಐಶ್ವರ್ಯಾ ಅವರಿಗೆ ಉಂಗುರ ತೊಡಿಸಿ ಪ್ರಪೋಸ್ ಮಾಡಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಇಬ್ಬರಿಗೂ ಆರಾಧ್ಯ ಎಂಬ ಮಗಳಿದ್ದಾಳೆ.

Latest Videos

click me!